Advertisement
ಸ್ಥಳೀಯ ನಿವಾಸಿ ಉಮೇಶ್ ಶೆಟ್ಟಿ ಅವರು ಮೇಯಲು ಬಿಟ್ಟಿದ್ದ ದನದ ಕರುವನ್ನು ಮರಳಿ ತರಲೆಂದು ಮಧ್ಯಾಹ್ನ ತೆರಳಿದ್ದಾಗ ಅವರ ಕಣ್ಣೆದುರಿನಲ್ಲಿ ಘಟನೆ ನಡೆದಿದೆ. ಕರುವಿನ ಕತ್ತನ್ನು ಚಿರತೆ ಬಗೆದು ತಿಂದಿದೆ. ಉಮೇಶ್ ಅವರು ಚಿರತೆಯನ್ನು ಓಡಿಸಲು ಯತ್ನಿಸಿದಾಗ ಅದು ಅವರ ಮೇಲೆರಗಲು ಮುಂದಾಗಿತ್ತು.
Related Articles
Advertisement
ತುರ್ತು ಸ್ಪಂದನೆಗೆ ಆಗ್ರಹಚಿರತೆ ಸಹಿತ ಕಾಡುಪ್ರಾಣಿಗಳ ದಾಳಿ ಬಗ್ಗೆ ಆಗಿಂದಾಗ್ಗೆ ಸ್ಥಳೀಯರು ಮಾಹಿತಿ ನೀಡಿದರೂ ಅರಣ್ಯ ಇಲಾಖೆ ತುರ್ತು ಕ್ರಮ ತೆಗೆದುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮನುಷ್ಯರಿಗೆ ಅಪಾಯ ಸಂಭವಿಸಿ ಜನ ರೊಚ್ಚಿಗೆದ್ದ ಬಳಿಕ ಎಚ್ಚರಗೊಳ್ಳುವ ಅರಣ್ಯ ಇಲಾಖೆಯು ತನ್ನ ನಡೆಯನ್ನು ಬದಲಿಸಿಕೊಂಡು ಈಗಾಗಲೇ ಕ್ರಮ ಕೈಗೊಳ್ಳುವಂತೆ ಜನತೆ ಆಗ್ರಹಿಸಿದ್ದಾರೆ.