Advertisement
ಕೊಡಗಿನ ತಾಳತ್ ಮನೆಯಲ್ಲಿ ಹುಟ್ಟಿ ಸುಮಾರು 87 ಕಿ.ಮೀ. ದೂರಕ್ಕೆ ಹರಿಯುವ ಪಯಸ್ವಿನಿ ನದಿ ಸುಳ್ಯ ತಾಲೂಕಿನ ಜೀವ ನದಿ. ಇದು ಸುಳ್ಯ ತಾಲೂಕಿನಲ್ಲಿ ಹರಿಯುವ ಏಕೈಕ ಪ್ರಮುಖ ನದಿ ಎಂದರೂ ತಪ್ಪಿಲ್ಲ. ಸುಳ್ಯ ನಗರದ ಎಲ್ಲ ಆಗು ಹೋಗುಗಳಲ್ಲಿ ಪಯಸ್ವಿನಿ ನದಿ ಪ್ರಮುಖ ಪಾತ್ರವನ್ನು ವಹಿಸಿದೆ. ಅದೂ ಅಲ್ಲದೆ ಹಲವಾರು ಜಲಚರಗಳಿಗೆ, ಪ್ರಾಣಿ – ಪಕ್ಷಿಗಳಿಗೆ ಇದು ಜೀವನಾಧಾರವಾಗಿದೆ.
Related Articles
ಸುಳ್ಯದ ಕಡೆಗೆ ಹರಿಯುವ ಪಯಸ್ವಿನಿಯ ತೀರಗಳು ಆರಂಭದಲ್ಲಿ ಸ್ವತ್ಛಂದವಾಗಿಯೇ ಇರುತ್ತದೆ. ಕಲ್ಲುಗುಂಡಿಯಿಂದ ಮುಂದೆ ಪಯಸ್ವಿನಿಯ ಗೋಳು ಪ್ರಾರಂಭವಾಗುತ್ತದೆ. ನದಿಯ ದಡಗಳಲ್ಲಿ ತ್ಯಾಜ್ಯಗಳು ಕಾಣಿ ಸುತ್ತವೆ. ಇಂತಹ ತ್ಯಾಜ್ಯಗಳು ಸ್ವತ್ಛವಾಗಬೇಕು.
Advertisement
ನದಿ ಕಸದ ತೊಟ್ಟಿಯಲ್ಲ. ಅಲ್ಲಿ ಕಸ ಕಡ್ಡಿಗಳನ್ನು ಬಿಸಾಡುವುದು ತಪ್ಪು ಎಂಬ ಭಾವನೆ ಜನರಲ್ಲಿ ಮೂಡಬೇಕು.
ಮಡಿಕೇರಿ- ಮಂಗಳೂರು ರಸ್ತೆಗಳಲ್ಲಿ ಹೋಗುವ ವಾಹನ ಚಾಲಕರು, ಪ್ರವಾಸಿಗರು ನದಿಯ ಬದಿಯಲ್ಲಿ ಅಡಿಗೆ ಮಾಡಿ, ತಟ್ಟೆ, ಉಳಿದ ಆಹಾರಗಳನ್ನು ಎಸೆದು ಹೋಗುತ್ತಾರೆ. ಕೆಲವೊಬ್ಬರು ನಿತ್ಯ ಕರ್ಮಗಳಿಗೂ ನದಿಯನ್ನೇ ಆಶ್ರಯಿಸಿ ಗಲೀಜು ಮಾಡುತ್ತಾರೆ. ಇಂಥವರ ಮೇಲೆ ಕಠಿನ ಕ್ರಮಕೈಗೊಳ್ಳಬೇಕು. ನದಿಯ ಬದಿಗಳಲ್ಲಿ ನಡೆಯುವ ಅನಧಿಕೃತ ಮರಳು ಸಾಗಣೆ ನಿಷೇಧಿಸಬೇಕು. ಪಯಸ್ವಿನಿಯ ಇಕ್ಕೆಲಗಳಲ್ಲಿ ಇರುವ ಮರಗಳನ್ನು ಹಾಗೆಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸುವುದು ಒಳ್ಳೆಯದು. ಇದರಿಂದ ಪಯಸ್ವಿನಿಯಲ್ಲಿ ಕೆನ್ನೀರು ಹರಿಯುವುದನ್ನು ಬಹುತೇಕ ತಡೆಯಬಹುದು.. ಇಲ್ಲದಿದ್ದರೆ ಸಾಧಾರಣ ಮಳೆಯಾದ ಮರುದಿನ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಮೀನು ಹಿಡಿಯಲು ನದಿಗೆ ಬಲೆ ಹಾಕುವವರ, ಸ್ಫೋಟಕಗಳನ್ನು ಬಳಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಲಚರಗಳಿಗೂ ತೊಂದರೆ. ಸುಳ್ಯ ನಗರ ಹಾಗೂ ಇತರ ಚರಂಡಿ ಹಾಗೂ ಕೊಳಚೆ ನೀರನ್ನು ಶುದ್ಧೀಕರಿಸಿ ನದಿಗೆ ಬಿಡುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಇನ್ನೂ ತುಂಬಾ ಸುಧಾರಣೆ ಆಗಬೇಕಿದೆ. ಕೃಷಿ ತೋಟಗಳಿಗೆ ಮಿತವಾಗಿ ನೀರಿನ ಬಳಕೆ ಮಾಡುವುದು ಅತಿ ಮುಖ್ಯ ಕೆಲಸ. ದಯಾನಂದ ಅಂಜಿಕ್ಕಾರ್