Advertisement

ಸಿದ್ದು ಮಾತು ಕೇಳುವ ಅಧಿಕಾರಿ ಮನೆಗೆ ಹೋಗಲಿ

10:59 PM Nov 06, 2019 | Lakshmi GovindaRaju |

ಬಾಗಲಕೋಟೆ: “ಸರ್ಕಾರದ ಆದೇಶ ಏನಿದೆಯೋ ಅದನ್ನು ಪಾಲಿಸಿ. ಸಿದ್ದರಾಮಯ್ಯನವರ ಮಾತನ್ನು ಕೇಳಿ, ಟಿಪ್ಪು ಜಯಂತಿ ಆಚರಿಸಬೇಡಿ. ಅವರ ಮಾತು ಕೇಳುವುದಾದರೆ ನೀವು ರಜೆ ಹಾಕಿ ಮನೆಗೆ ಹೋಗಿ’ ಎಂದು ಮೈಸೂರು ಜಿಲ್ಲಾಡಳಿತದ ಅಧಿಕಾರಿಗೆ ವಸತಿ ಸಚಿವ ವಿ.ಸೋಮಣ್ಣ ಖಡಕ್‌ ಆಗಿ ಆದೇಶ ನೀಡಿದ್ದಾರೆ.

Advertisement

ಇಲ್ಲಿನ ತೋಟಗಾರಿಕೆ ವಿವಿಯಲ್ಲಿ ಅಧಿಕಾರಿಗಳೊಂದಿಗೆ ಸಚಿವರು ಚರ್ಚೆ ನಡೆಸುತ್ತಿದ್ದರು. ಈ ವೇಳೆ, ಮೈಸೂರು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಸಚಿವರಿಗೆ ದೂರವಾಣಿ ಕರೆ ಮಾಡಿ, ಟಿಪ್ಪು ಜಯಂತಿ ಆಚರಣೆ ಕುರಿತು ಕೇಳಿದರು. ಈ ವೇಳೆ, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು, “ಸರ್ಕಾರದ ಆದೇಶ ಏನಿದೆಯೋ ಅದನ್ನು ಪಾಲಿಸಿ. ಯಾರ ಮಾತೂ ಕೇಳಬೇಡಿ.

ಸಿದ್ದರಾಮಯ್ಯ ವಿಪಕ್ಷ ನಾಯಕರೆಂದು ಅವರ ಮಾತನ್ನು ಕೇಳಿ, ಟಿಪ್ಪು ಜಯಂತಿ ಆಚರಿಸಬೇಡಿ. ಅವರ ಮಾತು ಕೇಳುವುದಾದರೆ ನೀವು ರಜೆ ಹಾಕಿ ಮನೆಗೆ ಹೋಗಿ’ ಎಂದು ಗರಂ ಆದರು. “ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ಮೊದಲಿದ್ದ ಯಾವ ಅಧಿಕಾರಿಯನ್ನೂ ಬದಲಾಯಿಸಿಲ್ಲ. ಅವರಿಂದಲೇ ಮೈಸೂರು ದಸರಾ ಸಹಿತ ಎಲ್ಲ ಕೆಲಸ-ಕಾರ್ಯ ಮಾಡಿಸಲಾಗಿದೆ. ಆದರೆ, ಸರ್ಕಾರದ ಆದೇಶವನ್ನೂ ಉಲ್ಲಂಘಿಸಿದರೆ ಸುಮ್ಮನಿರಬೇಕೇ’ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next