Advertisement

ಬೆಳಗಾವಿ ತಂಡದಿಂದ ಚಿರತೆ ಕಾರ್ಯಾಚರಣೆ

06:05 PM Jun 02, 2021 | Team Udayavani |

ಜಮಖಂಡಿ: ಚಿರತೆ ಬಂಧನಕ್ಕೆ ಬೆಳಗಾವಿ ಜಿಲ್ಲೆಯಿಂದ ವಿಶೇಷ ಸುಸಜ್ಜಿತ ಅಸ್ತ್ರಗಳೊಂದಿಗೆ ಅರಣ್ಯ ಇಲಾಖೆ ರಕ್ಷಕರ ತಂಡ ಕುಂಬಾರಹಳ್ಳ ಗ್ರಾಮಕ್ಕೆ ಆಗಮಿಸಿದ್ದು, ಮಂಗಳವಾರ ರಾತ್ರಿಯಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಹೇಳಿದರು.

Advertisement

ತಾಲೂಕಿನ ಕುಂಬಾರಹಳ್ಳ ಗ್ರಾಮದ ನಿಂಗಪ್ಪ ಹೆಗಡೆ ಅವರ ತೋಟದಲ್ಲಿ ಮಂಗಳವಾರ ನಡೆದ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿದ ಆವರು, ಚಿರತೆ ಬಂಧನಕ್ಕಾಗಿ ಅರಣ್ಯ ಇಲಾಖೆಯಿಂದ ಕಳೆದ 5 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. 7 ಸ್ವಯಂ ಚಾಲಿತ ಬೋನ್‌, 13 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಚಿರತೆ ಸಿಸಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡರು ಬೋನಿಗೆ ಬೀಳುತ್ತಿಲ್ಲ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮಸ್ಥರು ವದಂತಿಗಳಿಗೆ ಕಿವಿಗೊಡಬಾರದು. ಅರಣ್ಯ ಇಲಾಖೆ ಚಿರತೆ ಬಂಧನಕ್ಕಾಗಿ ವಿಶೇಷ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ ಎಂದರು.

ವಲಯ ಅರಣ್ಯಾಧಿಕಾರಿ ಕೆ.ವಿಜಯ ಕುಮಾರ ಮಾತನಾಡಿ, ಚಿರತೆಯ ಬಂಧನ ಕಾರ್ಯಾಚರಣೆ ನಡೆದಿದ್ದು, ಎರಡು ದಿನದಿಂದ ಸಿಸಿ ಕ್ಯಾಮೆರಾದಲ್ಲಿ ಚಿರತೆ ದೃಶ್ಯ ಕಾಣುತ್ತಿಲ್ಲ. ಆದರೆ, ಚಿರತೆ ಹಜ್ಜೆ ಗುರುತುಗಳು ಪತ್ತೆಯಾಗಿವೆ. ಕಳೆದ 5 ದಿನಗಳಿಂದ ಕಾರ್ಯಾಚರಣೆ ಮುಂದುವರಿದಿದ್ದು, ಗ್ರಾಮಸ್ಥರು ಭಯಪಡಬಾರದು. ಮನೆಯಲ್ಲಿ ಸುರಕ್ಷಿತವಾಗಿ ಇದ್ದುಕೊಂಡು ಕಾರ್ಯಾಚರಣೆ ಸಹಕಾರ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ವೈ.ಎಚ್‌. ದ್ರಾಕ್ಷಿ, ಗ್ರಾಮ ಲೆಕ್ಕಾಧಿಕಾರಿ ಎಸ್‌. ಜೆ. ಮೆಟಗಾರ, ಗ್ರಾಮಸ್ಥರಾದ ರಾಜು ಮಾಳಿ, ಬಸವರಾಜ ಮರನೂರ, ನಾಗಪ್ಪ ಹೆಗಡೆ, ರಾಮು ಕಡಕೋಳ, ಸದಾಶಿವ ಗೊಂಗಗೋಳ ಇದ್ದರು. 5ನೇ ದಿನದ ಕಾರ್ಯಾಚರಣೆ: ತಾಲೂಕಿನ ಕುಂಬಾರಹಳ್ಳ ಗ್ರಾಮದ ಹೆಗಡೆ ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡಿರುವ ಚಿರತೆ ಸತತ 5 ದಿನಗಳ ಕಾರ್ಯಾಚರಣೆಯಲ್ಲಿ ಬೋನಿಗೆ ಬೀಳುತ್ತಿಲ್ಲ. ಚಿರತೆ ಬಂಧನಕ್ಕಾಗಿ ಅರಣ್ಯ ಇಲಾಖೆಯವರು ಸ್ವಯಂ ಚಾಲಿತ 7 ಬೋನ್‌ಗಳನ್ನು ಇರಿಸಿದ್ದಾರೆ.

ಚಿರತೆ ಸಂಚರಿಸಬಹುದಾದ ಎಲ್ಲ ರಸ್ತೆಗಳಲ್ಲಿ 13 ಸಿಸಿ ಕ್ಯಾಮರಾ ಅಳವಡಿ ಸಲಾಗಿದೆ. ಮೂರು ದಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಚಿರತೆ, ಕಳೆದ ಎರಡು ದಿನಗಳಲ್ಲಿ ಸಿಸಿ ಕ್ಯಾಮೆರಾದಲ್ಲಿ ಚಿರೆತೆ ಸೆರೆಯಾಗಿಲ್ಲ. ಆದರೆ, ಗದ್ದೆಗಳಲ್ಲಿ, ರಸ್ತೆಗಳಲ್ಲಿ ಮಾತ್ರ ಹೆಜ್ಜೆ ಗುರುತು ಪತ್ತೆಯಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next