Advertisement

ಕ್ರೀಡೆಯಿಂದ ಕೃಷಿಯನ್ನು ಅರ್ಥೈಸೋಣ: ಗೀತಾಂಜಲಿ ಸುವರ್ಣ

12:52 AM Jun 25, 2019 | Team Udayavani |

ಪಾವಂಜೆ: ಕೃಷಿ ಪರಂ ಪರೆ ಮರೆಯಾಗುತ್ತಿರುವ ಇಂದಿನ ದಿನದಲ್ಲಿ ಕ್ರೀಡೆಯ ಮೂಲಕ ಮುಂದಿನ ಪೀಳಿಗೆಗೆ ಅರ್ಥೈಸಲು ಎಲ್ಲರೂ ಸಂಘಟಿತರಾಗೋ ಣ ಎಂದು ಉಡುಪಿ ಜಿ.ಪಂ.ನ ಸದಸ್ಯೆ ಗೀತಾಂಜಲಿ ಸುವರ್ಣ ಹೇಳಿದರು.

Advertisement

ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಶ್ರೀ ಕ್ಷೇತ್ರ ಮತ್ತು ವಿವಿಧ ಯುವ ಸಾಮಾಜಿಕ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ 10ನೇ ವರ್ಷದ ತುಳುನಾಡ ಕೃಷಿ ಜನಪದೋತ್ಸವದ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್‌ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಕೃಷಿ ಜನಪದೋತ್ಸವಕ್ಕೆ ಸಹಕರಿಸಿದ ಸಂಘ-ಸಂಸ್ಥೆಗಳನ್ನು, ತೀರ್ಪುಗಾರರನ್ನು ದೇವಸ್ಥಾನದ ಟ್ರಸ್ಟಿ ನಕ್ರೆ ಬಾಲಕೃಷ್ಣ ರಾವ್‌, ವಿಜಯಕುಮಾರ್‌ ಗೌರವಿಸಿದರು.

ಕ್ರೀಡೋತ್ಸವಕ್ಕೆ ಶಾಸಕರಾದ ಉಮಾನಾಥ ಕೋಟ್ಯಾನ್‌, ಡಾ| ವೈ. ಭರತ್‌ ಶೆಟ್ಟಿ, ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ, ಕೊಂಚಾಡಿ ನಾಗಕನ್ನಿಕಾ ದೇವಸ್ಥಾನದ ರಮಾನಾಥ ಭಂಡಾರಿ, ಕಿನ್ನಿಗೋಳಿಯ ಕೆ. ಭುವನಾಭಿರಾಮ ಉಡುಪ, ಬಿಜೆಪಿಯ ಈಶ್ವರ ಕಟೀಲು, ಜಗದೀಶ್‌ ಅಧಿಕಾರಿ, ಜಿತೇಂದ್ರ ಕೊಟ್ಟಾರಿ, ಮಾಜಿ ಮೇಯರ್‌ ರಜನಿ ದುಗ್ಗಣ್ಣ, ಡಾ| ಸೋಂದಾ ಭಾಸ್ಕರ ಭಟ್, ಮೂಲ್ಕಿ ಲಯನ್ಸ್‌ ಕ್ಲಬ್‌ನ ಸದಾಶಿವ ಹೊಸದುರ್ಗಾ, ಮೂಲ್ಕಿ ವಲಯ ಟೈಲರ್ ಅಸೋಸಿಯೇಶನ್‌ನ ಕೇಶವ ಕಾಮತ್‌ ಭಾಗವಹಿಸಿ ಶುಭ ಹಾರೈಸಿದರು.

Advertisement

ವಿನೋದ್‌ ಸಾಲ್ಯಾನ್‌ ಬೆಳ್ಳಾಯರು, ನವೀನ್‌ ಶೆಟ್ಟಿ ಎಡ್ಮೆಮಾರ್‌, ಸುಧಾಕರ ಅರ್‌. ಅಮೀನ್‌, ಸುಜಾತಾ ವಾಸುದೇವ, ದಿವ್ಯಶ್ರೀ ರಮೇಶ್‌ ಕೋಟ್ಯಾನ್‌, ಎಚ್. ರಾಮಚಂದ್ರ ಶೆಣೈ, ಪುರುಷೋತ್ತಮ ಕೋಟ್ಯಾನ್‌ ತೋಕೂರು, ಯತೀಶ್‌ ಕೋಟ್ಯಾನ್‌, ದಿವೇಶ್‌ ದೇವಾಡಿಗ ಕೆರೆಕಾಡು, ಲಕ್ಷ್ಮಣ್‌ ಸಾಲ್ಯಾನ್‌ ಪುನರೂರು, ಹರಿದಾಸ್‌ ಭಟ್ ತೋಕೂರು ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ

ಕೆಸರುಗದ್ದೆ ಓಟ (ಪುರುಷರು): ಅಭಿಷೇಕ್‌ ದೇವಾಡಿಗ ಪಾವಂಜೆ (ಪ್ರ.), ಶರತ್‌ ಕಾಪು (ದ್ವಿ.), (ಮಹಿಳೆಯರು): ಸಭಿತ್‌ ಶೆಟ್ಟಿ ಕುರ್ಕಲ್ (ಪ್ರ.), ಪ್ರತಿಭಾ ಸಂದೀಪ ಮುಕ್ಕ (ದ್ವಿ.), (ಯುವತಿಯರು): ಪಲ್ಲವಿ ಕುರ್ಕಲ್ (ಪ್ರ.), ಭವ್ಯಾ ಕಟೀಲು (ದ್ವಿ.),

ಹಿರಿಯರ ವಿಭಾಗ: ರಮೇಶ್‌ ದೇವಾಡಿಗ ಪಾವಂಜೆ (ಪ್ರ.), ಸದಾಶಿವ ಆಚಾರ್ಯ ಕಟೀಲು (ದ್ವಿ.).

ಹಿಮ್ಮುಖ ಓಟ (ಪುರುಷರು): ಪ್ರಮೋದ್‌ ಪಂಜ (ಪ್ರ.), ಶರತ್‌ ಕಾಪು (ದ್ವಿ.), (ಮಹಿಳೆಯರು): ಗಿರಿಜಾ ಪಾವಂಜೆ (ಪ್ರ.), ಮಿತ್ರಾ ಲೈಟ್ ಹೌಸ್‌ (ದ್ವಿ.), (ಯುವತಿಯರು): ದೀಕ್ಷಾ ಕುರ್ಕಾಲ್ (ಪ್ರ.), ಪಲ್ಲವಿ (ದ್ವಿ.).

ನೀರು ಸಹಿತ ಕೊಡಪಾನ ಓಟ: ದೀಕ್ಷಾ ಕುರ್ಕಾಲ್ (ಪ್ರ.), ಸ್ವಾತಿ ಮುಚ್ಚಾರು (ದ್ವಿ.).

ಜಾನಪದ ಸಮೂಹ ನೃತ್ಯ: ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ (ಪ್ರ.), ಟ್ವಿಂಕಿಂಗ್‌ ಸ್ಟಾರ್ಸ್‌ ಸೂರಿಂಜೆ (ದ್ವಿ).

ತೆಂಗಿನ ಗರಿ ಹೆಣೆಯುವ ಸ್ಪರ್ಧೆ: ವಿನುತಾ ವಿಜಯೇಂದ್ರ (ಪ್ರ.), ಇಂದಿರಾ ಪಾವಂಜೆ (ದ್ವಿ).

ಛಾಯಾಚಿತ್ರ ಸ್ಪರ್ಧೆಯ ಪ್ರೋತ್ಸಾಹಕ‌: ಕರುಣಾಕರ ಹಳೆಯಂಗಡಿ, ಜಿತೇಶ್‌ ಪಾವಂಜೆ, ಮೋಹನ್‌ ಕುಮಾರ್‌

ಹಗ್ಗಜಗ್ಗಾಟ (ಪುರುಷರು): ಜೋಕುಲ ಕಂಬಳ ಪಟ್ಟೆ (ಪ್ರ.), ಫ್ರೆಂಡ್ಸ್‌ ಮೊಗರ್ನಾಡು (ದ್ವಿ.), (ಮಹಿಳೆಯರು): ಪಡುಕೆರೆ ಫ್ರೆಂಡ್ಸ್‌ (ಪ್ರ.), ಕುಂಬಾರಮ್ಮ ಫ್ರೆಂಡ್ಸ್‌ ಕುರ್ಕಾಲ್ (ದ್ವಿ.). ಪಿರಮಿಡ್‌ ರಚಿಸಿ ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಓಂ ಪಾವಂಜೆ ತಂಡ ಪ್ರಶಸ್ತಿ ಗಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next