Advertisement
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವುರ ಹಾಗೂ ಕರ್ನಾಟಕ ಬರಹಗಾರರ- ಕಲಾವಿದರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಬಹು ಭಾಷಾ ಕವಿಗೋಷ್ಠಿ’ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸಮಗ್ರ ಅಭಿವೃದ್ಧಿಯಲ್ಲಿಯೂ ಸಾಹಿತ್ಯ ಹಾಗೂ ಸಂಸ್ಕೃತಿಯ ಪಾತ್ರ ಬಹಳಷ್ಟಿದೆ.
Related Articles
Advertisement
ಕಲಬುರಗಿ ಕೇಂದ್ರೀಯ ವಿವಿ ಕುಲಸಚಿವ ಪ್ರೊ| ಬಸವರಾಜ ಡೊಣೂರ ಮಾತನಾಡಿ, ಸಾಹಿತ್ಯ ಹಾಗೂ ಕಾವ್ಯ ಮನುಷ್ಯನ ವ್ಯಕ್ತಿತ್ವ ನಿರ್ಮಾಣ ಮಾಡುವುದಲ್ಲದೇ ದೇಶದ ವಿಕಾಸಕ್ಕೂ ಕಾರಣವಾಗುತ್ತದೆ. ಕಾವ್ಯ ರಚನೆ ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತದೆ. ಕವಿತೆ ಮನ ಕದಿಯುವಂತಾಗಬೇಕೆ ಹೊರತು ಕದಡಬಾರದು.
ಸತ್ಯವನ್ನು ಅರಗಿಸಿಕೊಳ್ಳುವ ಹಾಗೂ ಅಸತ್ಯವನ್ನು ತಳ್ಳಿ ಹಾಕುವ ಧೆ„ರ್ಯ ಕಾವ್ಯದಲ್ಲಿರಬೇಕು. ನದಿ, ಭೂಮಿ, ಆಕಾಶ, ಕಲ್ಲು, ಮಣ್ಣು, ಮರ, ದೈವತ್ವ, ಆತ್ಮವನ್ನು ಮಾತನಾಡಿಸುವಂಥ ಕಾವ್ಯ ರಚನೆಯಾದಲ್ಲಿ ಅದು ಗಟ್ಟಿ ಕಾವ್ಯವಾಗಿ ಹೊರ ಹೊಮ್ಮುತ್ತದೆ ಎಂದರು. ಸಂಘದ ಅಧ್ಯಕ್ಷ ಡಾ| ಜಗನ್ನಾಥ ಹೆಬ್ಟಾಳೆ ಆಶಯ ನುಡಿಗಳನ್ನು ನುಡಿದರು. ಬರುವ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಜಾನಪದ ಸಮ್ಮೇಳನವನ್ನು ಬೀದರನಲ್ಲಿ ನಡೆಸಲಾಗುತ್ತಿದ್ದು,15 ಸಾವಿರ ದೇಶಿಯ ಹಾಗೂ ಒಂದುವರೆ ಸಾವಿರ ವಿದೇಶಿ ಕಲಾವಿದರು ಭಾಗವಹಿಸಲಿದ್ದಾರೆ. ಬೀದರ ಗಡಿಯಲ್ಲಿ 25 ಕೋಟಿ ವೆಚ್ಚದಲ್ಲಿ ಸಾಂಸ್ಕೃತಿಕ ಹಬ್ ಸ್ಥಾಪಿಸಲು ಮುಂದಾಗಬೇಕೆಂದು ಒತ್ತಾಯಿಸಿದರು. ಕೇಂದ್ರೀಯ ವಿವಿ ಮುಖ್ಯಸ್ಥ ಡಾ| ಬಿ.ವಿ ಪೂಜಾರಿ ಚುಟುಕು ಕವನಗಳ ವಾಚನ ಮಾಡಿದರು. ಸಂಘದ ಉಪಾಧ್ಯಕ್ಷ ಪ್ರೊ| ಎಸ್.ಬಿ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಶಂಕ್ರೆಪ್ಪ ಹೊನ್ನಾ ಇದ್ದರು.