Advertisement

ಬಿಜೆಪಿಯವರು ಮೊದಲು ತಮ್ಮ ಗೊಂದಲ ಸರಿಪಡಿಸಿಕೊಳ್ಳಲಿ: ಜಗದೀಶ್ ಶೆಟ್ಟರ್

02:24 PM Jun 24, 2023 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಒಂದು ಕಡೆ ಇವುಗಳಿಂದ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳುತ್ತಿದ್ದರೆ, ಇನ್ನೊಂದು ಕಡೆ ಗ್ಯಾರಂಟಿಗಳನ್ನು ಜಾರಿ ಮಾಡದಿದ್ದರೆ ಹೋರಾಟಕ್ಕೆ ಇಳಿಯುವುದಾಗಿ ಹೇಳುತ್ತಿದ್ದು ಮೊದಲು ಬಿಜೆಪಿಯವರು ತಮ್ಮ ಗೊಂದಲವನ್ನು ಸರಿಪಡಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗಳು ಬಡ ಜನತೆಗೆ ಅನುಕೂಲಕರವಾಗಿದ್ದು ಅವುಗಳನ್ನು ಸಹಿಸಿಕೊಳ್ಳುವ ಕೆಲಸ ಬಿಜೆಪಿ ಅವರಿಂದ ಆಗುತ್ತಿಲ್ಲ ಎಂದರು.

ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡದೆ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಬಡವರ ಊಟದ ವಿಚಾರದಲ್ಲಿ ಯಾರೂ ಸಹ ಇಂತಹ ಕಾರ್ಯ ಮಾಡಬಾರದು ಎಂದರು.

ಬಡವರಿಗೆ 10 ಕೆಜಿ ಅಕ್ಕಿಯನ್ನು ನೀಡುತ್ತೇವೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ ಬಿಜೆಪಿಯವರ ಹೇಳಿಕೆಯಂತೆ ಮೊದಲು ಕೇಂದ್ರದ ಅಪ್ಪಣೆ ಪಡೆದುಕೊಂಡು ನಾವು ಘೋಷಣೆ ಮಾಡಬೇಕಿತ್ತಾ? ಇದು ಒಕ್ಕೂಟ ವ್ಯವಸ್ಥೆಗೆ ಸರಿಯಾದ ಕ್ರಮವಲ್ಲ ಎಂದು ಶೆಟ್ಟರ ನುಡಿದರು.

ಸಂವಿಧಾನ ಬದ್ಧ ಹಾಗೂ ಒಕ್ಕೂಟ ವ್ಯವಸ್ಥೆಯಡಿ ಕಾಂಗ್ರೆಸ್ ಪಕ್ಷ ಕೇಂದ್ರದಿಂದ ಅಕ್ಕಿಯನ್ನು ಕೇಳುತ್ತಿದೆ. ಅದನ್ನು ಉಚಿತವಾಗಿ ಏನು ಕೇಳುತ್ತಿಲ್ಲ. ಹಣ ನೀಡುತ್ತೇವೆ ಎಂದರೂ ಸಹ ಅಕ್ಕಿ ನೀಡದೆ ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

Advertisement

ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯಡಿ ವಿವಿಧ ರಾಜ್ಯಗಳಿಂದ ಆಹಾರ ಧಾನ್ಯಗಳನ್ನು ಪಡೆದುಕೊಂಡು ಎಫ್‌ಸಿಐ ಅಡಿ ಸಂಗ್ರಹಿಸುತ್ತದೆ. ಆ ರೀತಿ ಸಂಗ್ರಹವಾದ ಅಕ್ಕಿಯನ್ನು ನಾವು ಕೇಳುತ್ತಿದ್ದೇವೆ ಇಲ್ಲವಾದರೆ ಕೇಂದ್ರ ಸರ್ಕಾರ ಧಾನ್ಯಗಳ ಸಂಗ್ರಹ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಿ ಬಿಡಲಿ ಎಂದರು

ಬಿಜೆಪಿಯವರು ತಮ್ಮ ವಿರುದ್ಧ ಸಣ್ಣ ಮಟ್ಟದ ಟೀಕೆಗೆ ಮುಂದಾಗಿರುವುದಕ್ಕೆ ನಾನು ಅಷ್ಟು ಸಣ್ಣ ಮಟ್ಟಕ್ಕೆ ಇಳಿದು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿಯವರು ಮುಂದಿನ ದಿನಗಳಲ್ಲಿ ಇನ್ನೇನು ಆಗಲಿದ್ದಾರೆ ನೋಡುತ್ತಾ ಇರಿ ಎಂದರು.

ಬಿಜೆಪಿಯವರ ಹಣೆ ಬರಹಕ್ಕೆ ಎಂದಿಗೂ ವಿಧಾನಸಭೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದಿರುವುದು ನೋಡಿದರೆ ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ಗೋಚರಿಸುತ್ತದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಇನ್ನಷ್ಟು ದಯನೀಯ ಸ್ಥಿತಿಗೆ ತಲುಪಲಿದೆ ಎಂದರು

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳು ಸಹ ಕಳೆದಿಲ್ಲ ಗ್ಯಾರಂಟಿ ಹಾಗೂ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಅನುಷ್ಠಾನಕ್ಕೆ ಕನಿಷ್ಠ ಆರು ತಿಂಗಳಾದರೂ ಸಮಯ ನೀಡಬೇಕು ಆದರೆ ಬಿಜೆಪಿಯವರು ಈಗಾಗಲೇ ಹೋರಾಟ ಶುರುವಿಟ್ಟುಕೊಂಡಿರುವುದು ಹಾಸ್ಯಸ್ಪದವಾಗಿದೆ ಎಂದರು.

ಮಾಜಿ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಅವರು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅವರು ನನ್ನೊಂದಿಗೆ ಈ ನಿಟ್ಟಿನಲ್ಲಿ ಯಾವುದೇ ಚರ್ಚೆ ಮಾಡಿಲ್ಲ ಎಂದು ಶೆಟ್ಟರ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next