Advertisement

ರಾಜಕಾರಣಿಗಳು ಸಮಾಜಸೇವೆಗೆ ಮುಂದಾಗಲಿ: ಮಾತಾಜಿ

01:22 PM Feb 05, 2018 | |

ಹೂವಿನಹಿಪ್ಪರಗಿ: ಇಂದಿನ ರಾಜಕಾರಣಿಗಳು ಪ್ರಾಮಾಣಿಕವಾಗಿ ಸಮಾಜಸೇವೆಗೆ ಮುಂದಾದಲ್ಲಿ ಮಾತ್ರ ನಿಮ್ಮ ಐದು ವರ್ಷದ ನಂತರವೂ ನಿಮ್ಮ ಖುರ್ಚಿ ಗಟ್ಟಿಯಾಗಿರುತ್ತದೆ ಎಂದು ಬುರಣಾಪುರ ಆರೂಢಾಶ್ರಮದ
ಯೋಗೀಶ್ವರಿ ಮಾತಾಜಿ ಹೇಳಿದರು.

Advertisement

ಪಟ್ಟಣದ ಶಿವಯೋಗೇಶ್ವರ ವಿದ್ಯಾವರ್ಧಕ ಸಂಘದ 12ನೇ ವಾರ್ಷಿಕ ಸ್ನೇಹ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಾಜಕಾರಣಿಗಳು ಆಯ್ಕೆಯಾಗಿ ಸರ್ಕಾರದ ಹಣವನ್ನು ನುಂಗಿ ಕುಳಿತರೆ ಮುಂದಿನ ಬಾರಿ ಜನರು ನಿಮ್ಮನ್ನು ಆಯ್ಕೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಸರ್ಕಾರ ಜನಪ್ರತಿನಿಧಿಗಳಿಗೆ ಕೋಟ್ಯಾನುಗಟ್ಟಲೇ ಆಸ್ಪತ್ರೆ ವೆಚ್ಚ ಭರಿಸುತ್ತದೆ. ಅದೇ ಬಡವರ ನೂರು ರೂ. ಪಾವತಿ
ಮಾಡದಿರುವುದು ನಿಜಕ್ಕೂ ಖೇದಕರ ಸಂಗತಿ. ಜನಪ್ರತಿನಿಧಿಗಳು ಸಮಾಜದ ಪರವಾಗಿ ಇರುವುರು. ಹೀಗಾಗಿ ಸಮಾಜದ ಕಲ್ಯಾಣದತ್ತ ಮನಸ್ಸು ಮಾಡಬೇಕಾಗಿರುವುದು ಅವಶ್ಯವಾಗಿದೆ. ಇಂದು ಮಠಾಧೀಶರು ಯಾವುದೇ ಪಕ್ಷಗಳಿಗೆ ಅಂಟಿಕೊಂಡಿಲ್ಲ. ಅವರು ಸಮಾಜಸೇವೆಗೆ ಹಾರೈಸುತ್ತಾರಷ್ಟೇ. ಇಂದಿನ ವಿದ್ಯಾರ್ಥಿಗಳು ಅಬ್ದುಲ್‌ ಕಲಾಂರಂತಹ ಉನ್ನತ ಕನಸನ್ನು ಇರಿಸಿಕೊಂಡು ಸುಂದರ ಬದುಕನ್ನು ನಿಮ್ಮದಾಗಿಸಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿ ತುಂಬಾ ವೇಗದಲ್ಲಿ ಹಾಗೂ ಸ್ಪರ್ಧಾತ್ಮಕವಾಗಿದ್ದು ಕೇವಲ ಪಾಸಾದರೆ ಭವಿಷ್ಯ ರೂಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ವಿದ್ಯಾಥಿಗಳು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳುವುದು ಅವಶ್ಯವಾಗಿದೆ ಎಂದರು.

ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಮಾತನಾಡಿ, ಇಂದು ಶಿಕ್ಷಣ ವಿದ್ಯಾರ್ಥಿಗಳ ಜೀವನದಲ್ಲಿ
ಮಹತ್ವದ ಪಾತ್ರ ವಹಿಸುತ್ತದೆ. ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ.
ದೇಶ ಗಡಿ ಕಾಯುವಲ್ಲಿ ಇಂದು ಯುವಜನಾಂಗ ಮುಂದಾಗಬೇಕಾಗಿದೆ ಎಂದರು.

Advertisement

ಹುಣಶ್ಯಾಳ ಪಿಬಿಯ ಗುಂಡಣ್ಣ ಶರಣರು ಮಾತನಾಡಿ, ಅಜ್ಞಾನ ಕಳೆಯುವಲ್ಲಿ ಇಂದು ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಜವಾಬ್ದಾರಿ ವಹಿಸುತ್ತವೆ. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ
ಪಾತ್ರ ವಹಿಸುತ್ತಾರೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜುಗೌಡ ಪಾಟೀಲ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕಾ ಯೋಜನಾಧಿಕಾರಿ ಸುಧಾ ಪಿ.ಜಿ, ಪ್ರಾಚಾರ್ಯ ಜಿ.ಎಸ್‌.
ಶಿವಯೋಗಿ, ಗ್ರಾಪಂ ಅಧ್ಯಕ್ಷ ನಿಂಗಣ್ಣ ಶಿವಯೋಗಿ, ಸದಸ್ಯ ಪರಮಾನಂದ ಗೋಟೇದ, ಗಿರೀಶ ಬ್ಯಾಕೋಡ, ಜಿ.ಎಸ್‌. ಕೋರಿ, ಎಂ.ಪಿ. ಗುಂಡಾನವರ, ರಾಜಶೇಖರ ಬ್ಯಾಕೋಡ, ಡಾ| ಅರವಿಂದ ಪಿ.ಕೆ, ಪಿ.ಕೆ. ಕೋಲಕಾರ, ಶಿವಣ್ಣ ಕಣಮುಚನಾಳ, ಅರ್ಜುನರಾಯ ಶಿವಯೋಗಿ, ಸಂಗಮೇಶ ಓಲೇಕಾರ, ಬಿ.ಪಿ. ಗುಂಡಾನವರ, ರಾಮನಗೌಡ ಬಿರಾದಾರ ಸೇರಿದಂತೆ ಅನೇಕರಿದ್ದರು.

ಪ್ರಕಾಶ ಪಾಟೀಲ ನಿರೂಪಿಸಿದರು. ಸಾವಿತ್ರಿ ಶಿವಯೋಗಿ ಸ್ವಾಗತಿಸಿದರು. ಗಿರೀಶ ಶಿವಯೋಗಿ ವಂದಿಸಿದರು.
ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು. 

Advertisement

Udayavani is now on Telegram. Click here to join our channel and stay updated with the latest news.

Next