Advertisement
ಭಾರತ ಸರಕಾರ, ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು ಮತ್ತು ಕಣ್ವರ್ಷಿ ಮಹಿಳಾ ಮಂಡಲ ಕಾಣಿಯೂರು ಇದರ ಆಶ್ರಯದಲ್ಲಿ ಇಲ್ಲಿನ ಹಿ.ಪ್ರಾ.ಶಾಲೆಯಲ್ಲಿ ನಡೆದ ಮಹಿಳಾ ದಿನಾಚರಣೆ ಮತ್ತು ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಅವರು ಮಾತನಾಡಿದರು.
ಮಹಿಳೆ ಏನನ್ನೂ ಸಾಧಿಸಬಲ್ಲಳು. ಶಿವಾಜಿ, ವಿವೇಕಾನಂದರು ಮೊದಲಾದ ಪುರುಷ ಸಾಧಕರಿಗೆ ಪ್ರೇರಣೆ ತಾಯಿ ಆಗಿದ್ದಾಳೆ. ಹೀಗಾಗಿ ಹೆಣ್ಣನ್ನು ಕೀಳು ಮಟ್ಟದಲ್ಲಿ ನೋಡುವುದು ಸರಿಯಲ್ಲ. ಮೀಸಲಾತಿ ಕೊಟ್ಟು ಹೆಣ್ಣಿನ ಶೋಷಣೆ ನಡೆಸಲಾಗುತ್ತಿದೆ ಎಂದರು. ಮಹಿಳೆಯರು ಅತ್ಯಾಚಾರ, ಶೋಷಣೆ, ದೌರ್ಜನ್ಯದ ವಿರುದ್ಧ ಹೋರಾಡಬೇಕು. ಇಂದಿನ ಸಮಾಜದಲ್ಲಿ ಮಹಿಳೆಯರು ಹಗಲಿನಲ್ಲೂ ನಿರ್ಭಯವಾಗಿ ನಡೆದಾಡುವುದು ಕಷ್ಟವಾಗಿದೆ. ಆದ್ದರಿಂದ ತಾಯಂದಿರು ಮಕ್ಕಳನ್ನು ಐಎಎಸ್, ಐಪಿಎಸ್, ಎಂಜಿನಿಯರ್ ಕನಸು ಮಾತ್ರ ಕಾಣದೇ ಒಬ್ಬ ಆದರ್ಶ ಮಗ, ಮಗಳನ್ನು ರೂಪಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಈಗಿನ ಪರಿಸ್ಥಿತಿಯಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಆಗಿದ್ದಾಳೆ. ಮಹಿಳೆಯರು ಒಗ್ಗಟ್ಟಾಗಿರಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಸೀತಮ್ಮ ಖಂಡಿಗ ವಹಿಸಿದ್ದರು. ಮುಖ್ಯ ಅತಿಥಿಗಳಾದ ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್, ತಾ.ಪಂ. ಸದಸ್ಯೆ ಲಲಿತಾ ಈಶ್ವರ್, ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ, ಕಾಣಿ ಯೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಯೋಗಿನಿ ಶೆಟ್ಟಿ, ನೆಹರೂ ಯುವ ಕೇಂದ್ರದ ಗುರುಪ್ರಿಯಾ ನಾಯಕ್, ಜಿಲ್ಲಾ ಯುವಜನ ಒಕ್ಕೂಟದ ನೂತನ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮಾತನಾಡಿದರು. ವೇದಿಕೆಯಲ್ಲಿ ಚಾರ್ವಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಗಣೇಶ್ ಪೆರ್ಲೋಡಿ, ಕಣ್ವರ್ಷಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ರೋಹಿಣಿ ಅಬೀರ, ಅಧ್ಯಕ್ಷೆ ಮಮತಾ ಲೋಕೇಶ್ ಅಗಳಿ ಉಪಸ್ಥಿತರಿದ್ದರು. ಧನ್ಯಾ, ಮಮತಾ ಗುಂಡಿಗ¨ªೆ, ವೀಣಾ ಮುಗರಂಜ, ಸುಚಿತ್ರಾ ಕಟ್ಟತ್ತಾರು, ಅಮಿತಾ ಅನಿಲ, ಪೂರ್ಣಿಮಾ ಬೆದ್ರಾಜೆ, ಸುಲೋಚನಾ ಅನಿಲ, ಜಯಾ ಮಾದೋಡಿ, ಸುಲೋಚನಾ ಮುಗರಂಜ ಅತಿಥಿಗಳಿಗೆ ಹೂಗುಚ್ಚ ನೀಡಿದರು.
Related Articles
Advertisement