Advertisement

ಬಿಜೆಪಿ ರಾಷ್ಟ್ರೀಕೃತ ಬ್ಯಾಂಕ್‌ ಸಾಲ ಮನ್ನಾ ಮಾಡಿಸಲಿ

10:12 AM Jul 07, 2017 | |

ಬಸವನಬಾಗೇವಾಡಿ: ಬಿಜೆಪಿ ನಾಯಕರಿಗೆ ರಾಜ್ಯದ ರೈತರ ಮೇಲೆ ಕಾಳಜಿಯಿದ್ದರೆ ಲೋಕಸಭೆಗೆ ಮುತ್ತಿಗೆ ಹಾಕಿ ರಾಜ್ಯದ ರೈತರ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾ ಮಾಡಲು ಮುಂದಾಗಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಶಿವಾನಂದ ಪಾಟೀಲ ಹೇಳಿದರು.

Advertisement

ಗೊಳಸಂಗಿಯಲ್ಲಿ ಎನ್‌ಟಿಪಿಸಿ ಕೂಡಗಿ ಸಹಯೋಗದಲ್ಲಿ ಶ್ರೀರಾಮಸ್ವಾಮಿ ಅಪ್ಪಣ್ಣಪ್ಪ ದಳವಾಯಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂದಾಜು 5.45ಕೋಟಿ ರೂ. ಗಳ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಬಸವನಬಾಗೇವಾಡಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ 100 ರೂ. ಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣ, ತಲಾ 8 ಕೋಟಿಯಲ್ಲಿ 2 ಬಸವ ಭವನ,
ವಿದ್ಯಾರ್ಥಿ ವಸತಿ ನಿಲಯಗಳು, ಪುರಸಭೆ ಕಚೇರಿ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣ ಮಾಡಲಾಗುವುದು ಎಂದರು. 

ಕೆರೂರಿನ ಚರಂತಿಮಠದ ಶ್ರೀ ಶಿವಕುಮಾರ ಶ್ರೀಗಳು ಸಾನ್ನಿಧ್ಯ, ಗ್ರಾಪಂ ಅಧ್ಯಕ್ಷೆ ಗೀತಾ ಗುಡದಿನ್ನಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಟಿಪಿಸಿಯ ಜಿ.ಎಂ. ಸಂಜೀವಕುಮಾರ, ರಮೇಶ ಸೂಳಿಭಾವಿ, ವಿಜಯಪುರ ಎಪಿಎಂಸಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಶೇಖಪ್ಪ ಬಳಿಗಾರ, ತಾನಾಜಿ ನಾಗರಾಳ, ತಾಪಂ ಸದಸ್ಯ ಶಿವಾನಂದ ಅಂಗಡಿ, ಸಹದೇವ ಪವಾರ, ಸಿದ್ದಪ್ಪ ಕಾಳಗಿ, ಅರ್ಜುನ ಪವಾರ, ತಾಜಮುಲ್ಲಾಖಾದ್ರಿ ಜಹಗೀರದಾರ, ತಹಶೀಲ್ದಾರ ಎಂ.ಎನ್‌. ಚೋರಗಸ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ, ತಾಪಂ ಅಧಿಕಾರಿ ಬಿ.ಎಸ್‌. ರಾಠೊಡ, ಎಪಿಎಂಸಿ ನಿರ್ದೇಶಕ ಸುರೇಶ
ತಳವಾರ, ತಾಪಂ ಸದಸ್ಯ ಅಮೃತ ಯಾದವ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶೇಖರ ದಳವಾಯಿ, ಜಿಲ್ಲಾ ದೇವಾಂಗ ಸಮಾಜದ
ಅಧ್ಯಕ್ಷ ಹೊನ್ನಪ್ಪ ಗುಳೇದಗುಡ್ಡ, ಪಿಕೆಪಿಎಸ್‌ ಚೇರಮನ್‌ ಮುರಗೇಶ ಹೆಬ್ಟಾಳ, ಬಂದೇನವಾಜ್‌ ಡೋಲಚಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದ ಏಳು ವ್ಯಕ್ತಿಗಳ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯಧನ ಚೆಕ್‌ ವಿತರಣೆ ಮಾಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next