Advertisement
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾಚಣೆಯಲ್ಲಿ ನನಗೆ ಟಿಕೆಟ್ ಕೊಡಿಸಲು, ಸೋಲಿಸಲು ನಿರಾಣಿ ಯಾರು ಎಂದು ಹರಿಹಾಯ್ದು, ಪಾಲಿಕೆ ಚುನಾವಣೆಯಲ್ಲಿ ನೀವು ಯಾರಿಗೆ ಎಷ್ಟು ಹಣ ಕೊಟ್ಟಿದ್ದೀರಿ ಎಂಬುದು ಗೊತ್ತು, ಈ ವಿಚಾರ ಚುನಾವಣಾ ವೀಕ್ಷಕರಿಗೆ, ಕೇಂದ್ರದ ನಾಯಕರಿಗೂ ತಿಳಿದಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗಾಗಿ ಪಕ್ಷದಿಂದಾಗಲಿ, ನಿರಾಣಿ ಹಾಗೂ ವಿಜಯೇಂದ್ರ ಹಣ ನೀಡಿಲ್ಲ, ನಾವು ಹಣ ಪಡೆದಿಲ್ಲ. ನಗರದ ಮತದಾರರು ನಮ್ಮ ಅಭ್ಯರ್ಥಿಗಳಿಗೆ ಹಣ ಪಡೆಯದೇ ಅಭಿವೃದ್ಧಿಗಾಗಿ ಮತ ಹಾಕಿ ಗೆಲ್ಲಿಸಿದ್ದಾರೆ ಎಂದರು.
Related Articles
Advertisement
ಇಷ್ಟಕ್ಕೂ ನನಗೆ ಟಿಕೆಟ್ ಕೊಡಿಸುವ ಮಾತಿರಲಿ, ನಿರಾಣಿ ಕುಟುಂಬದಲ್ಲಿ ಎಷ್ಟು ಜನ ಅಣ್ಣತಮ್ಮಂದಿರು ಚುನಾವಣೆಗೆ ನಿಲ್ಲುತ್ತಾರೆ ಎಂದು ಹೇಳಲಿ. ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಎಷ್ಟು ಜನ ನಿಲ್ಲುತ್ತಾರೆ ಎಂದು ಸ್ಪಷ್ಟಪಡಿಸಲಿ. ನನ್ನ ಮನೆಯಲ್ಲಿ ನಾನೊಬ್ಬನೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು.
”ಮುರುಗೇಶ ನಿರಾಣಿಗೆ ಸಚಿವ ಸ್ಥಾನ ನೀಡದಿದ್ದರೆ ಪಂಚಮಸಾಲಿ ಸಮಾಜ ನಿಮ್ಮ ವಿರುದ್ಧ ತಿರುಗಿ ಬೀಳಲಿದೆ ಎಂದು ವಚನಾನಂದಸ್ವಾಮಿ ಬಹಿರಂಗ ವೇದಿಕೆಯಲ್ಲೇ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲೆ ಮಾಡಿದ್ದರು. ರಾಜಕೀಯ ಲಾಭಕ್ಕಾಗಿ ಬಹಿರಂಗವಾಗಿಯೇ ಸಮಾಜವನ್ನು ದುರ್ಬಳಕೆ ಮಾಡಿಕೊಂಡಿದ್ದನ್ನು ರಾಜ್ಯದ ಜನ ನೋಡಿದ್ದಾರೆ ಎಂದರು.
ವಚನಾನಂದಸ್ವಾಮಿ ಮಾತಿನಿಂದ ಯಡಿಯೂರಪ್ಪ ವೇದಿಕೆಯಿಂದ ನಿರ್ಗಮಿಸಲು ಮುಂದಾದ ಸಂದರ್ಭದಲ್ಲಿ ಸುತ್ತೂರು ಶ್ರೀಗಳು, ಬೊಮ್ಮಾಯಿ ಅವರು ಅದನ್ನು ತಡೆದಿದ್ದರು. ಹೀಗೆ ಬ್ಲಾಕ್‍ಮೇಲ್ ಮಾಡಿ ಸಚಿವರಾದವರು ನಿರಾಣಿ ಎಂದು ವಾಗ್ದಾಳಿ ನಡೆಸಿದರು.
ನಿರಾಣಿ, ವಚನಾನಂದಸ್ವಾಮಿ ಪಂಚಮಸಾಲಿ ಸಮಾಜಕ್ಕೆ ಮೀಸಲು ಬೇಕೆಂದು ಹೋರಾಟ ಮಾಡಿದವರೇ ಅಲ್ಲ. ಹೋರಾಟದ ಮಧ್ಯದಲ್ಲಿ ಬಂದು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ, ಮಂತ್ರಿಯಾಗಲು ಮುಖ್ಯಮಂತ್ರಿ ಆಗಲು ರಾಜಕೀಯ ಬ್ಲಾಕ್‍ಮೇಲ್ ಮಾಡಲು ಸಮಾಜದ ಶಕ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದರು.
ಪಂಚಮಸಾಲಿ ಸಮಾಜದ ಹಿಂದೆ ಹಿರಿಯರು ಹೋರಾಟ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ನಾನೂ ಹೋರಾಟವನ್ನು ಮಾಡಿಕೊಂಡು ಬಂದಿದ್ದೇನೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗಲೇ ನನ್ನ ನೇತೃತ್ವದಲ್ಲಿ ಸಮಾಜದ ಪ್ರಮುಖರೊಂದಿಗೆ ದೆಹಲಿಯಲ್ಲಿ ಪ್ರಮುಖರ ನಿಯೋಗ ಭೇಟಿ ಮಾಡಿ 2ಎ ಮೀಸಲಾತಿಗೆ ಆಗ್ರಹಿಸಿದ್ದೇವೆ ಎಂದರು.
ಹಿಂದೆ ಅರ್ಧಕ್ಕೆ ನಿಲ್ಲಿಸಿದ್ದ ಪಂಚಮಸಾಲಿ ಮೀಸಲು ಹೋರಾಟವನ್ನು ಮತ್ತೆ ಮುಮದುವರೆಸಿದ್ದೇವೆ. ಇಷ್ಟಕ್ಕೂ ಈಗಲೂ ನಿಮ್ಮಲ್ಲಿ ಶಕ್ತಿ ಇದ್ದರೆ, ನಿಜವಾದ ಬದ್ಧತೆ ಇದ್ದರೆ ತ್ವರಿತವಾಗಿ ಸಮಾಜಕ್ಕೆ ಮೀಸಲು ಕಲ್ಪಿಸಿ ಎಂದು ಸಚಿವ ನಿರಾಣಿಗೆ ಶಾಸಕ ಯತ್ನಾಳ ಸವಾಲು ಹಾಕಿದರು.
ಮೀಸಲಾತಿ ಕುರಿತು ಸಚಿವ ಸಂಪುಟದ ಅಜೆಂಡಾದಲ್ಲೇ ಇಲ್ಲ. 2ಸಿ ಹಾಗೂ 2 ಡಿ ಎಂದರೆ ಏನು ಎಂದು ಈ ವರೆಗೆ ನಡಾವಳಿಗಳನ್ನೇ ನೀಡಿಲ್ಲ. 2ಡಿ ಪ್ರವರ್ಗದಲ್ಲಿ ಎಲ್ಲಾ ವೀರಶೈವ-ಲಿಂಗಾಯತರಿಗೆ ಕೊಡುವುದಾಗಿ ಹೇಳಿದ್ದೀರಿ. ಹಾಗಿದ್ದರೆ 2ಡಿ ಪ್ರವರ್ಗಕ್ಕೆ ಎಷ್ಟು ಶೇಕಡಾ ಮೀಸಲು ಕೊಡುತ್ತೀರಿ ಎಂದು ನಿಖರವಾಗಿ ಹೇಳಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲು 2 ತಿಂಗಳ 9 ದಿನಗಳು ಮಾತ್ರ ಬಾಕಿ ಇದೆ. 3 ತಿಂಗಳಲ್ಲಿ ಮೀಸಲು ಕಲ್ಪುಸುವಾಗಿ ನಿರಾಣಿ ಹೇಳುವುದೆಲ್ಲ ಸುಳ್ಳು. ಮೀಸಲು ಕಲ್ಪಿಸಿವುದು ಅಸಾಧ್ಯವಂದೇ ಈ ಮಾತಿನ ಅರ್ಥ ಎಂದು ದೂರಿದರು.
ಪರಿಶಿಷ್ಟ ಜಾತಿ-ಪಂಗಡಕ್ಕೆ ಇತರೆ ಸಮುದಾಯಗಳನ್ನು ಸೇರ್ಪಡೆ ಮಾಡಲು ಕುಲಶಾಸ್ತ್ರ ಅಧ್ಯಯನ ಬೇಕು. ಪ್ರವರ್ಗಕ್ಕೆ ಸೇರಲಿ ಕುಲಶಾಸ್ತ್ರ ಆಧ್ಯಯನ, ಹಿಂದುಳಿದ ವರ್ಗದ ಆಯೋಗದ ವರದಿ ಪಡೆಯುವ ಅವಶ್ಯಕತೆ ಇಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.
ಆರ್ಥಿಕ ದುರ್ಬಲ ಸಮುದಾಯದವರಿಗೆ ಪ್ರಧಾನಿ ಮೋದಿ ಅವರು ಶೇ.10 ರಷ್ಟು ಮೀಸಲು ಕಲ್ಪಿಸಿದ್ದಾರೆ. ಮೀಸಲಾತಿ ಇಲ್ಲದ ಸಮುದಾಯಗಳಿಗೆ ಇಲ್ಲಿ ಅವಕಾಶ ಕಲ್ಪಿಸಿದ್ದರೂ ಲಿಂಗಾಯತರೂ ಇದರಲ್ಲಿ ಸೇರಲು ಸಾಧ್ಯವಿಲ್ಲ. ಇದನ್ನು ಪಡೆಯಲು ಕಠಿಣ ನಿಯಮಗಳಿವೆ. ಇದರಲ್ಲಿ ಶೇ.2 ರಷ್ಟು ಲಿಂಗಾಯತರಿಗೆ ಕೊಡುವುದಾಗಿ ಹೇಳಿದ್ದರೂ ಅದೂ ಅಸಾಧ್ಯ ಎಂದರು.