ಚಿಂಚೋಳಿ: ಕುಷ್ಠರೋಗ “ಮೈಕೋ ಬ್ಯಾಕ್ಟೀರಿಯಾ’ ಎನ್ನುವ ರೋಗಾಣುವಿನಿಂದ ಬರುತ್ತದೆ ಎಂದು ಜಿಲ್ಲಾ ಕುಷ್ಠರೋಗ ಮೇಲ್ವಿಚಾರಕ ಗಣಪತಿ ವಿಂಬಡಶೆಟ್ಟಿ ಹೇಳಿದರು.
ಸುಲೆಪೇಟ್ ಪಟ್ಟಣದ ಗರಗಪಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಪ್ರಾಂಗಣದಲ್ಲಿ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ವಿಭಾಗದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಷಯರೋಗಿಗೆ ಪೌಷ್ಟಿಕ ಆಹಾರ ಪೌಡರ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಷ್ಠರೋಗಕ್ಕೆ ಶಾಪ ಕಾರಣವಲ್ಲ. ಇದು ನರ ಮತ್ತು ಚರ್ಮದ ಕಾಯಿಲೆ. ತಿಳಿ, ಬಿಳಿ ತ್ರಾಮ ಬಣ್ಣದ ಮಚ್ಚೆಗಳು ಕೈ ಕಾಲುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಮಚ್ಚೆ ಜಾಗದಲ್ಲಿ ಕೂದಲು ಉದುರಿದಂತೆ ಆಗುತ್ತದೆ. ಇದಕ್ಕೆ ಚಿಕಿತ್ಸೆ ಪಡೆದರೆ ಗುಣಮುಖವಾಗುತ್ತದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹೇಶ ಮೋರೆ ಮಾತನಾಡಿ, ಕುಷ್ಠರೋಗ ರೋಗದಿಂದ ಬಳಲುತ್ತಿರುವ ನಿರ್ಗತಿಕ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಅರಿವಿನ ಪ್ರಾಮುಖ್ಯತೆ ಇದೆ ಎಂದು ಹೇಳಿದರು.
ಕುಷ್ಠರೋಗ ಕುರಿತ ಪ್ರಬಂಧ ಸ್ಪರ್ಧೆ ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವೀತಿಯ, ತೃತೀಯ ಬಹು ಮಾನ ನೀಡಲಾಯಿತು. ಜಿಲ್ಲಾ ಹಿರಿಯ ಕ್ಷಯರೋಗ ನೀರಿಕ್ಷಣಾಧಿಕಾರಿ ಸಂತೋಷ ಕುಡಳ್ಳಿ, ಜಿಲ್ಲಾ ಡಿಆರ್ ಟಿಬಿಟಿಸ್ ಸಮಾಲೋಚಕ ಮಂಜುನಾಥ ಕಂಬಾಳಿಮಠ, ದಿನೇಶ ವಾಡೇಕರ್, ಸುಲೇಪೇಟ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸವಿತಾ ಇದ್ದರು. ನಾಗರತ್ನ, ಮಮತಾ ಪ್ರಾರ್ಥನಾಗೀತೆ ಹಾಡಿದರು. ಶಿಕ್ಷಕ ಮಹಾದೇವಯ್ಯ ನಿರೂಪಿಸಿದರು, ವಿಜಯಕುಮಾರ ಸ್ವಾಗ ತಿಸಿದರು, ಯಾಖೂಬ್ ವಂದಿಸಿದರು.