Advertisement

ಹೈಕೋರ್ಟ್ ತೀರ್ಮಾನ ಪಾಲನೆ ಮಾಡಬೇಕೆಂದು ಕಾಂಗ್ರೆಸ್ ಬಾಯ್ಬಿಡಲಿ : ಜೋಶಿ ಸವಾಲು

01:46 PM Feb 21, 2022 | Team Udayavani |

ಬೆಂಗಳೂರು : ಬಜರಂಗದಳದ ಕಾರ್ಯಕರ್ತನ ಹತ್ಯೆ ಪ್ರಕರಣದ ಬಗ್ಗೆ ಸಂಪೂರ್ಣ ತೆನಿಖೆ ಆಗಬೇಕು, ಈ ಹಿಂದೆಯೂ ಶಿವಮೊಗ್ಗದಲ್ಲಿ ಈ ರೀತಿಯ ಘಟನೆಗಳು ಆಗಿದ್ದು, ಸರ್ಕಾರದ ಗಂಭೀರವಾಗಿ ಪರಿಗಣಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಮುಸ್ಲಿಂ ಗುಂಡಾಗಳು ಕೊಲೆ ಹಿಂದೆ ಇದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ ಅಂದ್ರೆ ಅದು ಗಂಭೀರವಾದ ಸಂಗತಿ.ಆ ದಿಕ್ಕಿನತ್ತ ತೆನಿಖೆ ಮಾಡಬೇಕು.ಎಲ್ಲಾ ಗುಂಡಾಗಳನ್ನ ಬಂಧಿಸಿ ಒಳಗೆ ಹಾಕಬೇಕು ಎಂದರು.

ಹಿಜಾಬ್ ವಿಚಾರಕ್ಕೆ ಸಂಬಂಧಿಸಿ, ಹೈಕೋರ್ಟ್ ನ ಮಧ್ಯಂತರ ತೀರ್ಪುನ್ನ ಎಲ್ಲರು ಪಾಲನೆ ಮಾಡಬೇಕು.ಯಾರು ಮಧ್ಯಂತರ ತೀರ್ಪುನ್ನ ಪಾಲನೆ ಮಾಡೋದಿಲ್ಲ ಅವರಮೇಲೆ ನಿರ್ಧ್ಯಕ್ಷಣ್ಯವಾಗಿ ಕ್ರಮ ಕೈಗೊಳ್ಳಬೇಕು. ಎಲ್ಲಾ ರೀತಿಯ ಸಂಬಳಿಸುವ ಪ್ರಯತ್ನವನ್ನ ರಾಜ್ಯ ಸರ್ಕಾರ ಮಾಡಿದೆ.
ಈಗ ಸಂಬಾಳಿಸುವ ಸಮಯ ಮಯಗಿದಿದೆ. ಹೈಕೋರ್ಟ್ ತೀರ್ಪುನ್ನ ಪಾಲನೆ ಮಾಡೋದಿಲ್ಲ ಅಂದರೆ ಉದ್ಧಟತನ.ನ ಅದನ್ನು ಸರ್ಕಾರ ಸಹಿಸೋದಿಲ್ಲ‌. ತೀರ್ಪುನ್ನ ಯಾರು ಪಾಲಿಸೋದಿಲ್ಲವೋ ಅವರನ್ನ ಒದ್ದು ಒಳಗೆ ಹಾಕಬೇಕು ಎಂದರು.

ಗೃಹ ಇಲಾಖೆ ವಿಫಲವಾಗಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದು ಕೊಲೆಯಾಗಿದೆ ಅಂತ ಸರ್ಕಾರ ವಿಫಲವಾಗಿದೆ ಗೃಹ ಸಚಿವರು ವಿಫಲವಾಗಿದ್ದಾರೆ ಅಂತ ಹೇಳೋದಲ್ಲ.ಇದರ ತನಿಖೆಯನ್ನ ಸಂಪೂರ್ಣವಾಗಿ ಮಾಡಬೇಕು.ತಪ್ಪಿತಸ್ಥರನ್ನ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಕಾಂಗ್ರೆಸ್ ಅಹೋರಾತ್ರಿ ಧರಣಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಧರಣಿ ಮಾಡುವ ಹಕ್ಕಿದೆ ಮಾಡಲಿ, ಆದರೆ ಯಾಕೆ ಹೋರಾಟ ಮಾಡುತ್ತಿದ್ದಾರೆ..? ಕಾಂಗ್ರೆಸ್ ಗೆ ಹೈಕೋರ್ಟ್ ತಿರ್ಪಿನ ಬಗ್ಗೆ ಒಂದು ಸ್ಪಷ್ಟತೆ ಇಲ್ಲ.ಹೈಕೋರ್ಟ್ ತಿರ್ಪು ಪಾಲನೆ ಮಾಡಬೇಕಾ ಮಾಡಬಾರದ ಅನ್ನೋ ಸ್ಪಷ್ಟತೆ ಇಲ್ಲ.ಕಾಂಗ್ರೆಸ್ ಗೆ ಇವತ್ತು ಬೇರೆ ಯಾವುದೇ ಇಷು ಇಲ್ಲ.ಕಾಂಗ್ರೆಸ್ ಗೆ ಹಿಜಾಬ್ ವಿಚಾರದಲ್ಲಿ ಮುಸ್ಮಾನರ ಪರವಾಗಿ ತಗೆದುಕೊಳ್ಳಬೇಕಾ ಅಥವ ವಿರುದ್ಧ ತಗೆದುಕೊಳ್ಳಬೇಕಾ ಅನ್ನೋ ಕನ್ಫ್ಯೂಷನ್ ನಲ್ಲಿದೆ. ಕಾಂಗ್ರೆಸ್ ಪಾರ್ಟಿ ರಾಷ್ಟ್ರಮಟ್ಟದಲ್ಲಿ ಒಂದು ಕನ್ಫ್ಯೂ ಸ್ ಡ್ ಪಾರ್ಟಿ, ಕನ್ಫ್ಯೂಷನ್ ಲೀಡರ್ಸ್ ಎಂದರು.

Advertisement

ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರತಿದಿನ ಜಗಳವಾಡ್ತಿದ್ದಾರೆ.ಕಾಂಗ್ರೆಸ್ ಹೈಕೋರ್ಟ್ ತೀರ್ಮಾನ ಪಾಲನೆ ಮಾಡಬೇಕು ಎಂದು ಬಾಯಿ ಬಿಟ್ಟು ಹೇಳಲಿ ನೋಡಣ. ಹೇಳಿದರೆ ಮುಸ್ಲಿಂ ವೋಟ್ ಕೈತಪ್ಪುತ್ತೆ ಅನ್ನೋ ಭಯ ಕಾಂಗ್ರೆಸ್ ಗಿದೆ. ಹಿಜಾಬ್ ವಿಚಾರದಲ್ಲಿ ಅವರ ನಿಲುವು ಏನು ಅನ್ನೋದನ್ನ ಮೊದಲು ತಿಳಿಸಲಿ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next