Advertisement
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಮೈತ್ರಿ ಸರಕಾರವೂ ಇರುವುದಿಲ್ಲ, ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯುವುದು ಶತಸ್ಸಿದ್ಧ ಎಂದರು.
ಅರ್ಜಿ ಹಾಕಿದವರಿಗೆ ಮಾತ್ರವೇ ಟಿಕೆಟ್ ಎಂಬಂತಹ ಯಾವುದೇ ನಿಯಮ ಇಲ್ಲ, ಯಾರು ಸಮರ್ಥರಿದ್ದಾರೆಯೋ ಅವರು ಅರ್ಜಿ ಹಾಕಿಲ್ಲದಿದ್ದರೂ ಅವರಿಗೆ ಟಿಕೆಟ್ ಕೊಡ ಲಾಗುವುದು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದ ಕೂಡಲೇ ಅವರಿಗೆ ಟಿಕೆಟ್ ಸಿಗಲಾರದು. ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎಂದರು. 113ಕ್ಕೂ ಅಧಿಕ ಸ್ಥಾನ ಖಚಿತ: ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಇದು ಜನರಲ್ಲಿ ಹತಾಷೆಗೆ ಕಾರಣವಾಗಿದ್ದು, ರಾಜ್ಯದಲ್ಲಿ ಆಡಳಿತಕ್ಕೆ ಕಾಂಗ್ರೆಸ್ ಮಾತ್ರವೇ ಸಮರ್ಥವಾಗಿದೆ. ಈ ಬಾರಿ 113ಕ್ಕೂ ಅಧಿಕ ಸ್ಥಾನಗಳು ಸಿಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ತಿಳಿಸಿದರು.
Related Articles
Advertisement
ನೋಂದಾಯಿತ ಗುತ್ತಿಗೆದಾರರ ಸಂಘದವರು ಬಹಿರಂಗವಾಗಿ ಲಂಚದ ಆರೋಪ ಮಾಡಿದ್ದಾರೆ. ಅವರಿಗೆ ಬರಬೇಕಾದ ಆರೂವರೆ ಸಾವಿರ ಕೋಟಿ ರೂ. ಬಿಲ್ ಬಾಕಿ ಇದೆ. ಪರಿಶಿಷ್ಟರಿಗಾಗಿ ಇರುವ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ 42 ಸಾವಿರ ಕೋಟಿ ರೂ. ಮೊತ್ತದ ಬದಲು ಕೇವಲ 28 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಲ್ಲೂ 8 ಸಾವಿರ ಕೋಟಿ ರೂ. ಮೊತ್ತವನ್ನು ಬೇರೆ ಕೆಲಸಕ್ಕೆ ಖರ್ಚು ಮಾಡಿದ್ದಾರೆ ಈ ಮೂಲಕ ಬಜೆಟ್‌ಗೆ ಅರ್ಥವೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಪ್ರಣಾಳಿಕೆಯೇ ನಮ್ಮ ಆಡಳಿತದ ಮೂಲಮಂತ್ರಕಳೆದ ಸರಕಾರದ ಪ್ರಣಾಳಿಕೆಯಲ್ಲಿ 160ರಷ್ಟು ಭರವಸೆಗಳಿದ್ದು, ಅದರಲ್ಲಿ ಬಹುತೇಕ ಈಡೇರಿಸಿದ್ದೇವೆ. ನಮ್ಮ ಸರಕಾರ ಹಿಂದೆ ಪ್ರಣಾಳಿಕೆಯನ್ನು ಇರಿಸಿಕೊಂಡೇ ಬಜೆಟ್ ರೂಪಿಸಿತ್ತು ಎಂದ ಅವರು, ಈ ಬಾರಿಯೂ ಎಲ್ಲ ಜಿಲ್ಲೆಗಳಿಂದಲೂ ಸಲಹೆ ಪಡೆದುಕೊಂಡು ಎಲ್ಲ ಕ್ಷೇತ್ರಗಳನ್ನೂ ಒಳಗೊಂಡಂತೆ ಸಮಗ್ರ ಭರವಸೆಗಳುಳ್ಳ ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದರು. ಮಂಗಳೂರಿನಲ್ಲಿ ಇಂದು ಮೀನುಗಾರರು, ಅಡಿಕೆ ಬೆಳೆಗಾರರು, ವಿದ್ಯಾರ್ಥಿಗಳು, ಉದ್ಯಮಿಗಳು, ಬಸ್ ಮಾಲಕ, ನೌಕರರು, ಆಟೊರಿಕ್ಷಾ ಚಾಲಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಸಾಮರಸ್ಯ ಹದಗೆಟ್ಟಿರುವುದರಿಂದ ಬಂಡವಾಳ ಹೂಡಿಕೆಗೆ ಹಿನ್ನಡೆಯಾಗುತ್ತಿರುವುದನ್ನು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ ಎಂದರು. ಕಾಂಗ್ರೆಸ್ ಮುಖಂಡರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ನಾಯಕರಾದ ಪ್ರೊ| ಕೆ.ಇ. ರಾಧಾಕೃಷ್ಣ, ಜಿ.ಎ. ಬಾವಾ, ಮಧು ಬಂಗಾರಪ್ಪ, ಜೆ.ಆರ್. ಲೋಬೊ, ಐವನ್ ಡಿ’ಸೋಜಾ, ಶಕುಂತಳಾ ಶೆಟ್ಟಿ, ಕವಿತಾ ಸನಿಲ್, ನವೀನ್ ಡಿ’ಸೋಜಾ, ಇಬ್ರಾಹಿಂ ಕೋಡಿಜಾಲ್ ಉಪಸ್ಥಿತರಿದ್ದರು.