ಶ್ರೀನಗರ: ಜಮ್ಮು- ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಪೊಲೀಸ್ ಪೋಸ್ಟ್‌ವೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ- ತೊಯ್ಬಾ ಉಗ್ರ ಸಂಘಟನೆಯ ಒಬ್ಬ ಉಗ್ರನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಉಗ್ರನ ಬಳಿಯಿದ್ದ ಶಸ್ತ್ರಾಸ್ತ್ರಗಳು ಹಾಗೂ ದಾಳಿ ವೇಳೆ ಬಳಸಲಾಗಿದ್ದ ಎರಡು ಕಾರುಗಳನ್ನೂ ವಶಕ್ಕೆ ಪಡೆಯಲಾಗಿದೆ. ಮೃತನನ್ನು ಕುಲ್ಗಾಂ ಜಿಲ್ಲೆಯ ಬಿಲಾಲ್ ಅಹ್ಮದ್ ಎಂದು ಗುರುತಿಸಲಾಗಿದೆ. 3 ತಿಂಗಳ ಹಿಂದಷ್ಟೇ ಈತ ಲಷ್ಕರ್‌ಗೆ ಸೇರ್ಪಡೆಗೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ನಡುವೆ, ಸೋಪೋರ್ ಜಿಲ್ಲೆಯಲ್ಲಿ ಅನ್ಸಾರ್ ಘಜ್ವತುಲ್ ಹಿಂದ್‌ಗೆ ಸೇರಿದ ಉಗ್ರಗಾಮಿ ಆಸಿಫ್ ನಜೀರ್ ದರ್‌ನನ್ನು ಅಪರಿಚಿತ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ನಡೆದಿದೆ.