ನವದೆಹಲಿ: ಚಿರತೆ ತನ್ನ ಬೇಟೆಯೊಂದಿಗೆ ಮರವನ್ನು ಏರುವ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಚಿರತೆಯ ಶಕ್ತಿ ಸಾಮಾರ್ಥ್ಯಕ್ಕೆ ಫುಲ್ ಫಿದಾ ಆಗಿದ್ದಾರೆ.
ಐಎಫ್ ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಎಂಬುವವರು ಈ ವಿಡಿಯೋವನ್ನು ಶೇರ್ ಮಾಡಿದ್ದು, ವ್ಯಾಪಕ ವೈರಲ್ ಆಗಿದೆ. 43 ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ನಲ್ಲಿ ಚಿರತೆಯೊಂದು ಬಲಾಢ್ಯ ಜಿಂಕೆಯೊಂದನ್ನು ಬೇಟೆಯಾಡಿ, ಬಾಯಲ್ಲಿ ಕಚ್ಚಿಹಿಡಿದು ಭಾರೀ ಗಾತ್ರದ ಎತ್ತರದ ಮರವನ್ನು ಏರಿದೆ. ಜಿಂಕೆಯನ್ನು ಲೀಲಾಜಾಲವಾಗಿ ಎತ್ತಿಕೊಂಡು ಹೋದ ಚಿರತೆಯ ಸಾಮಾರ್ಥ್ಯವು ಸಾಮಾಜಿಕ ಜಾಲತಾಣದಲ್ಲಿ ಹಲವರ ಕಣ್ಣರಳಿಸಿದೆ.
Related Articles
ಈ ವಿಡಿಯೋವನ್ನು ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾಗಿದೆ. ಮಾರ್ಚ್ 28ರಂದೇ ಪರ್ವೀನ್ ಕಸ್ವಾನ್ ಬೇರೆ ಕೋನದಲ್ಲಿ ತೆಗೆದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೇ ಅದೇ ಘಟನೆಯ 2ನೇ ಕ್ಲಿಪ್ ಸಮಾಜಿಕ ಜಾಲತಾಣದಲ್ಲಿ ಭಾರೀ ಲೈಕ್ಸ್ ಹಾಗೂ ಶೇರ್ ಪಡೆದಿವೆ.
ಚಿರತೆ ತನ್ನ ಬೇಟೆಯೊಂದಿಗೆ ಭಾರೀ ಗಾತ್ರದ ಮರ ಏರುವ ಅದ್ಭುತ ದೃಶ್ಯವಿದು. ಈ ವಿಡಿಯೋವನ್ನು ಮಾರ್ಚ್ 24 ರಂದು ಸಂಜೆ 6 ಗಂಟೆಗೆ ಕ್ರುಗೇರ್ ರಾಷ್ಟ್ರೀಯ ಉದ್ಯಾನದಲ್ಲಿ ಚಿತ್ರಿಕರಿಸಲಾಗಿದೆ ಎಂದು ಕಸ್ವಾನ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.