Advertisement

ಕಡಿಮೆ ಸ್ಪರ್ಧೆ ಇರುವ ಕಾಸ್ಮೆಟಿಕ್‌ ಟೆಕ್ನಾಲಜಿ

10:04 PM Mar 17, 2020 | mahesh |

ಪಿ ಯುಸಿ ಅನಂತರ ಮುಂದೇನು ಎಂದು ಯೋಚಿಸಿದರೆ ವಿಜ್ಞಾನ ವಿಷಯ ಆಯ್ದುಕೊಂಡ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಬಹುತೇಕರ ಮುಂದೆ ಇರುವುದು ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌. ಕೆಲವರಷ್ಟೇ ಪದವಿ, ಪಿಎಚ್‌.ಡಿ. ಸಂಶೋಧನೆಯ ಕಡೆಗೆ ಒಲವು ಇಟ್ಟುಕೊಂಡಿರುತ್ತಾರೆ. ಆದರೆ ಈಗ ವಿಜ್ಞಾನ ವಿಷಯದಲ್ಲಿ ಪಿಯುಸಿ ಮಾಡಿದವರಿಗೆ ಹಲವು ಆಸಕ್ತಿಕರ ಕೋರ್ಸ್‌ಗಳಿವೆ.

Advertisement

ಅವುಗಳಲ್ಲಿ ಕಾಸ್ಮೆಟಿಕ್‌ ಟೆಕ್ನಾಲಜಿ ಕೂಡ ಒಂದು. ಪಿಯುಸಿಯಲ್ಲಿ ಜೀವಶಾಸ್ತ್ರ ವಿಷಯ ಅಧ್ಯಯನ ಮಾಡಿದವರಿಗೆ ಈ ಕೋರ್ಸ್‌ ಮಾಡುವ ಅವಕಾಶವಿದೆ. ಹಾಗೆ ನೋಡಿದರೆ ಕಾಸ್ಮೆಟಿಕ್‌ ಟೆಕ್ನಾಲಜಿ ಕೋರ್ಸ್‌ಗಳು ಭಾರತದಲ್ಲಿ ವಿರಳ.

ಸೆಮಿಸ್ಟರ್‌ ಪದ್ಧತಿಯಲ್ಲಿ ಈ ಕೋರ್ಸ್‌ ಇದೆ. ಮುಂದೆ ಎಂಬಿಎ, ಪಿಎಚ್‌.ಡಿ.ಗೂ ಅವಕಾಶವಿದೆ. ಭಾರತದಲ್ಲಿ ಸಾಕಷ್ಟು ಕಾಸ್ಮೆಟಿಕ್‌ ಕಂಪೆನಿಗಳಿದ್ದರೂ ಈ ಕೋರ್ಸ್‌ ನಡೆಸುವ ಕಾಲೇಜುಗಳೇ ಇಲ್ಲ. ಮಹಾರಾಷ್ಟ್ರದಲ್ಲಿ ಕಾಲೇಜು ಬಿಟ್ಟರೆ ಬೇರೆಲ್ಲೂ ಇಲ್ಲ. ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಲ್ಲಿ ಡಿಪ್ಲೊಮಾ ಕೋರ್ಸ್‌ ಇದೆ. ಮಹಾರಾಷ್ಟ್ರ ಮತ್ತು ಸುತ್ತಲಿನ ರಾಜ್ಯಗಳ ವಿದ್ಯಾರ್ಥಿಗಳು ಮಾತ್ರವೇ ಇದ್ದಾರೆ.

ಕಾಸ್ಮೆಟಿಕ್‌ ಲಾ, ಗುಣಮಟ್ಟ ನಿಯಂತ್ರಣ, ಚರ್ಮ ಮತ್ತು ಕೂದಲಿನ ಆರೈಕೆ ಬಗ್ಗೆ ಮಾಹಿತಿ, ಸ್ವಂತ ಉದ್ದಿಮೆ ಆರಂಭಿಸುವ ಬಗ್ಗೆಯೂ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ. ಪ್ರಾಯೋಗಿಕ ತರಗತಿಗಳು ಅತ್ಯಂತ ಉಪಯುಕ್ತವಾಗಿವೆ. ರಸಾಯನಿಕ ಪದಾರ್ಥಗಳನ್ನು ಯಾವ ಪ್ರಮಾಣದಲ್ಲಿ ಬಳಸಬೇಕು. ಯಾವುದು ಚರ್ಮಕ್ಕೆ ಹಾನಿಕಾರಕ ಮುಂತಾದ ಬಗ್ಗೆ ತಿಳುವಳಿಕೆ ಸಿಗುತ್ತದೆ. ಒತ್ತಡವಿಲ್ಲದೆ ಮಾಡಬಹುದಾದ ಕೋರ್ಸ್‌ ಇದಾಗಿದೆ.

ಹಾಗೆ ನೋಡಿದರೆ ಕಡಿಮೆ ಶುಲ್ಕವೂ ಈ ಕೋರ್ಸ್‌ಗೆ ಇದೆ. ಒಂದೆರಡು ಲಕ್ಷದೊಳಗೆ ಈ ಕೋರ್ಸ್‌ ಮುಗಿಸಬಹುದು. ನೇರವಾಗಿ ಪ್ರವೇಶ ಪಡೆಯಬಹುದು. ಆದರೆ ಜೀವಶಾಸ್ತ್ರ ವಿಷಯದಲ್ಲಿ ಪಿಯುಸಿ ಪಾಸಾಗಿರಬೇಕು. ಈ ಕೋರ್ಸ್‌ ಮಾಡಿದವರಿಗೆ ವಿಶ್ವದ ಬ್ರ್ಯಾಂಡೆಡ್‌ ಕಂಪೆನಿಗಳಲ್ಲಿ ಕೆಲಸ ಪಡೆಯಬಹುದು. ಸದ್ಯ ಭಾರತದಲ್ಲಿ ಕಡಿಮೆ ಇರುವ ಕಾರಣ ಇಲ್ಲಿ ಸ್ಪರ್ಧೆ ಕಡಿಮೆ ಇದೆ.

Advertisement

ಉದ್ಯೋಗ ಕ್ಷೇತ್ರಗಳು
ಜಾಹೀರಾತು ವಲಯ
ಬ್ಯೂಟಿ ಕ್ಲಿನಿಕ್‌, ಪಾರ್ಲರ್‌
ಆಹಾರ ಮತ್ತು ಕಾಸ್ಮಟಿಕ್‌ ಇಂಡಸ್ಟ್ರೀ
ರೆಸಾರ್ಟ್‌, ಸ್ಕಿನ್‌ ಕ್ಲಿನಿಕ್‌
ಸ್ಪಾ ಸೆಂಟರ್‌ಗಳು, ಸ್ಟಾರ್‌ ಹೊಟೇಲ್‌

Advertisement

Udayavani is now on Telegram. Click here to join our channel and stay updated with the latest news.

Next