Advertisement

ಕೆಂಪೇಗೌಡರ ಆದರ್ಶ ವಿಶ್ವಮಾನ್ಯಗೊಳಿಸೋಣ

07:11 AM Jun 28, 2020 | Lakshmi GovindaRaj |

ಮಾಗಡಿ: ಕೆಂಪೇಗೌಡರ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡು, ಅವರು ಕಟ್ಟಿದ ನಾಡನ್ನು ಪುನರ್‌ ನಿರ್ಮಾಣ ಮಾಡುವುದೇ ನಮ್ಮ ಮುಂದಿರುವ ಗುರಿ ಎಂದು ಕೆಂಪೇಗೌಡ ಅಭಿವೃದಿಟಛಿ ಸಮಿತಿ ರಾಜ್ಯಾಧ್ಯಕ್ಷ ಎಚ್‌.ಎಂ.ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಕೆಂಪೇಗೌಡರ 511ನೇ ಜಯಂತ್ಯುತ್ಸವ ಪ್ರಯುಕ್ತ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಎಲ್ಲರಿಗೂ ಸಿಹಿ ವಿತರಿಸಿ ಮಾತನಾಡಿದರು.

Advertisement

ಕೋವಿಡ್‌ 19 ಸಂಕಷ್ಟದಿಂದಾಗಿ ಅದ್ಧೂರಿ ಜಯಂತಿ ಬೇಡ ಎಂದು ಸರಳವಾಗಿ ಆಚರಿಸಿದ್ದೇವೆ. ನಾಡಪ್ರಭು ಕೆಂಪೇಗೌಡರ ತವರೂರು ಮಾಗಡಿಯಲ್ಲೇ ಜುಲೈ 15ರಂದು ಕೋವಿಡ್‌  19 ಸಂಕಷ್ಟದ ಬಡವರಿಗೆ ಅಹಾರ ಪದಾರ್ಥಗಳ ಕಿಟ್‌ ವಿತರಿಸಲು ತೀರ್ಮಾನಿಸಿದ್ದೇನೆ. ಅರ್ಹರು ಆಹಾರ ಪದಾರ್ಥಗಳ ಕಿಟ್‌ ಪಡೆದುಕೊಳ್ಳಬೇಕು. ಕೆಂಪೇಗೌಡರು ನಿರ್ಮಿಸಿದ ಗುಡಿ, ಗೋಪುರಗಳು, ಕೆರೆಕಟ್ಟೆಗಳು, ಮಠಮಂದಿರಗಳು, ಕೋಟೆ ಕೊತ್ತಲೆಗಳನ್ನು ಉಳಿಸಿ ಆದರ್ಶ ವಿಶ್ವಮಾನ್ಯಗೊಳಿಸೋಣ ಎಂದು ಸಲಹೆ ನೀಡಿದರು.

ಅಭಿನಂದನೆ: ನಾಡಪ್ರಭು ಕೆಂಪೇಗೌಡರ 511 ನೇ ಜಯಂತಿ ನಿಮಿತ್ತ ಕೆಂಪೇಗೌಡರ ಬೃಹತ್‌ ಕಂಚಿನ  ಪ್ರತಿಮೆ ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ  ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಅಭಿನಂದನೆ ಸಲ್ಲಿಸಿದರು. ಎಲ್‌.ವಿ ಟ್ರಾವೆಲ್ಸ್‌ ಮಾಲೀಕ ಪರಮಶಿವಯ್ಯ ಮಾತನಾಡಿದರು. ಸಿದ್ದರಾಜು, ಶ್ರೀನಿವಾಸಯ್ಯ, ಗಂಗಾಧರ್‌, ಆನಂದ್‌, ದೊಡ್ಡಿಮೋಹನ್‌, ಕುಮಾರ್‌, ಲೋಕೇಶ್‌,  ತಮ್ಮಯ್ಯ, ಮೂರ್ತಿ, ಶಿವರಾಮ, ಗಂಗರಾಜು, ರವಿ,ಜಯರಾಮು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next