Advertisement

ವ್ಯವಹಾರ ಜ್ಞಾನ ಇರಲಿ

12:31 PM Mar 02, 2018 | |

ಕೆ.ಆರ್‌.ನಗರ: ವ್ಯಾಪಾರ ಮತ್ತು ವ್ಯವಹಾರ ನಡೆಸಲು ವಸ್ತುವಿನ ಮೌಲ್ಯ ಗೊತ್ತಿರುವುದರ ಜತೆಗೆ ವ್ಯವಹಾರ ಜಾnನ ಇರಬೇಕು, ಇಲ್ಲವಾದರೆ ಮೋಸ ಹೋಗುತ್ತೇವೆ ಎಂದು ಸಿಆರ್‌ಪಿ ಪುರುಷೋತ್ತಮ್‌ ಹೇಳಿದರು.

Advertisement

 ಪಟ್ಟಣದ ಬಳೆ ವಿದ್ಯಾಸಂಸ್ಥೆಯಲ್ಲಿ ನಡೆದ ಆಹಾರ ಮೇಳದಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಹೊಸ ಶಿಕ್ಷಣ ನೀತಿಯಲ್ಲಿ ಮಗು ತನ್ನ ಜಾnನವನ್ನು ತಾನೇ ಕಟ್ಟಿಕೊಳ್ಳಬೇಕು. ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಜೀವನವನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಜನೆ ಮಾಡಿದವರೂ ಸರ್ಕಾರಿ ಕೆಲಸಕ್ಕೆ ಕಟ್ಟು ಬೀಳದೆ ಉತ್ತಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕೆಂದರು.

 ಸಂಸ್ಥೆಯ ವಿದ್ಯಾರ್ಥಿಗಳು ಒಳ್ಳೆಯ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ವಿದ್ಯೆ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಾಧನೆ ಮಾಡಿ ಎಂದು ಸಲಹೆ ನೀಡಿದರು.

ಎಆರ್‌ಟಿ ಸಂಯೋಜಕಿ ಪೂರ್ಣಿಮಾ, ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳಿರುವ ಆಹಾರ ತಿನ್ನಬೇಕು. ಇಲ್ಲವಾದರೆ ರೋಗ ಕಟ್ಟಿಟ್ಟ ಬುತ್ತಿ. ನಾಲಿಗೆ ರುಚಿಗಿಂತ ಗುಣಮಟ್ಟದ ಆಹಾರ ಬಳಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಯೋಗೀಶ್‌, ಉಪಾಧ್ಯಕ್ಷ ಭದ್ರಪ್ಪ, ಸದಸ್ಯೆ ಉಷಾ, ಸಿಆರ್‌ಸಿ ಮಹದೇವ್‌, ಯೋಗ ಗುರು ಮುದ್ದುಕೃಷ್ಣ, ಮುಖ್ಯ ಶಿಕ್ಷಕ ಸಿ.ಎಂ.ಕಿರಣ್‌, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next