ಆರ್ಬಿಟ್ ಸಂಸ್ಥೆ ಸಂಯೋಜಕ ತುಕ್ಕಾರಡ್ಡಿ ಹೇಳಿದರು.
Advertisement
ಕೌಡಿಯಾಳ(ಆರ್) ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸ್ಪರ್ಶ ಕುಷ್ಠರೋಗ ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಷ್ಠ ರೋಗ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು. ಕುಷ್ಠರೋಗವು ಮೈಕ್ರೋಬ್ಯಾಕ್ಟೀರಿಯಂ ಲೆಪ್ರ ಎಂಬ ರೋಗಾಣುವಿನಿಂದ ಬರುತ್ತದೆ.
ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ವಿಶ್ವನಾಥ ಬಿರಾದಾರ ಮಾತನಾಡಿ, ಕುಷ್ಠ ಬಂದರೆ ಹೆದರುವ ಅಗತ್ಯವಿಲ್ಲ. ರೋಗಿಗಳು ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು
ಎಂದರು. ಆರ್ಬಿಟ್ ಸಂಸ್ಥೆಯ ಕಾರ್ಯಕರ್ತ ಜ್ಞಾನೇಶ್ವರ ಹಾರಕೂಡೆ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಮುಖರಾದ ಕಾಶಿನಾಥ ಕಾಟೆ, ಸತೀಶ ಕುಲಕರ್ಣಿ, ಲಕ್ಷ್ಮಣ ಜಮಾದರ, ರಮೇಶ ಪಾಟೀಲ ಇದ್ದರು. ರಾಘವೇಂದ್ರ ಪವಾರ ಸ್ವಾಗತಿಸಿ, ನಿರೂಪಿಸಿದರು. ವೀರೇಂದ್ರ ಬಿರಾದಾರ ವಂದಿಸಿದರು.