Advertisement

ಸ್ವಚ್ಛತೆಗೆ ನಮ್ಮೆಲ್ಲರ ಆದ್ಯತೆ ಇರಲಿ: ಸಿಇಒ

04:14 PM Oct 03, 2020 | Suhan S |

ಶಹಾಪುರ: ಮಹಾತ್ಮ ಗಾಂಧಿಧೀಜಿ ಜೀವನದಲ್ಲಿ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದರು. ಅವರ ಆಶಯದಂತೆ ಪ್ರತಿಯೊಬ್ಬರು ಪರಿಸರದಲ್ಲಿ ಸ್ವತ್ಛತೆ ಕಾಪಾಡುವ ಹೊಣೆ ಹೊರಬೇಕು. ಆಗ ಮಾತ್ರ ದೇಶ ಸ್ವಚ್ಛ ಮತ್ತು ಸುಂದರವಾಗಲಿದೆ ಎಂದು ಸಿಇಒ ಶಿಲ್ಪಾ ಶರ್ಮಾ ಹೇಳಿದರು.

Advertisement

ತಾಲೂಕಿನಲ್ಲಿ ದೋರನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಸ್ವಚ್ಛೋತ್ಸವ ನಿತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡ ಮಹತ್ವದ ಕನಸುಗಳಲ್ಲಿ ಸ್ವಚ್ಛತೆ ನಿರ್ವಹಣೆಯು ಕೂಡಾ ಒಂದಾಗಿತ್ತು. ಪ್ರತಿಯೊಬ್ಬರು ಸ್ವಚ್ಛತೆಯ ಅರಿವು ಹೊಂದಬೇಕು. ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸದ ಬುಟ್ಟಿಯಲ್ಲಿ ಹಾಕಬೇಕು. ಹಸಿ ಕಸ ಮತ್ತು ಒಣ ಕಸ, ಪ್ಲಾಸ್ಟಿಕ್‌ ವಸ್ತುಗಳು, ಘನ ವಸ್ತುಗಳು ಸೇರಿದಂತೆ ವಿಂಗಡಣೆ ಮಾಡಿ ಮನೆ ಬಳಿ ಬರುವ ಗ್ರಾಪಂ ಸಿಬ್ಬಂದಿಗೆ ಹಸ್ತಾಂತರಿಸಬೇಕು ಎಂದುರ.

ಪ್ರತಿಯೊಬ್ಬರು ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಮನೆಯ ಬಚ್ಚಲಿನ ನೀರನ್ನು ರಸ್ತೆಗೆ ಬಿಡದೆ ಮನೆಯ ಅಕ್ಕ-ಪಕ್ಕ ಅಥವಾ ಮುಂದೆ-ಹಿಂದೆ ನಿಮ್ಮ ಜಾಗ ಇರುವಲ್ಲಿ ಬಚ್ಚಲು ಗುಂಡಿಯ ಇಂಗು ತೊಟ್ಟಿಗಳನ್ನು ನಿರ್ಮಿಸಿಕೊಳ್ಳಿ. ಅದರಿಂದ ಸ್ವಚ್ಛತೆಗೆ ಬಹು ಸಹಕಾರವಾಗುತ್ತದೆ ಎಂದು ಸಲಹೆ ನೀಡಿದರು.

ತಾಪಂ ಇಒ ಜಗನ್ನಾಥ ಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ 122 ಗ್ರಾಮ ಪಂಚಾಯಿತಿಗಳಿದ್ದು, ಈ ಪೈಕಿ 101 ಗ್ರಾಪಂಗಳಿಗೆ ಸ್ಥಳವನ್ನು ಗುರುತಿಸಲಾಗಿದೆ. ಅದರಲ್ಲಿ 24 ಗ್ರಾಪಂಗಳಿಗೆ ಭೂಮಿ ಮಂಜೂರು ಮಾಡಲಾಗಿದೆ. ಇಲಾಖೆಯು 48 ಗ್ರಾಪಂಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಲಾಗಿದೆ. 20 ಗ್ರಾಪಂಗಳಿಗೆ ತ್ಯಾಜ್ಯ ಸಾಗಾಣಿಕೆಯ ವಾಹನಗಳನ್ನು ಖರೀದಿಸಲಾಗಿದೆ. ಸ್ಥಳಿಯವಾಗಿ ಸರ್ಕಾರಿ ಜಮೀನು ಹೊಂದಿಲ್ಲದ ಗ್ರಾಪಂಗಳನ್ನು ಜಮೀನು ಹೊಂದಿರುವ ಗ್ರಾಪಂಗಳ ಜೊತೆ ಬಹು ಗ್ರಾಮ ತ್ಯಾಜ್ಯ ಸಂಸ್ಕರಣ ಘಟಕ ಮಾಡಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.

ಜಿಪಂ ಯೋಜನಾ ನಿರ್ದೇಶಕ ಗುರುನಾಥ ಗೌಡಪ್ಪನವರ ಸ್ವಚ್ಛತೆ ಪ್ರತಿಜ್ಞಾವಿಧಿ ಬೋಧಿಸಿದರು. ಸ್ವಚ್ಛ ಭಾರತ ಮಿಷನ್‌ ಐಇಸಿ ಸಮಾಲೋಚಕ ಶಿವಕುಮಾರ, ಪ್ರೊಬೇಷನರಿ ಅಧಿಕಾರಿ ಅಶ್ವಿ‌ಜಾ, ಸಿಡಿಪಿಒ ಗುರುರಾಜ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next