ಹುಣಸೂರು: ನಗರದ ಹಳೇ ಸೇತುವೆ ಬಳಿಯ ಸತ್ಯ ಸಾಯಿ ಕೈಗಾರಿಕಾ ತರಬೇತಿ ಸಂಸ್ಥೆ ಮುಂದಿನ ರಸ್ತೆಯಲ್ಲಿ ಬೆಳಗಿನ ಜಾವ ಐದು ಗಂಟೆಯ ವೇಳೆಗೆ ದೊಡ್ಡ ಗಾತ್ರದ ಚಿರತೆಯೊಂದು ಕಾಣಿಸಿಕೊಂಡಿದೆ. ಮುಂಜಾನೆ ಮಡಿಕೇರಿ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದವರಿಗೆ ಈ ಚಿರತೆ ರಸ್ತೆ ಬದಿಯಲ್ಲಿ ದರ್ಶನ ನೀಡಿದ್ದು, ಆತಂಕ ಹುಟ್ಟಿಸಿದೆ.
ಅದೇ ವೇಳೆಗೆ ಸೇತುವೆ ಕಡೆಯಿಂದ ವಾಯು ವಿಹಾರಕ್ಕೆ ತೆರಳಿದ್ದ ಮಂಜುನಾಥ್ ಎಂಬುವರು ಈ ಚಿರತೆಯನ್ನು ಕಂಡು ಸೇತುವೆ ಬಳಿಯ ನಿವಾಸಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸಿಬ್ಬಂದಿಗಳು ಸ್ಥಳ್ಕಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಯಡಿಯೂರಪ್ಪ ಕುಟುಂಬದ ಸರ್ಕಾರ: ಎಚ್ ಡಿಕೆ
ಜನ ವಸತಿ ಪ್ರದೇಶದಲ್ಲಿ ಚಿರತೆ ಒಂದೆಡೆ ನಿಲ್ಲುವುದಿಲ್ಲ. ಮತ್ತೆ ಕಾಣಿಸಿಕೊಂಡಲ್ಲಿ ಬೋನಿರಿಸಿ ಸೆರೆಗೆ ಕ್ರಮವಹಿಸಲಾಗುವುದೆಂದು ಆರ್.ಎಫ್.ಓ. ಸಂದೀಪ್ ತಿಳಿಸಿದ್ದಾರೆ
ಹಳೇ ಸೇತುವೆ ಪಕ್ಕದಲ್ಲಿರುವ ಬ್ರಾಹ್ಮಣ ಬಡಾವಣೆಯ ಸಿದ್ದೇಗೌಡರ ತೋಟದಲ್ಲೂ ಮೂರು ದಿನಗಳ ಹಿಂದೆ ತೋಟಕ್ಕೆ ನೀರು ಹಾಯಿಸುವ ವೇಳೆ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿರುವ ಬಗ್ಗೆ ಸಿದ್ದೇಗೌಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಯತ್ನಾಳ್ ಮುಂದೆಯೂ ಹೀಗೆ ಮಾತನಾಡಿ ನೋಡಲಿ, ನಮ್ಮದು ಶಿಸ್ತಿನ ಪಕ್ಷ: ಶಾಸಕ ಶಿವರಾಜ್ ಪಾಟೀಲ್