ಗಂಗಾವತಿ: ತಾಲೂಕಿನ ಆನೆಗೊಂದಿ ವಾಲೀಕಿಲ್ಲಾ ಮೇಗೋಟ ಆದಿಶಕ್ತಿ ದೇಗುಲದ ಹಿಂಭಾಗದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಆರು ವರ್ಷದ ಗಂಡು ಚಿರತೆಯೊಂದು ಸೋಮವಾರ ಬೆಳಗಿನ ಜಾವ ಸೆರೆಸಿಕ್ಕಿದೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಆನೆಗೊಂದಿ ಸಾಣಾಪೂರ ಹನುಮನಹಳ್ಳಿ ಭಾಗದಲ್ಲಿ ಚಿರತೆಗಳ ಉಪಟಳ ಹೆಚ್ಚಾಗಿದ್ದು ಇಬ್ಬರು ಯುವಕರನ್ನು ಕೊಂದು ಹಾಕಿ ಜಾನುವಾರುಗಳಿಗೆ ಗಾಯಗೊಳಿಸಿತ್ತು. ಅರಣ್ಯ ಇಲಾಖೆಯವರು ಸುಮಾರು 15 ಕಡೆ ಬೋನುಗಳನ್ನಿರಿಸಿದ್ದರು. ಆರು ದಿನಗಳ ಕಾಲ ಆನೆಗಳನ್ನು ಶಿವಮೊಗ್ಗದಿಂದ ಕರೆಸಿ ಕಾರ್ಯಾಚರಣೆ ನಡೆಸಿದರೂ ವಿಫಲವಾಗಿತ್ತು.
ಇದನ್ನೂ ಓದಿ:ದೇಶದ ಏಕತೆಗೆ ಮಾರಕ: ಉದ್ಧವ್ ಠಾಕ್ರೆ ಮಾತಿಗೆ ಯಡಿಯೂರಪ್ಪ ಖಂಡನೆ
ರವಿವಾರ ಹನುಮನಹಳ್ಳಿ ಹತ್ತಿರ ಕತ್ತೆಯೊಂದನ್ನು ಚಿರತೆ ಕೊಂದು ಹಾಕಿದ ಘಟನೆ ನಂತರ ಇದೀಗ ಆದಿಶಕ್ತಿ ದೇಗುಲದ ಬಳಿ ಇರಿಸಿದ್ದ ಬೋನಿನಲ್ಲಿ ಸೋಮವಾರ ಬೆಳಗಿನ ಜಾವ ಸೆರೆ ಸಿಕ್ಕಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.