Advertisement

Words;ಮಾತುಗಳು ಪವಿತ್ರವಾದ ಮನಸ್ಸುಗಳನ್ನು ಕೆಡಿಸದಿರಲಿ

10:13 PM Dec 21, 2023 | Team Udayavani |

ಲಾಂಗೂಲ ಚಾಲನ ಕ್ವೇಡಾ
ಪ್ರತಿನಾಚೋ ವಿವರ್ತನಮ್‌
ದಂತಮರ್ದನ ಮಾರಾವಃ
ತತೋಯುದ್ಧ ಪ್ರವರ್ತತೇ
ದೂರದಲ್ಲಿ ಒಂದು ಮಾಂಸದ ತುಣುಕಿದೆ. ಅದನ್ನು ಕಂಡ ಎರಡು ನಾಯಿಗಳಿಗೆ ಅದು ತನಗೇ ದಕ್ಕ ಬೇಕೆಂಬಾಸೆ. ಸ್ವಭಾವದಂತೆ ಮೊದಲು ಬಾಲವನ್ನಾಡಿಸಿದವು. ಅನಂತರ ಗುರ್ರನೆ ಗುರುಗುಟ್ಟಿದವು. ಅತೀ ಕೋಪದಿಂದ ಹತ್ತಿರವಾದವು. ಹಲ್ಲು ಕಿಸಿದು ಬೊಗಳಿ ಒಂದರ ಮೇಲೊಂದೆರಗಿ ಹೋರಾಡಿದವು. ಶಕ್ತಿಹೀನವಾದ ನಾಯಿ ಸೋಲೊಪ್ಪಿದರೆ, ಬಲಿಷ್ಠ ನಾಯಿ ಗೆದ್ದು ಮಾಂಸದ ತುಣುಕನ್ನು ತನ್ನದಾಗಿ ಸಿಕೊಳ್ಳುತ್ತದೆ. ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಧರ್ಮರಾಯನಿಗೆ ಉಂಟಾದ ಕುತ್ಸಿತ ವೈರಾಗ್ಯ ಭಾವವಿದು.
ಕುರುಕ್ಷೇತ್ರ ಯುದ್ಧದ ಅನಂತರ ಈ ರಾಷ್ಟ್ರದಲ್ಲಿ ಹಲವು ಯುದ್ಧಗಳು ನಡೆದಿರ ಬಹುದು. ಬಾಹುಬಲಿ, ಅಶೋಕ ಚಕ್ರವರ್ತಿಯ ಹೊರತಾಗಿ ಅನ್ಯರಾರಿಗೂ ಧರ್ಮಜನಿಗೆ ಉಂಟಾದಂತಹ ವೈರಾಗ್ಯ ಭಾವ ಬಂದಿರಲಾರದೇನೋ?. ತುಂಡು ಭೂಮಿ, ಧನಕನಕ, ಮನೆಮಠ, ಹೆಣ್ಣು ಹೊನ್ನು, ಅಧಿಕಾರ ಗದ್ದುಗೆ, ಮತ- ಪಂಥ-ಪಂಗಡ, ಧರ್ಮಕರ್ಮ, ಮೇಲು ಕೀಳು ಇತ್ಯಾದಿಗಳಿಗಾಗಿ ಕಚ್ಚಾಡುವ ಬಡಿದಾ ಡು ವವರ ಮನದಲ್ಲಿ ಧರ್ಮ ರಾಯನಲ್ಲಿ ಉಂಟಾದ ಭಾವನೆಯ ಅರೆಕಾಳಷ್ಟು ಅಂಶ ವಾದರೂ ಒಡಮೂಡಿದ್ದರೆ ಬಹುಶಃ ಕೆಲವು ಗಂಭೀರ ದುರಂತ- ಅನಾಹುತಗಳು ತಪ್ಪಿ ಹೋಗುವ ಅವಕಾಶವಿತ್ತೇನೋ?.

Advertisement

ಮರೆಯಲಾರದ ಮಾತಿನೇಟುಗಳು
ಇಂದು ಕತ್ತಿ, ಗಧೆ, ಗುರಾಣಿ, ಬಂದೂಕು, ಫಿರಂಗಿ ಇತ್ಯಾದಿಗಳ ಮೂಲಕ ಯುದ್ಧಗಳು ನಡೆಯುವುದು ನಮ್ಮಲ್ಲಿ ಅಷ್ಟಾಗಿ ಗೋಚರಿ ಸುವುದಿಲ್ಲ ಎನ್ನುವುದು ನಿಜವೆಂದೆನಿಸುತ್ತದೆ. ಆದರೆ ಅಂತಹ ಯುದ್ಧಗಳನ್ನೂ ಮೀರಿಸು ವಂತಹ ವಾಗ್ಯುದ್ಧಗಳಿಗೇನೂ ಕೊರತೆ ಇಲ್ಲ. ನಿತ್ಯ ಸುದ್ದಿಗಳ ಸದ್ದಿನಲ್ಲಿ ಗಮನ ಸೆಳೆಯು ವಂತಹ ಮಹಾ ಸ್ಫೋಟಕವೇ ಈ ವಾಕ್‌ ಸಮರಗಳು.

“ಘಟಂ ಬಿಂದ್ಯಾತ್‌ ಪಟಂ ಛಿಂದ್ಯಾತ್‌ ಯಥಾ ರಾಸಭ ರೋಹಣಂ ಏನಕೇನ ಪ್ರಕಾರೇಣ ಪ್ರಸಿದ್ಧೋ ಪುರುಷೋ ಭವ’ ಎಂಬ ನುಡಿಯೊಂದಿದೆ. ಮಡಕೆಗಳನ್ನು ಒಡೆದೋ, ಬಟ್ಟೆಗಳನ್ನು ಹರಿದೆಸೆದೋ, ಕತ್ತೆಯ ಮೇಲೇರಿ ಸವಾರಿ ಮಾಡಿಯಾದರೂ ಸರ್ವರ ಚಿತ್ತಗಳನ್ನು ತನ್ನತ್ತ ಸೆಳೆದು ಕುಪ್ರ ಸಿದ್ಧರಾಗಲು ಯತ್ನಿಸುವವರು ಇದ್ದಾರೆ ಎನ್ನುವುದು ಈ ವಾಕ್ಯದ ಅರ್ಥ. ತನ್ನ ವಿಕೃತಿ ಗಳಿಂದ ಪರಸ್ಪರ ನಿಂದೆ, ಅಪ ನಿಂದೆ, ಕೀಳು ಮಟ್ಟದ ಅಹಸ್ಯ ಮಾತುಗಳಿಂದ, ಅಪ ಪ್ರಚಾರ, ವ್ಯಕ್ತಿಗತ ನಿಂದನೆಯ ಮೂಲಕ ತೇಜೋ ವಧೆಗೆ ಯತ್ನಿಸಿ ಪುಕ್ಕಟೆ ಪ್ರಚಾರ ಗಳಿಸುವ ಕುತಂತ್ರದ ಪಿತೂರಿಗಳು, ವಾಕ್‌ ಸಮರ ಗಳು ರಕ್ತದೋಕುಳಿಯ ಅಣು ಯುದ್ಧ ಕ್ಕಿಂತಲೂ ಒಂದು ಕೈ ಮಿಗಿಲೆನಿಸಿದರೆ ತಪ್ಪಾಗ ದೇನೋ?. ಆಯುಧ ಕಾಳಗದಲ್ಲಿ ಒಂದೇ ಸಲಕ್ಕೆ ಪ್ರಾಣ ಹೋಗಬಹುದು. ಆದರೆ ಪರಷು ವಾಕ್ಯ ಗಳು ಕ್ಷಣ ಕ್ಷಣಕ್ಕೂ ಸಂಹರಿಸು ತ್ತಲೇ ಇರುತ್ತವೆ!

ದೊಣ್ಣೆಯ ಏಟು ನೋವು ಮಾಯುವ ವರೆಗೆ ಮಾತ್ರ, ಆದರೆ ಮಾತಿನೇಟು ಸಾವಿನ ವರೆಗೂ ಕಾಡುತ್ತದೆಯಂತೆ. ಹೌದಲ್ಲಾ?. ಕಠೊರವಾದ ನಿಂದನೆಗಳು, ಅಪಹಾಸ್ಯಗಳು ಒಂದೊಮ್ಮೆ ಮಹಾ ದುರಂತಕ್ಕೆ ಹೇತು ವಾಗಲೂ ಸಾಧ್ಯವಾದೀತೇನೋ?
ಮಯ ನಿರ್ಮಿತ ಮಾಯಾ ಅರಮನೆ ಯಲ್ಲಿ ದುರ್ಯೋಧನ ಅಯೋಮಯವಾಗಿ ಎಡವಿಬಿ¨ªಾಗ ಗಹಗಹಿಸಿ ನಕ್ಕ ದ್ರೌಪದಿಯು “ಅರಿಯದೆ ಬಿದ್ದಿರೆ ಭಾವಾ ಕುರುಡರ ಕುರು ಕುಲದೇವಾ’ ಎಂದು ಕೆಣಕಿದ್ದು ಕುರುಕ್ಷೇತ್ರ ಮಹಾಯುದ್ಧಕ್ಕೆ ನಿಗದಿ ಪಡಿಸಿದ ಮೂಹೂರ್ತ ಎಂದು ಸ್ವತಃ ಸುಯೋಧನನೇ ಒಂದೆಡೆ ನುಡಿದಿ¨ªಾನಲ್ಲವೇ?.
ವಾಞಮೇ ಮನಸಿ ಪ್ರತಿಷ್ಠಿತಾ ಮನೋಮೇ ವಾಚಿ ಪ್ರತಿಷ್ಠಿತಾಃ ಎಂಬ ಐತರೇಯ ಉಪನಿಷತ್ತಿನ ವಾಕ್ಯವು ನನ್ನ ಮಾತು ಮನಸ್ಸಿನಲ್ಲಿ ಪ್ರತಿಷ್ಠಿತವಾಗಲಿ ಮತ್ತು ನನ್ನ ಮನಸ್ಸು ಮಾತಿನಲ್ಲಿ ಪ್ರತಿಷ್ಠಿ ತವಾಗಲಿ ಎಂದು ನಿರ್ದೇಶಿಸಿದೆ. ಉಪ ನಿಷದ್‌ ವಾಕ್ಯದ ಕನಿಷ್ಠಾಂಶವಾದರೂ ನಮ್ಮಲ್ಲಿ ರೂಢಿಸಲ್ಪಟ್ಟರೆ ಬಹುಶಃ ಇಷ್ಟೊಂದು ವಾಗ್ವಿ ವಾದಗಳು ನಡೆಯಲು ಅವಕಾಶವಿರುತ್ತಿರ ಲಿಲ್ಲವೇನೋ?.

ನಾಲಗೆಯು ಆಚಾರವಂತವಾಗಿರಲಿ
“ಮಾತಿನಿಂ ನಗೆ ನುಡಿಯು ಮಾತಿನಿಂ ಹಗೆಹೊಲೆಯು, ಮಾತಿನಿಂ ಸರ್ವ ಸಂಪದವು ಲೋಕಕ್ಕೆ ಮಾತೇ ಮಾಣಿಕ್ಯ ಸರ್ವಜ್ಞ’ ಎಂಬ ವಚನವನ್ನು ನಮ್ಮ ಕೆಲವು ರಾಜಕಾರಣಿಗಳು ಅರಿತರೆ ಒಳ್ಳೆಯದು. “ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದು ಎನಬೇಕು’ ಎಷ್ಟು ಸುಂದರವಾಗಿದೆ ಬಸವಣ್ಣರ ತತ್ತ್ವ , ಪುರಂದರ ದಾಸರಂತೂ “ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ’ ಎಂದು ವಾಕಾಚಾರವನ್ನೇ ಸಾರಿ¨ªಾರೆ.

Advertisement

ನಮ್ಮ ಮಾತುಗಳು ಮನೆಕೆಡಿಸುವುದು ಬೇರೆ ವಿಚಾರ ಆದರೆ ಪವಿತ್ರವಾದ ಮನಸ್ಸುಗಳನ್ನು ಕೆಡಿಸದಂತಿರಲಿ. ಸಮಾಜದ ಸ್ವಾಸ್ಥ್ಯ ವನ್ನು ನಾಶಗೊಳಿಸದಿರಲಿ.
“ಕೋ ಮೂಕೋ ಯಃ ಕಾಲೇ ಪ್ರಿಯಾಣಿ ವಕುಂನ ಜಾನಾತಿ’ ಅಪರೂಪಕ್ಕಾದರೂ ಒಳ್ಳೆಯ ಮಾತನ್ನು ಆಡಲು ಅರಿಯ ದವನಿಗಿಂತ ಮೂಕನೇ ಎಷ್ಟೋ ಮೇಲು, ಇದು ಶಂಕರ ಭಗವತ್ಪಾದರ ಅಭಿಮತ. ಬೇಕಾಬಿಟ್ಟಿ ನಾಲಗೆಯನ್ನು ಹರಿಯಬಿಟ್ಟು ಅನ್ಯರನ್ನು ವಾಚಾನುಗೋಚರವಾಗಿ ನಿಂದಿ ಸುವುದು, ಬಾಯ್ದೆರೆದರೆ ಪುಂಖಾನುಪುಂಖ ವಾಗಿ ಸುಳ್ಳಿನ ಸರಮಾಲೆಯನ್ನೇ ಹೊಮ್ಮಿ ಸುವುದು. ಅಸತ್ಯವಚನ ಮತ್ತು ವಚನ ಭ್ರಷ್ಟತೆಗೆ ಮುಗ್ಧರನ್ನು ಬಲಿಯಾಗಿಸಿ ಏಮಾರಿ ಸುವುದು ಕೆಲವು ಸಂದರ್ಭದಲ್ಲಿ ನಡೆಯ ಬಹುದು. ಆದರೆ ಅಂತಹ ಚಾಳಿಗಳಿಗೆ ಒಂದು ದಿನ ತಕ್ಕ ಶಾಸ್ತಿಯಾಗಿಯೇ ಆಗುತ್ತದೆ. ಏಕೆಂದರೆ ಎಲುಬಿಲ್ಲದ ನಾಲಗೆಯು ಯಾವತ್ತಿದ್ದರೂ ಘನಗಟ್ಟಿಯಾದ ಹಲ್ಲುಗಳ ಕವಚದಲ್ಲೇ ಸುರಕ್ಷಿತವಾಗಿರುತ್ತದೆ. ಅಂತಹ ಹಲ್ಲುಗಳು ನಾಲಗೆಯ ನೀಚ ಬುದ್ಧಿಗೆ ಬಲಿಯಾದರೆ? ಮುಂದೆ ಊಹಿಸಿಕೊಳ್ಳ ಬೇಕು. ಆದುದರಿಂದ ಜಿಹ್ವಾ ಪರಿ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಸರ್ವರಿಗೂ ಶ್ರೇಯಸ್ಕರವಲ್ಲವೇ?.

ಮೋಹನದಾಸ ಸುರತ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next