Advertisement

ಪತ್ರಕರ್ತರು ನ್ಯಾಯದ ಪರವಾಗಿರಲಿ: ಹೂಗಾರ

03:10 PM Jul 20, 2022 | Team Udayavani |

ಯಾದಗಿರಿ: ಪತ್ರಕರ್ತರು ಅ ಧಿಕಾರದಲ್ಲಿ ಇರುವವರ ಹಿಂಬಾಲಕರಾಗದೇ ಜನರಿಗೆ ಉತ್ತರ ನೀಡುವಂತಿರಬೇಕು ಹಾಗೂ ನ್ಯಾಯದ ಪರವಾಗಿ ಇರಬೇಕು ಎಂದು ಹಿರಿಯ ಪತ್ರಕರ್ತ ಸುಭಾಷ ಹೂಗಾರ ಹೇಳಿದರು.

Advertisement

ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ನಿಮಿತ್ತ ಹಮ್ಮಿಕೊಂಡಿದ್ದ “ಮರೆಯಾಗುತ್ತಿರುವ ತನಿಖಾ ಪತ್ರಿಕೋದ್ಯಮ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.

ಪತ್ರಕರ್ತರಿಂದ ಸತ್ಯ ಹೇಳುವ ಕೆಲಸವಾಗಬೇಕು. ಸತ್ಯ ಹೇಳುವವರು ಹಾಗೂ ಕೇಳುವವರ ಸಂಖ್ಯೆ ಇಲ್ಲದಿರಬಹುದು. ಆದರೂ ಪತ್ರಕರ್ತರು ಸತ್ಯ ಹೇಳಬೇಕು, ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಪತ್ರಿಕೋದ್ಯಮದ ಮೂಲ ಉದ್ದೇಶ, ಆಶಯ ಬದಲಾವಣೆಯಾಗಬಾರದು. ಕಾರ್‍ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದಷ್ಟೇ ಜವಾಬ್ದಾರಿ ಪತ್ರಿಕಾರಂಗಕ್ಕಿದೆ. ಈ ಮೂರು ರಂಗದ ತಪ್ಪುಗಳಾದಾಗ ಅಥವಾ ಜನರ ಬೇಡಿಕೆಗೆ ಬೆಲೆ ಸಿಗದಿದ್ದಾಗ ಪತ್ರಿಕಾ ರಂಗ ಅವರಿಗೆ ನೆರವಾಗುವ ಮೂಲಕ ಸಮಾಜದ ತಾಯಿ ಪಾತ್ರದ ಸ್ಥಾನ ವಹಿಸಬೇಕು ಎಂದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿರ್ಭಿತಿಯಿಂದ ಪತ್ರಕರ್ತರು ವರದಿ ಮಾಡಬೇಕು. ಅಲ್ಲದೇ ಸಮಾಜದಲ್ಲಿನ ಹುಳುಕು ಎತ್ತಿ ತೋರಿಸುವ ಕೆಲಸ ಮಾಡಬೇಕಿದೆ. ರಾಜಕಾರಣಿಗಳು ವಸ್ತುನಿಷ್ಠ, ಸತ್ಯ ವರದಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು ಎಂದರು.

ವೈದ್ಯ ಡಾ| ಶರಣಬಸವಪ್ಪ ಕಾಮರೆಡ್ಡಿ ಬೆಂಡೆಬೆಂಬಳಿ ಮಾತನಾಡಿ, ಪತ್ರಕರ್ತರ ಸೇವೆ ವಿಭಿನ್ನ. ನಿಜಕ್ಕೂ ಅವರು ಒಳ್ಳೆಯ ಸಮಾಜ ಕಟ್ಟುವ ರೂವಾರಿಗಳು ಎಂದರು.

Advertisement

ಯಾದಗಿರಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸುದರ್ಶನ ನಾಯಕ, ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್‌ ಠಾಕೂರ ಹಾಗೂ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತ ನರಸಪ್ಪ ನಾರಾಯಣೋರ ಪ್ರಾಸ್ತಾವಿಕ ಮಾತನಾಡಿದರು.

ಈ ವೇಳೆ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಯೂಡಾ ಅಧ್ಯಕ್ಷ ರುದ್ರಗೌಡ ಪಾಟೀಲ, ನಗರಸಭೆ ಸದಸ್ಯ ಚೆನ್ನಕೇಶವಗೌಡ ಬಾಣತಿಹಾಳ, ಕಸಾಪ ಜಿಲ್ಲಾಧ್ಯಕ್ಷ ಡಾ| ಸಿದ್ದಪ್ಪ ಹೊಟ್ಟಿ, ವಾರ್ತಾ ಇಲಾಖೆ ಹಿರಿಯ ಉಪ ನಿರ್ದೇಶಕ ಸಿದ್ದೇಶ್ವರಪ್ಪ ಬಿ.ಜಿ., ರಾಜ್ಯ ಪರಿಷತ್‌ ಸದಸ್ಯ ರಾಘವೇಂದ್ರ ಕಾಮನಟಗಿ, ಉಪಾಧ್ಯಕ್ಷರಾದ ರಾಜಕುಮಾರ ನಳ್ಳೀಕರ್‌, ಗುಂಡಾಭಟ್‌ ಜೋಶಿ, ಪ್ರಧಾನ ಕಾರ್ಯದರ್ಶಿ ದಿನೇಶ್‌ ವಿ.ಸಿ, ಕಾರ್ಯದರ್ಶಿ ಸೈಯದ್‌ ಸಾಜೀದ್‌, ಖಜಾಂಚಿ ಕುಮಾರಸ್ವಾಮಿ ಕಲಾಲ ಇತರರಿದ್ದರು. ಪತ್ರಕರ್ತ ಎಸ್‌.ಎಸ್‌. ನಾಯಕ ಸ್ವಾಗತಿಸಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next