Advertisement
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರಕಾರವೊಂದು ಸಂಸತ್ತಿನ ಆದೇಶವನ್ನು ಪ್ರಶ್ನಿಸಲು ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಲ ಸರಕಾರವನ್ನು ನೇರವಾಗಿ ಪ್ರಶ್ನಿಸಿತು.
ನಾವು ಒಪ್ಪುತ್ತೇವೆ; ಆದರೆ ರಾಜ್ಯ ಸರಕಾರವೊಂದು ಸಂಸತ್ತಿನ ಆದೇಶವನ್ನು ಯಾವ ನೆಲೆಯಲ್ಲಿ ಪ್ರಶ್ನಿಸಲು ಸಾಧ್ಯ ಎಂಬುದನ್ನು ನೀವು ನಮಗೆ ಮನವರಿಕೆ ಮಾಡಿಕೊಡಿ’ ಎಂದು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಲ ಸರಕಾರಕ್ಕೆ ಹೇಳಿತು. ಪಶ್ಚಿಮ ಬಂಗಾಲ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಅವರು ಈ ವಿಷಯದಲ್ಲಿ ವೈಯಕ್ತಿಕ ನೆಲೆಯಲ್ಲಿ ಕೋರ್ಟ್ ಮೆಟ್ಟಲೇರಬಹುದಾಗಿದೆ ಎಂದು ಜಸ್ಟಿಸ್‌ಗಳಾದ ಎ ಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ ಹೇಳಿತು.