Advertisement
ಯಾವ ರೀತಿ ದಾಳಿ ನಡೆಸಬೇಕು ಎಂಬ ಬಗ್ಗೆ ಜು. 16 ಮತ್ತು 17ರಂದು ಎರಡೂ ಉಗ್ರ ಸಂಘಟನೆಯ ಹಿರಿಯ ನಾಯಕರು ಲೆಕ್ಕಾಚಾರ ಹಾಕಿದ್ದಾರೆ. ಯಾತ್ರಿಕರು ತೆರಳುವ ದಾರಿ, ಆಸುಪಾಸಿನ ಸ್ಥಳಗಳಿಗೂ ತೆರಳಿ ಪರಿಶೀಲಿಸಿದ್ದಾರೆ ಎಂದು ಬೇಹು ಸಂಸ್ಥೆಗಳು ಎಚ್ಚರಿಕೆ ನೀಡಿದ್ದಾಗಿ “ಇಂಡಿಯಾ ಟುಡೇ’ ವರದಿ ಮಾಡಿದೆ. ಲಷ್ಕರ್ ಕಮಾಂಡರ್ ಅಬು ಹುರಾರಿಯಾ ಎಂಬಾತ ಶ್ರೀನಗರದ ಗುಲಾಬ್ ಬಾಗ್ ಮತ್ತು ಝಕೂರಾ ಪ್ರದೇಶದಲ್ಲಿ ನೆಲೆಸಿದ್ದು, ಈ ಬಗ್ಗೆ ಯೋಜನೆ ರೂಪಿಸಿದ್ದಾನೆ. ಅದೇ ಸಂಘಟನೆಯ ಮತ್ತೂಬ್ಬ ಸಲೀಮ್ ಪಾರಿ ಯಾತ್ರೆಯ ಸ್ಥಳವಾಗಿರುವ ಖುಸರ್‌ಪೋರಾ ಮತ್ತುಹಜಿನ್ ಎಂಬಲ್ಲಿ ಇದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ಮಿರ್ ಝರ್ಗಾಮ್ ಎಂಬಾತನೂ ಅಲ್ಲೇ ಇದ್ದ.
ಶನಿವಾರ 663 ಮಂದಿಯ ಮತ್ತೂಂದು ತಂಡ ಅಮರನಾಥ ಯಾತ್ರೆಗಾಗಿ ತೆರಳಿದೆ.
Related Articles
ಇನ್ನೊಂದೆಡೆ ಕಣಿವೆ ರಾಜ್ಯದ ಆವಂತಿಪುರದಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್‌ಪಿಎಫ್ ಸಿಬಂದಿ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಐವರು ಸಿಬಂದಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
Advertisement
ಹಿಂದೆ ನಡೆದಿದ್ದ ದಾಳಿಗಳು2017 ಜುಲೈ 10: 08
2001 ಜುಲೈ 20: 13
2000 ಆಗಸ್ಟ್ 2: 89