Advertisement

ಅಧಿಕಾರಿಗಳು ಪಕ್ಷಾತೀತವಾಗಿ ಜನರ ಕೆಲಸ ಮಾಡಲಿ: ಉಮಾಶ್ರೀ

05:23 PM Aug 01, 2024 | Team Udayavani |

ಉದಯವಾಣಿ ಸಮಾಚಾರ
ಮಹಾಲಿಂಗಪುರ: ಪುರಸಭೆ ಅಧಿಕಾರಿಗಳು ಪಕ್ಷಾತೀತವಾಗಿ ಪ್ರತಿಯೊಂದು ವಾರ್ಡ್‌ಗೆ ಹೋಗಿ, ಜನರ ಸಮಸ್ಯೆ ಆಲಿಸಿ ಸಾರ್ವಜನಿಕರ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ ಹೇಳಿದರು.

Advertisement

ವಿಧಾನ ಪರಿಷತ್‌ ಸದಸ್ಯೆಯಾದ ನಂತರ ಪ್ರಥಮ ಬಾರಿಗೆ ಪುರಸಭೆಗೆ ಆಗಮಿಸಿದ್ದ ಅವರು ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರಿಂದ ಬುಧವಾರ ಪೌರ ಸನ್ಮಾನ ಸ್ವೀಕರಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ಪುರಸಭೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಸದಸ್ಯರ ವಾರ್ಡ್‌ಗಳ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂಬ ಆರೋಪ ಕೇಳಿ
ಬಂದಿದೆ. ಅಧಿಕಾರಿಗಳು ತಾರತಮ್ಯ ಮಾಡದೇ ನಿಮ್ಮ ಕರ್ತವ್ಯ ಮತ್ತು ಸರ್ಕಾರಿ ನಿಯಮಾವಳಿಗೆ ಒಳಪಟ್ಟು, ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಪಟ್ಟಣದ ಎಲ್ಲ ವಾರ್ಡ್‌ಗಳನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದರು.

ಉಮಾಶ್ರೀ ಎಂದಿಗೂ ನಿಯಮಬಾಹಿರ ಕೆಲಸ ಮಾಡಿ ಎಂದು ಯಾರಿಗೂ ಹೇಳಿಲ್ಲ. ಚುನಾಯಿತ 23 ಸದಸ್ಯರನ್ನು ಸಮಾನವಾಗಿ
ಕಾಣಿ. ಜಿಲ್ಲಾಧಿಕಾರಿಗಳು ಹೇಳಿದ ಕೆಲಸ ಮಾಡಿರಿ. ನೀವು ಸರ್ಕಾರಿ ನೌಕರರು. ಯಾವ ಸರ್ಕಾರ, ಯಾವ ಶಾಸಕರು ಇದ್ದರೇನು, ನೀವು ನಿಮ್ಮ ಕರ್ತವ್ಯ ಪಾಲಿಸಿ, ಸರ್ಕಾರ ನೀಡುವ ಅನುದಾನ ಸಮರ್ಪಕ ಬಳಸಿಕೊಂಡು ಸಾರ್ವಜನಿಕರ ಮತ್ತು ಪಟ್ಟಣದ ಅಭಿವೃದ್ಧಿ ಕೆಲಸ ಮಾಡಿರಿ ಎಂದರು.

ಸಿರಾಜ ಪಾಂಡು, ಸೈಯದಲಿ ಶೇಖ, ಚನಬಸು ಹುರಕಡ್ಲಿ, ಮಹಾಲಿಂಗ ಭಜಂತ್ರಿ, ವಿಠಲ ಸಂಶಿ, ರಾಜೇಶ ಭಾವಿಕಟ್ಟಿ, ನಜೀರ್‌ ಜಾರೆ ಸೇರಿದಂತೆ ಹಲವರು ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ವಿವಿಧ ವಾರ್ಡ್‌ ನಲ್ಲಿರುವ ಮೂಲಭೂತ ಸೌಲಭ್ಯ ಮತ್ತು ಸಮಸ್ಯೆಗಳನ್ನು ಉಮಾಶ್ರೀ ಗಮನಕ್ಕೆ ತಂದರು.

Advertisement

ನಂತರ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಸದಸ್ಯ ಬಲವಂತಗೌಡ ಪಾಟೀಲ ಹಾಗೂ ಕಾಂಗ್ರೆಸ್‌ ಮುಖಂಡರು ವಿಪ ಸದಸ್ಯೆ ಉಮಾಶ್ರೀ ಅವರನ್ನು ಸನ್ಮಾನಿಸಿದರು. ವಯೋನಿವೃತ್ತಿಯಾದ ಪುರಸಭೆ ಲೇಖಪಾಲಕ ವಿ.ಜಿ. ಕುಲಕರ್ಣಿ ಅವರನ್ನು ವಿಪ ಸದಸ್ಯೆ ಉಮಾಶ್ರೀ ಸನ್ಮಾನಿಸಿದರು.

ಈ ವೇಳೆ ಪುರಸಭೆ ಸದಸ್ಯ ಶೇಖರ ಅಂಗಡಿ, ಹೊಳೆಪ್ಪ ಬಾಡಗಿ, ಸಿದ್ದು ಬೆನ್ನೂರ, ಸುರೇಶ ಜಾಧವ, ವಿನೋದ ಸಿಂಪಿ, ಮನೋಜ
ಬಸಂತಾನಿ, ವಿಠuಲ ಕುಳಲಿ, ಆನಂದ ಬಂಡಿ, ಶೆಟ್ಟೆಪ್ಪ ಕೆಳಗಡೆ, ಶ್ರೀಶೈಲ ದೊಡಮನಿ, ಮಹಾಲಿಂಗ ಮಾಳಿ, ಲಕ್ಕಪ್ಪ ಭಜಂತ್ರಿ,
ಮಹಾಲಿಂಗ ಕಂದಗಲ್‌, ದಾದಾಪೀರ ಕರೋಶಿ, ಚಂದ್ರು ಕಾಗಿ, ಪುರಸಭೆ ಅಧಿಕಾರಿಗಳಾದ ಎಸ್‌. ಎನ್‌. ಪಾಟೀಲ, ಪಿ.ವೈ. ಸೊನ್ನದ, ಸಿ.ಎಸ್‌. ಮಠಪತಿ, ಮಹಾಲಿಂಗ ಮೂಗಳಖೋಡ, ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next