Advertisement

ನಮ್ಮ ಗ್ರಾಮ ನಮ್ಮ ಯೋಜನೆ ಸಾಕಾರಗೊಳ್ಳಲಿ: ಸಂಜೀವ ಮೊಗವೀರ

11:42 PM Oct 14, 2019 | Team Udayavani |

ಬಸ್ರೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 2020-21 ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳ ಗುತ್ಛ ತಯಾರಿಸುವ ಉದ್ದೇಶದಿಂದ ಕೋಣಿ ಗ್ರಾ.ಪಂ. ವಿಶೇಷ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷ‌ ಕೆ. ಸಂಜೀವ ಮೊಗವೀರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

Advertisement

ಅವರು ಮಾತನಾಡಿ ನಮ್ಮ ಗ್ರಾಮ ನಮ್ಮ ಯೋಜನೆ ಐದು ವರ್ಷದ ಯೋಜನೆಯಾಗಿದೆ. ಗ್ರಾಮಸ್ಥರು ಇದರ ಸಹಕಾರ ಪಡೆದುಕೊಳ್ಳಬೇಕು. ಮುಂದಿನ ಐದು ವರ್ಷಗಳಲ್ಲಿ ಕೋಣಿ ಗ್ರಾಮವನ್ನು ಈ ಯೋಜನೆಯ ಮೂಲಕ ಮಾದರಿ ಗ್ರಾಮವನ್ನಾಗಿಸುವುದು ನಮ್ಮ ಆಶಯವಾಗಿದೆ. ಮಹಾತ್ಮಾ ಗಾಂಧಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ನಡೆಸಲು ಅವಕಾಶವಿದೆ. ನಮ್ಮ ಗ್ರಾಮ ನಮ್ಮ ಯೋಜನೆಯಲ್ಲಿ ಕೋಣಿ ಗ್ರಾಮವನ್ನು ಆದರ್ಶ ಪೂರ್ಣವಾಗಿಸಬೇಕೆಂಬುದು ನಮ್ಮ ಉದ್ದೇಶವಾಗಿದೆ. ತ್ಯಾಜ್ಯ ವಿಲೇವಾರಿಯನ್ನು ಈಗಾಗಲೇ ಸಮರ್ಪಕವಾಗಿ ವಿಲೇವಾರಿ ಮಾಡುತ್ತಿದ್ದು ಪ್ಲಾಸ್ಟಿಕ್‌ನ್ನು ಪೂರ್ಣವಾಗಿ ಗ್ರಾಮದಲ್ಲಿ ನಿಷೇಧಿಸಲಾಗಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ ಎಂದರು.

ಮಾರ್ಗದರ್ಶಿ ಅಧಿಕಾರಿಯಾಗಿ ಕುಂದಾಪುರ ತಾ.ಪಂ. ಸಹಾಯಕ ನಿದೇರ್ಶಕ ಎಚ್‌.ವಿ. ಇಬ್ರಾಹಿಂಪುರ ಅವರು ಆಗಮಿಸಿದ್ದು ಯೋಜನೆಯ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಕೋಣಿ ಗ್ರಾ.ಪಂ. ಉಪಾಧ್ಯಕ್ಷೆ ಸುಮನಾ ಸದಸ್ಯರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಪ್ರಾಜೆಕ್ಟರ್‌ ಮೂಲಕ ಸಮಗ್ರ ಮಾಹಿತಿಯನ್ನು ಪ್ರದರ್ಶಿಸಲಾಯಿತು.

ರಸ್ತೆ ದುರಸ್ತಿ, ಬರಗಾಲ ತಡೆಯಲು ವನನಿರ್ಮಾಣ, ಕಾಲುವೆ ರಚನೆ, ಮದಗ ಕೆರೆ ಅಭಿವೃದ್ಧಿ, ಶಾಲೆ, ಅಂಗನವಾಡಿಗಳಲ್ಲಿ ನೂತನ ವನ ನಿರ್ಮಾಣ, ರಸ್ತೆ ಬದಿ ಸಾಲು ಗಿಡಗಳನ್ನು ನೆಡುವುದು ಮುಂತಾದ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ವಿಸ್ತ್ರತವಾಗಿ ಚರ್ಚಿಸಲಾಯಿತು.

Advertisement

ಗ್ರಾ.ಪಂ.ಗೆ ವಿವಿಧ ಕೊಡುಗೆಗಳನ್ನು ನೀಡಿದ ದಾನಿಗಳನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮೋಹನ್‌ ರಾವ್‌ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಕೆ. ನಾರಾಯಣ ನಾಯ್ಕ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next