Advertisement

ಪ್ರತಿಯೊಬ್ಬರಲ್ಲಿ ಧಾರ್ಮಿಕ ನಂಬಿಕೆ ಬೆಳೆಯಲಿ: ಶಂಕ್ರಣ್ಣ

03:14 PM Jan 09, 2022 | Team Udayavani |

ಕೆಂಭಾವಿ: ಇಂದಿನ ವೈಜ್ಞಾನಿಕ ಯುಗದಲ್ಲಿ ಉತ್ತಮ ಸಂಸ್ಕಾರ, ದೇವರ ಮೇಲೆ ಭಕ್ತಿ, ಶ್ರದ್ಧೆ, ನಂಬಿಕೆ ಸೇರಿದತೆ ವಿವಿಧ ಧಾರ್ಮಿಕ ನಂಬಿಕೆಗಳು ಪ್ರತಿಯೊಬ್ಬರಲ್ಲಿ ಬೆಳೆದಾಗ ಮಾತ್ರ ಸಮಾಜದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಕ್ಯಾಳ ಹೇಳಿದರು.

Advertisement

ಕಿರದಳ್ಳಿ ಗ್ರಾಮದ ಅಂಬಾ ಭವಾನಿ ದೇವಸ್ಥಾನದಲ್ಲಿ ದೇವಿ ಆರಾಧಕ ಅಮೀನರೆಡ್ಡಿ ಬಿರಾದಾರ ಹಮ್ಮಿಕೊಂಡಿದ್ದ ಗಣಹೋಮ ಮತ್ತು ಶ್ರೀಸೂಕ್ತ ಹೋಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ವೋತ್ತಮಾಚಾರ್ಯ ಜೋಷಿ ಹೋಮಗಳ ಬಗ್ಗೆ ವಿವರಿಸಿದರು. ನಂತರ ಹೋಮಗಳ ಪೂರ್ಣಾಹುತಿ, ಸತ್ಯನಾರಾಯಣ ಪೂಜೆ, ದೇವಿಗೆ ವಿಶೇಷ ಪೂಜೆ, ಅಲಂಕಾರ, ಭಜನೆ, ಪ್ರಸಾದ ವಿತರಣೆ ನಡೆಯಿತು. ಕೂಡಲಗಿ ಬಾಬಾ ಮಹಾರಾ ಮಠದ ಶ್ರೀ ಗಜಾನನ ಮಹಾರಾಜ ನೇತೃತ್ವದಲ್ಲಿ ಸುಮಾರು 10 ಜನ ಋತ್ವಿಜರು ವಿವಿಧ ಧಾರ್ಮಿಕ ಕಾರ್ಯ ನಡೆಸಿಕೊಟ್ಟರು. ಕಿರದಳ್ಳಿ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next