Advertisement
ನಗರದ ಜಿಲ್ಲಾ ಬಾಲ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಆಶ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವ್ಯವಸ್ಥಿತ ಮತದಾರರಿಗೆ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್) ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮತದಾರರ ಗುರುತಿನ ಚೀಟಿ ಪಡೆಯದೇ ಇರುವ ಫಲಾನುಭವಿಗಳನ್ನು ಗುರುತಿಸಿ, ಹೆಸರು ನೋಂದಾಯಿಸಬೇಕು. ಕೂಡಲೇ ಅವರಿಗೆ ಮತದಾರರ ಚೀಟಿ ನೀಡಬೇಕು ಎಂದು ಈ ಸಂದರ್ಭದಲ್ಲಿ ಯಾದಗಿರಿ ತಹಶೀಲ್ದಾರ್ ಅವರಿಗೆ ಆದೇಶಿಸಿದರು.
Related Articles
ಸುರಪುರ: ದೇಶದ ಸುಭದ್ರ ಪ್ರಜಾಪ್ರಭುತ್ವ ತಳಹದಿಗೆ ಮತದಾನ ಮೂಲವಾಗಿದೆ. ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಚುನಾವಣಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್ ತಿಳಿಸಿದರು.
Advertisement
ನಗರದ ಮಾರುಕಟ್ಟೆ ಪ್ರದೇಶದಲ್ಲಿ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾರರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಮಹತ್ವವಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತ ಚಲಾಯಿಸುವ ಹಕ್ಕನ್ನು ಸಂವಿಧಾನ ನೀಡಿದ್ದು, ಪ್ರತಿಯೊಬ್ಬ ಮತದಾರನೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿವಿ ಪ್ಯಾಟ್ ಯಂತ್ರ ಬಳಿಸಲಾಗುತ್ತಿದ್ದು, ಇದರಿಂದ ಮತದಾರ ತಾನು ಹಾಕಿರುವ ಮತ ದೃಢಪಡಿಸಿಕೊಳ್ಳಬಹುದಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರು ಪ್ರಭುಗಳಾಗಿದ್ದು, ಯಾವುದೇ ಅಮಿಷಗಳಿಗೂ ಬಲಿಯಾಗದೆ ಪಾರದರ್ಶಕವಾಗಿ ಮತ ಚಲಾಯಿಸುವ ಅಗತ್ಯವಿದೆ ಎಂದು ನುಡಿದರು. ಕ್ಷೇತ್ರ ಶಿಕ್ಷಣಾಧಿ ಕಾರಿ ನಾಗರತ್ನಾ ಓಲೇಕಾರ್, ಪೌರಯುಕ್ತದೇವಿಂದ್ರ ಹೆಗ್ಗಡೆ, ಸಿಡಿಪಿಒ ಮೀನಾಕ್ಷಿ, ಅಂಗನವಾಡಿ ಮೇಲ್ವಿಚಾರಕಿ ಚಂದ್ರಲೀಲಾ ನಿಂಬೂರ್, ಪ್ರಾಶಾಶಿ ಸಂಘದ ಅಧ್ಯಕ್ಷ ಸೋಮರಡ್ಡಿ ಮಂಗ್ಯಾಳ, ಸಿಆರ್‌ಪಿ ತಿಪ್ಪಣ್ಣ, ಎಪಿಎಫ್‌ನ ಅನ್ವರ್ ಜಮಾದಾರ್ ಸೇರಿದಂತೆ ದರಬಾರ ಶಾಲೆ, ದರಬಾರ್ ಉರ್ದು ಶಾಲೆ, ಕಬಾಡಗೇರಾ, ರಾಣಿ ಜಾನಕೀದೇವಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಇದ್ದರು. ಸಿಆರ್‌ಪಿ ಸಿದ್ದಣ್ಣ ದಂಡಗುಂಡ ಅವರ ತಂಡವು ಹಾಡುಗಳ ಮೂಲಕ ಮತದಾನ ಜಾಗೃತಿ ಮೂಡಿಸಿದರು.