Advertisement
ಗಾಳಿ ಬೆಳಕು ಇಲ್ಲದ ಮನೆಗಳಲ್ಲಿ ಜೀವನವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಮನುಷ್ಯ ಬದುಕುಳಿಯಲು ಗಾಳಿ ಬೆಳಕು ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲಗಳಾಗಿವೆ. ಆದ್ದರಿಂದ ನಾವು ವಾಸಿಸುವ ಮನೆಗಳಲ್ಲಿ ಗಾಳಿ ಹಾಗೂ ಸೂರ್ಯನ ಕಿರಣಗಳು ಒಳನುಸುಳುವುದು ಒಳ್ಳೆಯದು.
Related Articles
Advertisement
ಯಾವ ದಿಕ್ಕು ಬೆಳಕಿನ ಮೂಲವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ ದಿನದ ವಿವಿಧ ಸಮಯದಲ್ಲಿ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ದಿಕ್ಕುಗಳಿಗೆ ಸೂರ್ಯ ನೇರವಾಗಿ ತನ್ನ ಬೆಳಕನ್ನು ಚೆಲ್ಲುವುದರಿಂದ ಇಂತಹ ದಿಕ್ಕಿನೆಡೆಗೆ ಮನೆಯ ಬಾಗಿಲು, ಕಿಟಕಿಗಳನ್ನು ಇರಿಸುವುದು ಸಮಂಜಸ ಆಯ್ಕೆಯಾಗಿದೆ.
ಯಾವ ಅಂಶಗಳು ಮನೆಗೆ ಉತ್ತಮ ವೆಂಟಿಲೇಶನ್ ಹಾಗೂ ಸನ್‌ಲೈಟ್‌ಅನ್ನು ಹೊತ್ತುತರುತ್ತದೆಯೋ ಅಂತವುಗಳನ್ನು ಮನೆಯ ನಿರ್ಮಾಣದಲ್ಲಿ ಅಳವಡಿಸಿಕೊಳ್ಳುವುದನ್ನು ಮರೆಯಬೇಡಿ. ಬೆಳಕಿನ ಮೂಲವೇ ಆಗಿರುವ ಕಿಟಕಿಗಳಿಗೆ ಮನೆಯ ಯಾವುದೇ ಉಪಕರಣಗಳು ಅಡ್ಡಿಯಾಗದಿರಲಿ, ಫ್ರಿಜ್, ಕೂಲರ್, ಪೀಠೊಪಕರಣಗಳನ್ನು ಕಿಟಕಿಗೆ ಅಡ್ಡವಾಗಿಡುವುದನ್ನು ತಪ್ಪಿಸಿ.
ನಿಮ್ಮ ಬೆಡ್ ನ ತಲೆಯ ಭಾಗವನ್ನು ಕಿಟಕಿಗೆ ಇಡುವುದನ್ನು ತಪ್ಪಿಸಿ. ಇದಕ್ಕಾಗಿ ನೀವು ಆಯ್ಕೆ ಮಾಡುವ ಪೈಂಟ್‌ನ ಬಣ್ಣ ಒಂದು ರೀತಿಯ ಬೂಸ್ಟ್ ನೀಡುತ್ತದೆ, ತಿಳಿ ನೀಲಿ,ಗುಲಾಬಿಹಳಂತಹ ತಿಳಿ ಬಣ್ಣಗಳು ತಮ್ಮ ಮೇಲ್ಮೆ„ಮೇಲೆ ಬಿದ್ದ ಬೆಳಕನ್ನು ಪಸರಿಸುತ್ತವೆ. ಇವುಗಳಿಗೆ ಕ್ಯಾಂಪ್ಲಿಮೆಂಟ್ ನೀಡುವಂತಹ ತಿಳಿ ಬಣ್ಣದ ಕಿಟಕಿ ಪರದೆಗಳು ರೂಮ್ ಗಳಿಗೆ ಕತ್ತಲು ಆವರಿಸದಂತೆ ತಡೆಯುತ್ತದೆ.
ಕಿಟಕಿ ಮೂಲಕ ಸೂರ್ಯನ ನೇರ ಬೆಳಕು ಬೀಳುವಂತಹ ಗೋಡೆಗಳ ಮೇಲೆ ಕನ್ನಡಿಗಳನ್ನು ಅಳವಡಿಸುವುದರಿಂದ ಬೆಳಕು ಪ್ರತಿಫಲನಗೊಂಡು ಇಡೀ ಮನೆ ಬೆಳಕಿನಿಂದ ಆವೃತ್ತಗೊಳ್ಳುತ್ತದೆ. ಈ ಮುಂಚೆ ಹೇಳಿದಂತೆ ಗಾಳಿ ಮತ್ತು ನೈಸರ್ಗಿಕ ಬೆಳಕು ಮನುಷ್ಯನ ಮೈಂಡ್ ರಿಫ್ರೆಶ್ ಮಾಡುವುದರೊಂದಿಗೆ ಮನಸಿಗೆ ಆಹ್ಲಾದಕರ ಸಂತೋಷವನ್ನು ನೀಡುತ್ತದೆ. ಆದ್ದರಿಂದ ಮನೆಯ ಮೂಲೆ ಮೂಲೆಗೂ ಗಾಳಿ ಹಾಗೂ ಉತ್ತಮ ಬೆಳಕಿನ ಅವಶ್ಯಕತೆ ಇದೆ.
-ಲಕ್ಷ್ಮೀ ಶಿವಣ್ಣ
ವಿವಿ ವಿಜಯಪುರ