Advertisement
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರಕಾರದ ಅವಧಿಯಲ್ಲಿ ಬೋವಿ ನಿಗಮದಲ್ಲಿ 87 ಕೋ. ರೂ., ಅಂಬೇಡ್ಕರ್ ನಿಗಮದಲ್ಲಿ 4.95 ಕೋ.ರೂ., ದೇವರಾಜ್ ಟ್ರಕ್ ಟರ್ಮಿನಲ್‌ನಲ್ಲಿ 47 ಕೋ. ರೂ., ಕೆಐಎಡಿಬಿಯಲ್ಲಿ 60 ಕೋ. ರೂ., ಕೊರೊನಾ ಅವಧಿಯಲ್ಲಿ 2,000 ಕೋ.ರೂ.ಗಳಿಗೂ ಅಧಿಕ ಹಗರಣಗಳಾಗಿವೆ.
ಸಿದ್ದರಾಮಯ್ಯ ಹೆಸರಿನಲ್ಲಿ ಪಾದಯಾತ್ರೆ ಮಾಡಿದರೆ, ನಾವು ಸುಮ್ಮನೆ ಬಿಡುವುದಿಲ್ಲ. ಜನರ ಬಳಿ ಹೋಗಿ ಬಿಜೆಪಿಯ ಭ್ರಷ್ಟಾಚಾರವನ್ನು ತೆರೆದಿಡುತ್ತೇವೆ. ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಗೆ ಈ ಜನ್ಮ ಮಾತ್ರ ಅಲ್ಲ ಮುಂದಿನ ಜನ್ಮದಲ್ಲೂ ಸಾಧ್ಯ ಇಲ್ಲ ಎಂದರು. ರಾಜ್ಯಪಾಲರಿಂದ ಸಂವಿಧಾನ ವಿರೋಧಿ ನಡೆ
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೊಟೀಸ್ ನೀಡುವ ಮೂಲಕ ರಾಜ್ಯಪಾಲರು ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ. ಆದ್ದರಿಂದ ರಾಜ್ಯಪಾಲರು ತತ್‌ಕ್ಷಣ ನೋಟಿಸನ್ನು ಹಿಂಪಡೆಯಬೇಕು. ಇಲ್ಲವಾದರೆ ಕಾನೂನು ಹೋರಾಟದ ಜತೆಗೆ ಬೀದಿಗಿಳಿದೂ ಹೋರಾಟ ಮಾಡಲಿದ್ದೇವೆ ಎಂದು ಐವನ್ ಡಿ’ಸೋಜಾ ಹೇಳಿದರು.
Related Articles
ಮುಡಾ ಪ್ರಕರಣದಲ್ಲಿ ಜಾಗ ಕಳೆದುಕೊಂಡಿದ್ದ ಸಿದ್ದರಾಮಯ್ಯ ಅವರ ಪತ್ನಿಗೆ ಸೈಟ್ ನೀಡಿರುವುದು ಬಿಜೆಪಿ ಅವಧಿಯಲ್ಲಿ. ಒಂದು ವೇಳೆ ಅಕ್ರಮ ಆಗಿದೆ ಎಂದಾದರೆ ನೋಟಿಸ್ ನೀಡಬೇಕಿರುವುದು ಸಿದ್ಧರಾಮಯ್ಯರ ಪತ್ನಿಗೆ, ಮುಡಾ ಅಧಿಕಾರಿಗಳಿಗೆ ಹಾಗೂ ಆ ಅವಧಿಯಲ್ಲಿ ಅಧಿಕಾರದಲ್ಲಿದ್ದವರಿಗೆ. ಅದು ಬಿಟ್ಟು ಕೇಂದ್ರ ಸರಕಾರದ ಅಣತಿಯಂತೆ ಕಾನೂನು ಪರಿಮಿತಿ ತಿಳಿಯದೆ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Advertisement
ಮುಖಂಡರಾದ ಎಂ.ಶಶಿಧರ್ ಹೆಗ್ಡೆ, ಅಶ್ರಫ್ ಕೆ., ಪ್ರಕಾಶ್ ಸಾಲಿಯಾನ್, ಅಪ್ಪಿ, ಕಿರಣ್ ಬುಡ್ಲೆಗುತ್ತು, ಸತೀಶ್ ಪೆಂಗಲ್, ಭಾಸ್ಕರ ರಾವ್, ಪ್ರೇಮನಾಥ್, ಮೀನಾ ಟೆಲ್ಲಿಸ್, ವಿಕಾಸ್ ಶೆಟ್ಟಿ, ಇಮ್ರಾನ್, ಅಬ್ದುಲ್ ಸಲೀಂ ಮೊದಲಾದವರು ಉಪಸ್ಥಿತರಿದ್ದರು.