ಬೆಳಗಾವಿ: ನಗರದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಯಿ ಭುವನೇಶ್ವರಿ, ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ, ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಪುತ್ಥಳಿಗಳ ಮೆರವಣಿಗೆ, ವೀರಗಾಸೆ ಕಲಾಪ್ರದರ್ಶನ, ಸುಮಾರು 250 ಜನ ನಿರಾಶ್ರಿತರಿಗೆ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಗೀತ ರಸಮಂಜರಿ
ಕಾರ್ಯ ಕ್ರಮಗಳನ್ನೊಳಗೊಂಡಂತೆ ಉಸಿರುಗನ್ನಡ ಕನ್ನಡ ಉತ್ಸವವನ್ನು ಇತ್ತೀಚೆಗೆ ಅರ್ಥಪೂರ್ಣ ವಾಗಿ ಆಚರಿಸಲಾಯಿತು.
Advertisement
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿಗಳಾದ ಡಾ. ಅಲ್ಲಮಪ್ರಭು ಸ್ವಾಮಿಗಳು, ಬೆಳಗಾವಿ ಕರ್ನಾಟಕದ ಭಾಗವಾಗಿ ಉಳಿಯಲು, ಕನ್ನಡ ಗಟ್ಟಿಯಾಗಿ ನೆಲೆನಿಲ್ಲಲು ಕಾರಣ ನಾಗನೂರು ರುದ್ರಾಕ್ಷಿಮಠ ಹಾಗೂ ಡಾ. ಶಿವಬಸವ ಅಜ್ಜನವರು. ಹೀಗಾಗಿ ಬೆಳಗಾವಿ ಕರ್ನಾಟಕದ ಎರಡನೆಯ ರಾಜಧಾನಿ ಆಗಬೇಕು ಎಂಬುದು ಬೆಳಗಾವಿ ಜನತೆಯ ಬಹುದಿನಗಳ ಬೇಡಿಕೆಯಾಗಿದೆ. ಈ ಬೇಡಿಕೆಯನ್ನು ಕರ್ನಾಟಕ ಸರ್ಕಾರ ಕಚೇರಿಗಳ ಸ್ಥಳಾಂತರದ ಜೊತೆಗೆ ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು ಎಂದರು.
Related Articles
Advertisement
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ ಸ್ವಾಗತಿಸಿದರು. ವೃಂದಾ ಕಮತೆ ಮತ್ತು ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಪ್ರಾಧ್ಯಾಪಕಿ ಪ್ರೊ. ಅನಿತಾ ಪಾಟೀಲ ಪರಿಚಯಿಸಿದರು. ಪ್ರೊ. ಮಂಜುನಾಥ ಶರಣಪ್ಪನವರ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಡಾ. ಬಸಯ್ಯ ಮಠದ ವಂದಿಸಿದರು, ದೀಪಾ ಮತ್ತು ಸುದೀಪ ನಿರೂಪಿಸಿದರು.