Advertisement

ನರೇಗಾ ಯೋಜನೆ ಸದ್ಬಳಕೆಯಾಗಲಿ : ಸಿಇಒ

04:07 PM Jun 19, 2021 | Girisha |

ಚಡಚಣ: ಲಾಕ್‌ಡೌನ್‌ ಸಮಯದಲ್ಲಿ ಹಳ್ಳಿಗರಿಗೆ ಕೆಲಸವಿರುವುದಿಲ್ಲ. ನಿಮ್ಮ ಜೀವನೋಪಾಯಕ್ಕಾಗಿ ನರೇಗಾ ಯೋಜನೆ ಆರಂಭಿಸಲಾಗಿದ್ದು ಅಗತ್ಯ ಇರುವವರು ಸದ್ಬಳಕೆ ಮಾಡಿಕೊಳ್ಳುವಂತೆ ಜಿಪಂ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಸಲಹೆ ನೀಡಿದರು. ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ಇಂಚಗೇರಿ ಕೆರೆ ಮತ್ತು ಕನಕನಾಳ ಹಳ್ಳದ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

Advertisement

ನೀವು ಸರಿಯಾಗಿ ಕೆಲಸ ಮಾಡಿದರೆ ಯಾವಾಗಲೂ ನಿಮಗೆ ಕೆಲಸ ಸಿಗುವುದು. ಗಂಡು ಹೆಣ್ಣಿಗೆ ಸಮಾನವಾಗಿ ವೇತನ ನೀಡಲಾಗುವದು. ಪ್ರತಿಯೊಬ್ಬರಿಗೂ 289 ರೂ. ಹಾಗೂ 10 ರೂ. ಸಲಕರಣೆಗಳ ಸಲುವಾಗಿ ನೀಡಲಾಗುವದು. ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿರಿ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಿ. ನೀವುಗಳು ಕೆಲಸಕ್ಕೆ ತಯಾರಾದರೆ ಯಾವಾಗಲೂ ಕೆಲಸ ಕೊಡುವ ಜವಾಬ್ದಾರಿ ನಮ್ಮದು. ನಿಮಗೆ ಯಾವುದೇ ತೊಂದರೆಗಳಿದ್ದರೆ ತಿಳಿಸಿರಿ ಎಂದು ಹೇಳಿದರು.

ಅಂಗವಿಕಲರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಕೆಲಸಕ್ಕೆ ಬಂದರೆ ಅವರು ಶೇ. 50 ಕೆಲಸ ಮಾಡಿದರೆ ಪೂರ್ಣ ಪಗಾರ ಕೊಡಲಾಗುವದು. ಇದರಿಂದ ಜೀವನೋಪಾಯ ಆರ್ಥಿಕ ಪರಿಸ್ಥಿತಿ ಸುಧಾರಿಸುವದು. ಚಿಕ್ಕ ಮಕ್ಕಳು ಬಂದರೆ ಅವರನ್ನು ಗಮನಿಸಲು ಆಯಾಗಳನ್ನು ನೇಮಿಸಿ ಅವರಿಗೆ ಏನಾದರೂ ತೊಂದರೆಯಾದರೆ ಪ್ರಥಮ ಚಿಕಿತ್ಸೆ ನೀಡಲಾಗುವುದು ಎಂದರು.

45 ವರ್ಷ ಮೇಲ್ಪಟ್ಟ ಮಹಿಳೆಯರು ಸೇರಿದಂತೆ ಎಲ್ಲರಿಗೂ ಆರೋಗ್ಯ ಇಲಾಖೆಯಿಂದ ಲಸಿಕೆ ಮ¤ತು ಮಾಸ್ಕ್ ನೀಡಲಾಗುವದು. ಇಂಚಗೇರಿ ಕೆರೆಯಲ್ಲಿ 77 ಜನರು ಕೆಲಸ ಮಾಡುತ್ತಿದ್ದರೆ, ಕನಕನಾಳದಲ್ಲಿ 110 ಜನರು ಕೆಲಸ ಮಾಡುತ್ತಿದ್ದಾರೆ ಎಂದರು. ತಾಪಂ ಇಒ ಸಂಜಯ ಖಡಗೇಕರ, ಸಹಾಯಕ ನಿರ್ದೇಶಕ ಮಹಾಂತೇಶ ಹೋಗೊಡಿ, ಮಹೇಶ ದೈವಾಡಿ, ಪಿಡಿಒ ವಿಶ್ವನಾಥ ರಾಠೊಡ, ಟೆಕ್ನಿಕಲ್‌ ಕೋ-ಆರ್ಡಿನೇಟರ್‌ ಶಿವಶರಣ, ಬಾಬರ, ಅರುಣ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next