ಬೀದರ: ಗಡಿಭಾಗ ಬೀದರನಲ್ಲಿ ಅನ್ಯ ಭಾಷೆಗಳಪ್ರಭಾವದ ಮಧ್ಯೆಯೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿಕರುನಾಡು ಸಾಂಸ್ಕೃತಿಕ ಭವನ ಪೂರಕವಾಗಿಚಟುವಟಿಕೆಗಳನ್ನ ಏರ್ಪಡಿಸುವಲ್ಲಿ ವೇದಿಕೆ ಒದಗಿಸಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ತಿಳಿಸಿದರು.
ನಗರದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯು ನಿರ್ಮಿಸಿರುವ ಕರುನಾಡು ಸಾಂಸ್ಕೃತಿಕ ಭವನ ಉದ್ಘಾಟಿಸಿಮಾತನಾಡಿದ ಅವರು, ಭವನದಲ್ಲಿ ನಿರಂತರ ಸಾಹಿತ್ಯಿಕ ಚಟುವಟಿಕೆಗಳು ನಡೆಯಲಿದೆ ಎಂದರು.
ಚಿಂತಕ ಎಸ್. ರಾಮಕೃಷ್ಣನ್ ಮಾತನಾಡಿ, ಕಳೆದ ಆರು ವರ್ಷಗಳಿಂದ ಸಾಹಿತ್ಯ ಕಮ್ಮಟ, ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕಕಾರ್ಯಕ್ರಮ ಮೂಲಕ ಕರುನಾಡು ವೇದಿಕೆಯು ರಾಜ್ಯಮಟ್ಟದಲ್ಲಿ ಹೆಸರು ಮಾಡಿದೆ. ಎಲೆಮರೆ ಕಾಯಿಯಂತಿರುವಸಾಹಿತಿ, ಕಲಾವಿದರಿಗೆ ವೇದಿಕೆಒದಗಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಉಸ್ತುವಾರಿ ಸಚಿವರ ಕಾರ್ಯಾಲಯದ ವಿಶೇಷ ಕರ್ತವ್ಯ ಅಧಿಕಾರಿ ಶಿವಕುಮಾರ ಕಟ್ಟೆ ಮಾತನಾಡಿ, ಸರ್ಕಾರ ಹಾಗೂ ದಾನಿಗಳ ನೆರವಿಲ್ಲದೆ ಶಿಕ್ಷಕ-ಸಾಹಿತಿ ಹಾಗೂ ಸಾಂಸ್ಕೃತಿಕ ಸಂಘಟಕ ಅತಿವಾಳೆಯವರು ತಮ್ಮ ಸ್ವಂತ ನಿವೇಶನದಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸಿ ನಿರಂತರ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಎಲ್ಲಾ ಕನ್ನಡಪರ ಸಂಘ-ಸಂಸ್ಥೆಗಳಿಗೆ ಉಚಿತವಾಗಿ ನೀಡುವ ಸಂಕಲ್ಪ ಮಾಡಿರುವುದು ಮಾದರಿ ಕಾರ್ಯ ಎಂದು ಬಣ್ಣಿಸಿದರು.
ವೇದಿಕೆಯ ಗೌರವಾಧ್ಯಕ್ಷ ಡಾ| ಸಂಜೀವಕುಮಾರ ಅತಿವಾಳೆ, ನಿವೃತ್ತ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪುಂಡಲಿಕರಾವ ಇಟಕಂಪಳ್ಳಿ ಮತ್ತು ಸಮಾಜ ಸೇವಾ ಸಮಿತಿ ಕಾರ್ಯದರ್ಶಿ ಬಿ.ಎಂ. ಶಶಿಕಲಾಮಾತನಾಡಿದರು. ಜಿಲ್ಲಾ ಮಡಿವಾಳಸಮಾಜದ ಗೌರವಾಧ್ಯಕ್ಷ, ದಿಗಂಬರ ಮಡಿವಾಳ ವೇದಿಕೆಯ ಅಧ್ಯಕ್ಷ ಡಾ| ಶಾಮರಾವ ನೆಲವಾಡೆ ಮಾತನಾಡಿದರು. ತಾಲೂಕು ಶಿಕ್ಷಕರ ಸಂಘದ ನೂತನ ನಿರ್ದೇಶಕರನ್ನು ಗೌರವಿಸಲಾಯಿತು. ಡಾ| ರವೀಂದ್ರ ಲಂಜವಾಡಕರ ಸ್ವಾಗತಿಸಿದರು. ಸುನಿತಾ ಬಿಕ್ಲೆ ನಿರೂಪಿಸಿದರು. ಶಿವಕುಮಾರ ಚನ್ನಶೆಟ್ಟಿ ವಂದಿಸಿದರು.