Advertisement

Leo Movie: ಲಿಯೋದಿಂದ ಬಂತು ಪ್ರೀತಿಯ ಆಯುಧ

03:23 PM Oct 14, 2023 | Team Udayavani |

ನಟ ವಿಜಯ್‌ ಅಭಿನಯದ “ಲಿಯೋ’ ಚಿತ್ರ ಅಕ್ಟೋಬರ್‌ 19ರಂದು ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, “ಪ್ರೀತಿಯ ಆಯುಧ’ ಎಂಬ ಚಿತ್ರದ ಮೂರನೇ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

Advertisement

ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿರುವ ಈ ಹಾಡಿನಲ್ಲಿ ವಿಜಯ್, ತ್ರಿಷಾ ಮುಂತಾದವರು ಕಾಣಿಸಿಕೊಂಡಿದ್ದು, ಜೆ.ವಿ. ಸುಧಾನ್ಶು ಮತ್ತು ಪ್ರಿಯಾ ಮಾಲಿ ಹಾಡಿದ್ದಾರೆ. ಅನಿರುದ್ಧ್ ರವಿಚಂದರ್‌ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ವರದರಾಜ್‌ ಚಿಕ್ಕಬಳ್ಳಾಪುರ ಸಾಹಿತ್ಯ ರಚಿಸಿದ್ದಾರೆ.

“ಲಿಯೋ’ ಚಿತ್ರವನ್ನು ಸೆವೆನ್‌ ಸ್ಕ್ರೀನ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ಲಲಿತ್‌ ಕುಮಾರ್‌ ನಿರ್ಮಿಸಿದ್ದು, ಲೋಕೇಶ್‌ ಕನಕರಾಜ್‌ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಬಾಲಿವುಡ್‌ ನಟ ಸಂಜಯ್‌ ದತ್‌ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು, ವಿಜಯ್‌ ಮತ್ತು ಸಂಜಯ್‌ ದತ್‌ ಜೊತೆಗೆ ತ್ರಿಷಾ, ಅರ್ಜುನ್‌ ಸರ್ಜಾ, ಪ್ರಿಯಾ ಆನಂದ್‌, ಮನ್ಸೂರ್‌ ಅಲಿ ಖಾನ್‌, ಗೌತಮ್‌ ಮೆನನ್‌, ಮಿಸ್ಕಿನ್‌ ಮುಂತದವರು ಈ ಚಿತ್ರದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next