ಮಂಡ್ಯ: ಎರಡು ಚಿರತೆಗಳು ದಾಳಿ ನಡೆಸಿ 6 ಮೇಕೆಗಳನ್ನು ಎಳೆದೊಯ್ದು ತಿಂದು ಹಾಕಿರುವ ಘಟನೆ ಮಳವಳ್ಳಿ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಮಾದೇಗೌಡ ಎಂಬುವರಿಗೆ ಸೇರಿದ ಮೇಕೆಗಳಾಗಿವೆ. ಸೋಮವಾರ ಮಧ್ಯಾಹ್ನ ಕಾಡಂಚಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ಎರಡು ಚಿರತೆಗಳು ದಾಳಿ ನಡೆಸಿ ಎಳೆದೊಯ್ದಿವೆ.
24 ಮೇಕೆಗಳ ಗುಂಪಲ್ಲಿ 6 ಮೇಕೆಗಳನ್ನು ಚಿರತೆಗಳು ಬಲಿ ಪಡೆದಿವೆ. ಮೇಕೆಗಳನ್ನು ಕಳೆದುಕೊಂಡು ರೈತ ಕಂಗಾಲಾಗಿದ್ದು, ಸುಮಾರು 1.20 ಲಕ್ಷ ರೂ. ನಷ್ಟವಾಗಿದೆ ಎಂದು ಮಾದೇಗೌಡ ಅಳಲು.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಿಕೊಡುವ ಭರವಸೆ ನೀಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು.
ಇದನ್ನೂ ಓದಿ :ಕೊನೆಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಎರಡು ಆಸೆಗಳು ಈಡೇರಲೇ ಇಲ್ಲ!
ಚಿರತೆ ಹಾವಳಿಗಳಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಕೂಡಲೇ ಚಿರತೆಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯಿದ್ದಾರೆ.