Advertisement

‘ನಮ್ಮೆಲ್ಲ ವ್ಯವಹಾರವೂ ಸ್ವಚ್ಛವಾಗಿರಲಿ’

11:59 AM Oct 03, 2018 | Team Udayavani |

ಮೂಡಬಿದಿರೆ: ಸ್ವಚ್ಛತೆ ಎಂಬುದು ಕಸ, ತ್ಯಾಜ್ಯ ವಿಲೇವಾರಿ, ದೈಹಿಕ ಸ್ವಚ್ಛತೆಗೆ ಸೀಮಿತವಾಗಬಾರದು. ನಮ್ಮೆಲ್ಲ ನಡೆ, ನುಡಿ, ವ್ಯವಹಾರಗಳೂ ಕೂಡ ಸ್ವಚ್ಛವಾಗಿರಬೇಕು. ಭ್ರಷ್ಟಾಚಾರ ರಹಿತವಾಗಿರಬೇಕು. ಆ ಮೂಲಕ ನಾವು ಸ್ವಚ್ಛ ಭಾರತವನ್ನು ರೂಪಿಸಬೇಕಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಅಭಿಪ್ರಾಯಪಟ್ಟರು.

Advertisement

ರೋಟರಿ ಕ್ಲಬ್‌ ಮೂಡಬಿದಿರೆ ಟೆಂಪಲ್‌ ಟೌನ್‌, ತಹಶೀಲ್ದಾರರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಆರಕ್ಷಕ ಠಾಣೆ, ಪುರಸಭೆ, ಪ್ರಸ್‌ಕ್ಲಬ್‌ ಮೂಡಬಿದಿರೆ ಇವುಗಳ ಆಶ್ರಯದಲ್ಲಿ ಗಾಂಧೀ ಜಯಂತಿಯ ಪ್ರಯುಕ್ತ ಮೂಡಬಿದಿರೆಯಲ್ಲಿ ನಡೆದ 5ನೇ ವರ್ಷದ ಬೃಹತ್‌ ಸ್ವಚ್ಛತ ಆಂದೋಲನ, ಪೌರ ಕಾರ್ಮಿಕರ ಸಮ್ಮಾನ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸಮ್ಮಾನಿಸಿ ಅವರು ಮಾತನಾಡಿದರು.

ರೋಟರಿ ಕ್ಲಬ್‌, ಕಂದಾಯ ಇಲಾಖೆ ಸಹಿತ ವಿವಿಧ ಸಂಘಟನೆಗಳ ಸಹಭಾಗಿತ್ವದೊಂದಿಗೆ ಸ್ವಚ್ಛ ಮೂಡಬಿದಿರೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದೆ ಎಂದು ಅವರು ಶ್ಲಾಘಿಸಿದರು.

ಮೂಡಬಿದಿರೆಯ 8 ತಾಣಗಳಿಂದ ಹೊರಟ ಸ್ವಚ್ಛತಾಂದೋಲನ ಜಾಥಾದಲ್ಲಿ ವಿವಿಧ ವಿದ್ಯಾಸಂಸ್ಥೆಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸ್ವಚ್ಛತೆ, ಪ್ಲಾಸ್ಟಿಕ್‌ ವಿರೋಧಿ ಘೋಷವಾಕ್ಯಗಳ ಫಲಕಗಳನ್ನು ಹಿಡಿದುಕೊಂಡು, ಬ್ಯಾಂಡ್‌ ವಾದನದೊಂದಿಗೆ ಪಾಲ್ಗೊಂಡರು. ವಿವಿಧ ತಂಡಗಳಲ್ಲಿದ್ದ ವಿದ್ಯಾರ್ಥಿಗಳು ಪರಿಸರದ ಸುತ್ತಮುತ್ತ ಕಸ ಹೆಕ್ಕುತ್ತಾ, ಸ್ವರಾಜ್ಯ ಮೈದಾನದತ್ತ ಬಂದು ಪುರಸಭಾ ತ್ಯಾಜ್ಯ ಸಂಗ್ರಹಣ ವಾಹನಕ್ಕೆ ಒಪ್ಪಿಸಿದರು.

ಸ್ವರಾಜ್ಯ ಮೈದಾನದ ಬಳಿಯ ಕಾಮಧೇನು ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ಟೆಂಪಲ್‌ ಟೌನ್‌ ಅಧ್ಯಕ್ಷ ವಿನ್ಸೆಂಟ್‌ ಡಿ’ಕೋಸ್ತ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ತಹಶೀಲ್ದಾರ್‌ ಮಹೇಶ್ಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ರವೀಂದ್ರ ಸುವರ್ಣ, ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ ಎಸ್‌., ಮೂಡಬಿದಿರೆ ಪ್ರಸ್‌ಕ್ಲಬ್‌ ಅಧ್ಯಕ್ಷ ಜೈಸನ್‌ ತಾಕೋಡೆ ಭಾಗವಹಿಸಿದ್ದರು.

Advertisement

ಪೌರ ಕಾರ್ಮಿಕರಿಗೆ ಸಮ್ಮಾನ
ಪೌರ ಕಾರ್ಮಿಕರಾದ ಬೊಗ್ಗು, ಮಹಾಂತೇಶ ನಾಯ್ಕ, ಕಮಲಿ ಬಾಯಿ, ಸಂದೀಪ್‌, ರಾಜು ಕಡೆಪಲ್ಲ, ಜಗದೀಶ ಮತ್ತು ವಾಹನ ಚಾಲಕ ದಾಮೋದರ ಅವರನ್ನು ಸಮ್ಮಾನಿಸಲಾಯಿತು. ರೋಟರಿ ಕ್ಲಬ್‌ ಸುವರ್ಣ ಮಹೋತ್ಸವ ವರ್ಷ (2017- 18)ದ ಅಧ್ಯಕ್ಷ ಶ್ರೀಕಾಂತ ಕಾಮತ್‌, ರೋಟರಿ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷರಾಗಿ 117ಕ್ಕೂ ಮಿಕ್ಕೂ ಫಲಾನುಭವಿಗಳಿಗೆ ಉಚಿತ ಶೌಚಾಲಯ ನಿರ್ಮಿಸುವಲ್ಲಿ, 2 ಕೆರೆಗಳಿಗೆ ಕಾಯಕಲ್ಪ ನೀಡುವಲ್ಲಿ ಪರಿಶ್ರಮಿಸಿರುವ ಡಾ| ಮುರಳೀಕೃಷ್ಣ, ಕಳೆದ 32 ವಾರಗಳಿಂದ ಸ್ವಚ್ಛ  ಮೂಡಬಿದಿರೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಜವನೆರ್‌ ಬೆದ್ರ ಸಂಘಟನೆಯ ಸ್ಥಾಪಕಾಧ್ಯಕ್ಷ ಅಮರ್‌ ಕೋಟೆ ಅವರನ್ನೂ ಗೌರವಪೂರ್ವಕ ಪುರಸ್ಕರಿಸಲಾಯಿತು. ರೋಟರಿ ಟೆಂಪಲ್‌ ಟೌನ್‌ ನಿಕಟಪೂರ್ವ ಅಧ್ಯಕ್ಷ ಉಮೇಶ್‌ ರಾವ್‌ ಸ್ವಾಗತಿಸಿದರು. ಕಾರ್ಯದರ್ಶಿ ಡೆನಿಸ್‌ ಪಿರೇರಾ ವಂದಿಸಿದರು. ಧೀರೇಂದ್ರ ಜೈನ್‌ ಕಾರ್ಯಕ್ರಮ ನಿರೂಪಿಸಿದರು.

ಸ್ವಚ್ಛತ ಆಂದೋಲನ ಜಾಥಾ
ಮಹಾವೀರ ಕಾಲೇಜಿನಲ್ಲಿ ಪ್ರಾಚಾರ್ಯ ಎಚ್‌.ಸಿ. ದೀಕ್ಷಿತ್‌, ಜೈನ ಪ್ರೌಢಶಾಲೆ, ಅಲಂಗಾರು ಸೈಂಟ್‌ ಥೋಮಸ್‌ ಶಾಲೆ ಯಲ್ಲಿ ಪುರಸಭಾ ಸದಸ್ಯ ಪಿ.ಕೆ.  ಥೋಮಸ್‌, ಪ್ರಾಂತ್ಯ ಹೈಸ್ಕೂಲಿ ನಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ರಾಮಚಂದ್ರ ನಾಯಕ್‌, ಕಲ್ಲಬೆಟ್ಟು ಎಕ್ಸಲೆಂಟ್‌ ಕಾಲೇಜಿನಲ್ಲಿ ಪ್ರಾಂಶುಪಾಲ ಪ್ರದೀಪ್‌ ಕುಮಾರ್‌ ಶೆಟ್ಟಿ, ರೋಟರಿ ಆ.ಮಾ. ಶಾಲೆ, ಬಾಬು ರಾಜೇಂದ್ರ ಪ್ರಸಾದ್‌ ಹೈಸ್ಕೂಲ್‌ನಲ್ಲಿ ತಹಶೀಲ್ದಾರ್‌ ಮಹೇಶ್ಚಂದ್ರ, ಜೈನ್‌ಕಾಲೇಜು ಮತ್ತು ಕೋಟೆಬಾಗಿಲು ಮಹಮ್ಮದೀಯ ಆ. ಮಾ. ಶಾಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಶೀನಾ ನಾಯ್ಕ, ವಿದ್ಯಾಗಿರಿ ಆಳ್ವಾಸ್‌ ಕಾಲೇಜಿನಲ್ಲಿ ರೋಟರಿ ಅಧ್ಯಕ್ಷ ಡಾ| ರಮೇಶ್‌ ಹಾಗೂ ಮೂಡಬಿದಿರೆ ಹೋಲಿ ರೋಸರಿ ಪ್ರೌಢಶಾಲೆ-ಪಿ.ಯು.ಕಾಲೇಜಿನಲ್ಲಿ ಬಿಇಒ ಆಶಾ ವಿದ್ಯಾರ್ಥಿಗಳ ಸ್ವಚ್ಛತ ಆಂದೋಲನ ಜಾಥಾ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next