Advertisement

ಕಡಬ: ವಾಹನದಡಿ ಸಿಲುಕಿ ಚಿರತೆಯನ್ನು ಹೋಲುವ ಕಾಡು ಬೆಕ್ಕು ಸಾವು

10:25 AM Dec 27, 2021 | Team Udayavani |

ಕಡಬ: ಇಲ್ಲಿನ ಹಳೆ ಸ್ಟೇಶನ್ ಬಳಿ ರಸ್ತೆಯಲ್ಲಿ ಚಿರತೆ ಮರಿಯನ್ನು ಹೋಲುವ ಕಾಡು ಬೆಕ್ಕೊಂದು ವಾಹನದಡಿ ಸಿಲುಕಿ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ನಡೆದಿದೆ.

Advertisement

ಅರಣ್ಯ ಇಲಾಖೆಯ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅದು ಚಿರತೆಯನ್ನು ಹೋಲುವ ಕಾಡು ಬೆಕ್ಕು ಜಾತಿಗೆ ಸೇರಿದ ಪ್ರಾಣಿ ಎಂದು ತಿಳಿಸಿದ್ದಾರೆ.

ಪ್ರಾಣಿಯ ಕಳೆಬರವನ್ನು ಕಡಬ ಪಶು ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿದ ಬಳಿಕ ಅದರ ಮರಣೋತ್ತರ ಪರೀಕ್ಷೆ ನಡೆಸಿ ವಿಲೇವಾರಿ ಮಾಡಲಾಗುವುದು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಚಿರತೆಯನ್ನು ಹೋಲುವ ಬೆಕ್ಕುಗಳು ಪಶ್ಚಿಮಘಟ್ಟದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಆದರೆ ಹೆಚ್ಚಿನವರಿಗೆ ಇದರ ಪರಿಚಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next