Advertisement
ಗಡಿ ಭಾಗದಲ್ಲಿ ಭಾರತ ಮತ್ತು ಚೀನ ನಡುವೆ ಬಿಕ್ಕಟ್ಟು ಸೃಷ್ಟಿಯಾದ ಸಮಯ ದಿಂದಲೂ ನೇಪಾಲ ಸರಕಾರವು ಭಾರತಕ್ಕೆ ತಲೆನೋವಾಗಿ ಪರಿಣಮಿಸಲು ಪ್ರಯತ್ನಿಸುತ್ತಿತ್ತು. ಲಿಂಪಿಯಾಧುರಾ, ಲಿಪುಲೇಖ್, ಕಾಲಾ ಪಾನಿಯನ್ನು ನೇಪಾಲದ ಪ್ರದೇಶಗಳೆಂದು ಘೋಷಿಸಿದ ಓಲಿ, ಅದರ ನಕ್ಷೆಯನ್ನೂ ಬಿಡುಗಡೆ ಮಾಡಿ ಭಾರತದ ಮುನಿಸಿಗೆ ಪಾತ್ರರಾದರು. ಇದಷ್ಟೇ ಅಲ್ಲದೇ, ತಮ್ಮ ದೇಶದಲ್ಲಿ ಕೋವಿಡ್ ಹೆಚ್ಚಿರುವುದಕ್ಕೇ ಭಾರತವೇ ಕಾರಣ ಎಂದು ಆರೋಪಿಸಿದರು. ಚೀನದ ವೈರಸ್‌ಗಿಂತ ಭಾರತದ ವೈರಸ್ ಅಪಾಯಕಾರಿ ಎಂಬ ಅವರ ಹೇಳಿಕೆ ಭಾರತದಲ್ಲಷ್ಟೇ ಅಲ್ಲದೇ, ನೇಪಾಲದಲ್ಲೂ ಟೀಕೆಗೆ ಗುರಿಯಾಗಿತ್ತು. ಇನ್ನು ಎಲ್ಲಕ್ಕಿಂತ ಹೆಚ್ಚಾಗಿ, ರಾಮನ ಜನ್ಮಸ್ಥಾನದ ಕುರಿತು ಅವರು ನೀಡಿದ ವಿವಾದಾತ್ಮಕ ಹೇಳಿಕೆಯಂತೂ, ನೇಪಾಲ ಸರಕಾರ ಹದ್ದುಮೀರುತ್ತಿದೆ ಎನ್ನುವುದಕ್ಕೆ ಉದಾ ಹರಣೆಯಾಗಿತ್ತು. ಆದರೆ, ಚೀನದ ಕುಮ್ಮಕ್ಕಿನಿಂದ ಭಾರತದ ವಿರುದ್ಧ ಹೆಜ್ಜೆಯಿಡಲಾರಂಭಿಸಿದ್ದ ಓಲಿಯವರಿಗೆ ಅವರ ಈ ಧೂರ್ತ ನಡೆಗಳೇ ಕುರ್ಚಿಗೆ ಮಾರಕವಾಗುವಂಥ ಸ್ಥಿತಿ ತಂದಿಟ್ಟವು. ಸ್ವಪಪಕ್ಷೀಯರೇ ಓಲಿಯವರ ಚೀನ ಪರ ಧೋರಣೆಯನ್ನು ಪ್ರಶ್ನಿಸಲಾರಂಭಿಸಿದರು. ನೇಪಾಲದ ಚಿಂತಕರು, ನಿವೃತ್ತ ರಾಜ ಕಾರಣಿಗಳು ಹಾಗೂ ಸಾರ್ವಜನಿಕರೂ ಸಹ ಕೆ.ಪಿ. ಶರ್ಮಾ-ಜಿನ್‌ಪಿಂಗ್‌ರ ಅತಿಯಾದ ದೋಸ್ತಿಯನ್ನು ಖಂಡಿಸಲಾರಂಭಿಸಿದರು.
Advertisement
ತಪ್ಪು ತಿದ್ದಿಕೊಳ್ಳುತ್ತಿದೆ ನೇಪಾಲ ; ಬಾಂಧವ್ಯ ವೃದ್ಧಿಸಲಿ
12:16 AM Nov 02, 2020 | mahesh |
Advertisement
Udayavani is now on Telegram. Click here to join our channel and stay updated with the latest news.