ಚಿತ್ರದುರ್ಗ: ಸಿಎಂ ಆಯ್ಕೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ನಾನು ಸಿಎಂ ರೇಸ್ ನಲ್ಲಿ ಇಲ್ಲ. ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ. ಇದಕ್ಕೆ 100% ನನ್ನ ಸಮ್ಮಿತಿ ಇದೆ. ಪಕ್ಷ ಬದಲಾವಣೆ ಮಾಡಿದರೆ ಮಾತ್ರ ನೋಡೋಣ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಯಾವುದೇ ಬದಲಾವಣೆ ಇದ್ದರೂ ಕೂಡಾ ಹೈಕಮಾಂಡ್ ನಿರ್ಧಾರ. ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇರಬಹುದು ಅಷ್ಟೇ ಎಂದರು.
ಹೈಕಮಾಂಡ್ ಮತ್ತು ಶಾಸಕರು ನಿರ್ಧಾರ ಮಾಡುತ್ತಾರೆ. ಇದೆಲ್ಲಾ ಹೈಕಮಾಂಡ್ ಹಂತದಲ್ಲಿ ಚರ್ಚೆ ನಡೆಯುತ್ತದೆ. ಸಿಎಂ ಹೇಳಿದ್ದು ಐದು ವರ್ಷ ಮುಂದುವರಿಯುವುದಾಗಿ ಎಂದಿದ್ದಾರೆ. ಯಾವುದೇ ಬದಲಾವಣೆ ಇದ್ದರು ಹೈಕಮಾಂಡ್ ಮಾಡಬೇಕಿದೆ. ಸಿಎಂ ಸಿದ್ದರಾಮಯ್ಯ 2.5 ವರ್ಷ ಸಿಎಂ ಎಂಬ ವಿಚಾರಕ್ಕೆ ತೆರೆ ಎಳೆದಿದ್ದಾರೆ. ಪುನಃ ಮತ್ತೆ ನಮಗೆ ಪ್ರಶ್ನೆ ಮಾಡುವುದು ಅಗತ್ಯವಿಲ್ಲ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ಅವರವರ ಅಭಿಪ್ರಾಯ ಹೇಳಿದ್ದಾರೆ. ಪಕ್ಷದಲ್ಲಿ ಗೊಂದಲ ಇಲ್ಲ, ಅಭಿಪ್ರಾಯ ಇದೆ ಎಂದರು.
ಬಿಜೆಪಿಯವರಿಗೆ ಅಪರೇಷನ್ ಕಮಲ ಅಭ್ಯಾಸವಾಗಿದೆ. ಇಡಿ, ಸಿಬಿಐ ಬಳಸಿ ಸರ್ಕಾರ ಕೆಡವುತ್ತಾರೆ. ಯಾವುದೇ ಪ್ರಕರಣವಿರುವ ವ್ಯಕ್ತಿ ಬಿಜೆಪಿಗೆ ಹೋದರೆ ವಾಷಿಂಗ್ ಪೌಡರ್ ನಿರ್ಮಾ ಆಗುತ್ತಾರೆ. ನನ್ನ ಬಳಿ ಈ ಕುರಿತು ಊಹಾಪೋಹಗಳ ಮಾಹಿತಿ ಇದೆ ಎಂದರು.
ವಸೂಲಿಗೆ ಹೈಕಮಾಂಡ್ ನಾಯಕರು ಬಂದಿದ್ದಾರೆಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕುಮಾರಣ್ಣ ನಿತ್ಯವೂ ಹೇಳುತ್ತಿದ್ದಾರೆ, ಅವರ ವಿರುದ್ದ ಏನು ಹೇಳಲಿ. ಬಿಜೆಪಿ ವಿರುದ್ದ ಮೊದಲು ಮಾತನಾಡುತ್ತಿದ್ದರು. ಈಗ ಕಾಂಗ್ರೆಸ್ ವಿರುದ್ದ ಮಾತನಾಡುತ್ತಿದ್ದಾರೆ. ಅವರಿಗೆ ಹೇಗೆ ಬೇಕೋ ಹಾಗೆ ಮಾತನಾಡಲಿ. ಬಿಜೆಪಿ ಜೊತೆಗೆ ಮೈತ್ರಿ ಆಗಿದ್ದು, ಮಾತನಾಡುತ್ತಿದ್ದಾರೆ ಎಂದರು.
ಶಿಕ್ಷಣದ ಮೇಲೆ ಜಿಎಸ್ ಟಿ 18% ಇದೆ ಪ್ರಪಂಚದಲ್ಲಿ ಯಾವುದೇ ದೇಶದಲ್ಲಿ ಇಲ್ಲ. ರೈತರ ಆತ್ಮಹತ್ಯೆಗಳ ಕುರಿತು ಚರ್ಚೆ ಇಲ್ಲ. ಬೆಲೆ ಏರಿಕೆ ಕುರಿತು ಚರ್ಚೆ ನಡೆಸುತ್ತಿಲ್ಲ. 56 ರೂ ಡಾಲರ್ 84 ರೂ ಆಗಿದೆ ಈ ಕುರಿತು ಚರ್ಚೆ ಇಲ್ಲ. ರೈಲ್ವೆ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದೆ ಚರ್ಚೆ ಇಲ್ಲ. ರಾಜ್ಯದ ಬರ ಕುರಿತು ಚರ್ಚೆ ಕೂಡಾ ನಡೆಯಲಿ. ಕೇಂದ್ರಕ್ಕೆ ಬರ ಪರಿಹಾರ ನೆರವು ನೀಡಲು ಮನವಿ ಮಾಡಿದ್ದೇವೆ. ಆಪರೇಷನ್ ಕಮಲ ಬಿಟ್ಟು ಕೇಂದ್ರದಿಂದ ಹಣ ತರಲಿ. ಬರ ಅಧ್ಯಯನ ಬಿಟ್ಟು ಹಣ ನೀಡಬೇಕು. ಪುಕ್ಸಟ್ಟೆ ಭಾಷಣ ಬಿಟ್ಟು, ಪ್ರಧಾನಿ ಹಣ ನೀಡಬೇಕು. ಪಬ್ಲಿಸಿಟಿ ಬಿಟ್ಟು ಮಿಡಿಯಾ ಮುಂದೆ ಒಂದು ಗಂಟೆ ಕುಳಿತು ಚರ್ಚೆ ಮಾಡಲಿ. ವಿಶ್ವಗುರುಗಳು ಟೀ ಕುಡಿಯುತ್ತಾ ಚರ್ಚೆ ಮಾಡಲಿ ಎಂದು ವ್ಯಂಗ್ಯವಾಡಿದರು.