Advertisement
ತಾಲೂಕಿನ ಹಿರೇಮುದ್ದೇನಹಳ್ಳಿ-ಕಲ್ಲುಕೋಟೆ ಅರಣ್ಯಪ್ರದೇಶದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು, ಚಿರತೆ ಹಾವಳಿಯಿಂದ ಕಂಗೆಟ್ಟ ಗ್ರಾಮಸ್ಥರು ಪದೇ ಪದೇ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಕುರಿತು ಇತ್ತೀಚಿಗೆ ನಡೆದ ಗ್ರಾಮ ಸಭೆಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಸೋಮವಾರ ಹಿರೇಮುದ್ದೇನಹಳ್ಳಿ ಗ್ರಾಮದ ಚಿಕ್ಕ ನರಸಿಂಹಯ್ಯನವರಿಗೆ ಸೇರಿದ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿ. ಸುಮಾರು 6 ಸಾವಿರಕ್ಕು ಹೆಚ್ಚು ಮೌಲ್ಯದ ಕುರಿಯನ್ನು ಬಲಿ ಪಡೆದಿದೆ. ಚಿರತೆ ಹಾವಳಿ ತಡೆಗಟ್ಟಲು ಪದೇ ಪದೇ ಮನವಿ ಮಾಡಿದರು ಸ್ಪಂದಿಸದ ದೊಡ್ಡಬಳ್ಳಾಪುರ ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರ ಆಕೊ›àಶ ತೀವ್ರವಾಗಿದ್ದು, ನಗರದ ತಾಲೂಕು ಕಚೇರಿ ಮುಂದೆ ಚಿರತೆ ದಾಳಿಯಿಂದ ಸತ್ತ ಕುರಿಯನ್ನ ತಂದು ಪ್ರತಿಭಟನೆ ನಡೆಸಲು ರೈತರು ಮುಂದಾಗಿದ್ದರು.
Related Articles
Advertisement
ಈ ವೇಳೆ ರೈತರು ಚಿರತೆ ಹಾವಳಿ ಕುರಿತು ತಹಶೀಲ್ದಾರ್ ಅವರಿಗೆ ತಮ್ಮ ಅಳಲನ್ನು ತೋಡಿಕೊಂಡರು.
ನಾವು ಈ ವಿಷಯವನ್ನು ಅರಣ್ಯಾಧಿಕಾರಿಗಳ ತಿಳಿಸಿ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಹೆಸರಿಗೆ ಮಾತ್ರ ಚಿರತೆ ಹಿಡಿಯಲು ಬೋನ್ ಇಟ್ಟಿದ್ದೇವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದ್ದರಿಂದ ನಾವುಗಳು ನಾವು ಮನನೊಂದು ಪ್ರತಿಭಟನೆ ಮಾಡಲು ಸಿದ್ಧರಾಗಿದ್ದೆವು ಎಂದರು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ಮೋಹನಕುಮಾರಿ, ಈ ವ್ಯಾಪ್ತಿಯ ರೈತರ ಸಮಸ್ಯೆಯ ಮನವರಿಕೆಯಾಗಿದೆ. ಚಿರತೆಯ ಉಪಟಳ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ ಚಿರತೆ ದಾಳಿಯಿಂದ ನಷ್ಟಕ್ಕೆ ಒಳಗಾದ ರೈತನಿಗೆ ಎರಡು ಮೂರು ದಿನಗಳಲ್ಲಿ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಈ ವೇಳೆ ರೈತ ಸಂಘದ ಮುಖಂಡರಾದ ವಾಸು, ತೂಬಗೆರೆ ಯುವ ಮುಖಂಡರಾದ ಉದಯ ಆರಾಧ್ಯ, ಸ್ಥಳೀಯ ತೂಬಗೆರೆ ಪಶುವೈದ್ಯಾಧಿಕಾರಿ ರಂಗಪ್ಪ, ಸ್ಥಳೀಯ ಮುಖಂಡರಾದ ಅಂಬರೀಶ್ ಮತ್ತಿತರರಿದ್ದರು.