Advertisement
ತಾಲೂಕಿನ ಭೈರವಾಡಗಿ ಗ್ರಾಮದ ಲಕ್ಕಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಾಧನೆಮನೆ, ಮನೆ ತಲುಪಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುನರ್ ವಿಂಗಡಣೆ ಸಂದರ್ಭದಲ್ಲಿ ಸಿಂದಗಿ ಮತಕ್ಷೇತ್ರ ಬಹುತೇಕ ಹಳ್ಳಿಗಳು ದೇವರಹಿಪ್ಪರಗಿ ಕ್ಷೇತ್ರ ವ್ಯಾಪ್ತಿಯಲ್ಲಿ
ಸೇರಿಕೊಂಡಿವೆ. ಅದಕ್ಕೆ ಈ ಕ್ಷೇತ್ರದಿಂದ ನಾನು ಸ್ಪರ್ಧಿಸಿದರೆ ಗೆಲುವು ನಿಶ್ಚಿತ ಎಂದರು. ಈ ವಿಷಯದ ಬಗ್ಗೆ ರಾಜ್ಯ ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಗಮನಕ್ಕೆ ತಂದಿದ್ದೇನೆ. ಅವರು ಸಿಂದಗಿ ಹಾಗೂ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಕಳೆದ ನಾಲ್ಕುವರೆ ವರ್ಷದಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಬಗ್ಗೆ ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
Related Articles
Advertisement
ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಕಳೆದ 4 ವರ್ಷದಿಂದ ಅಧಿಕಾರದಲ್ಲಿದ್ದರೂ ರೈತರ ಸಾಲ ಮನ್ನಾ ಮಾಡಲಿಲ್ಲ. ಆದರೆ ಕಾಂಗ್ರೆಸ್ ಸರಕಾರ ರಾಜ್ಯದ ಅನ್ನದಾತನ 50 ಸಾವಿರವರೆಗಿನ ಸಾಲ ಮನ್ನಾ ಮಾಡಿದೆ. ರಾಜ್ಯದ ರೈತರಿಗೆ ಅನೇಕ ಯೋಜನೆ ಜಾರಿಗೆ ತರುವ ಮೂಲಕ ರೈತರ ಸಂಕಟದಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.ಬಿಜೆಪಿ ರೈತರ ಸಾಲ ಮನ್ನಾ ಮಾಡುವುದನ್ನು ಬಿಟ್ಟು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿದೆ. ಇದಕ್ಕೆ ರಾಜ್ಯದ ಜನತೆ ಅವಕಾಶ ನೀಡುವುದಿಲ್ಲ. ಅವರ ಮಿಷನ್ 150 ಟುಸ್ ಆಗಲಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಚ್ಚತ ಎಂದು ಹೇಳಿದರು. ಎಂ.ಬಿ. ಹಯ್ನಾಳ, ವಸಂತ ರಡ್ಡಿ, ಕೆಂಪೇಗೌಡ ಕೇಶಪ್ಪಗೋಳ, ನೀಲಕಂಠರಾಯಗೌಡ ಮೂಲಿಮನಿ, ಕೂಡಲಯ್ಯ ಸ್ವಾಮಿಜಿ, ಎಸ್.ಬಿ. ಪಾಟೀಲ, ಎಂ.ಎನ್. ಪಾಟೀಲ, ಎಸ್.ಎಂ. ಉತ್ನಾಳ, ಆಯೂಬ ದೇವರಮನಿ, ಕೆ.ಎಚ್. ಸೋಮಪುರ, ನಜೀರಸಾಬ ಪಾನ್ ಪರೋಶಿ, ಬಸನಗೌಡ ಬಿರಾದಾರ, ವಿ.ಎಸ್. ಪಾಟೀಲ, ಶಂಕರ ಕುರಿ, ಬಾಬುಗೌಡ ಪಾಟೀಲ, ಬಾಳಾಸಾಹೇಬಗೌಡ ಪಾಟೀಲ, ಪಿ.ಜಿ. ಗೋಠೆದ, ಸಂತೋಷ ದೊಡಮನಿ ಇದ್ದರು.
ಮಹೇಶ ಮುರಾಳ ಸ್ವಾಗತಿಸಿದರು. ಇಮಾಬಸಾಬ ಶಾಬಾದಿ ನಿರೂಪಿಸಿದರು.