ಟ್ರಿನಿಡಾಡ್: ಜುಲೈ 18- ವಿಶ್ವ ಕ್ರಿಕೆಟ್ ಗೆ ಶಾಕ್ ನೀಡಿದ ದಿನ. ಮೂವರು ಆಟಗಾರರು ವಿದಾಯ ಹೇಳಿದ ದಿನ. ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ (ಏಕದಿನ ಮಾದರಿಗೆ), ವೆಸ್ಟ್ ಇಂಡೀಸ್ ಮಾಜಿ ನಾಯಕ ದಿನೇಶ್ ರಾಮದೀನ್ ಬಳಿಕ ಇದೀಗ ವೆಸ್ಟ್ ಇಂಡೀಸ್ ನ ಸ್ಪೋಟಕ ಆಟಗಾರ ಲೆಂಡ್ಸ್ ಸಿಮನ್ಸ್ ಅವರು ವಿದಾಯ ಘೋಷಿಸಿದ್ದಾರೆ.
ಸಿಮನ್ಸ್ ಅವರು 16 ವರ್ಷಗಳ ಕಾಲ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು ಎಂಟು ಟೆಸ್ಟ್‌ಗಳು, 68 ಏಕದಿನ ಪಂದ್ಯಗಳು ಮತ್ತು 68 ಟಿ20 ಗಳನ್ನಾಡಿದ್ದಾರೆ, ಎಲ್ಲಾ ಸ್ವರೂಪಗಳಲ್ಲಿ 3763 ರನ್ ಗಳನ್ನು ಗಳಿಸಿದ್ದಾರೆ.
ಫೈಸಲಾಬಾದ್‌ನಲ್ಲಿ ಪಾಕಿಸ್ತಾನದ ವಿರುದ್ಧ 2006 ರಲ್ಲಿ ಸಿಮನ್ಸ್ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದರು. ಆದರೆ ಆ ಪಂದ್ಯದಲ್ಲಿ ಎರಡು ಎಸೆತಗಳಲ್ಲಿ ಡಕ್ ಗೆ ಔಟಾದರು. ಒಟ್ಟಾರೆಯಾಗಿ, ಅವರು ಏಕದಿನ ಕ್ರಿಕೆಟ್ ನಲ್ಲಿ 31.58 ಸರಾಸರಿಯಲ್ಲಿ ಎರಡು ಶತಕಗಳನ್ನು ಒಳಗೊಂಡಂತೆ 1958 ರನ್‌ಗಳನ್ನು ಗಳಿಸಿದರು.
ಇದನ್ನೂ ಓದಿ:ಬಾಲಿವುಡ್ ಇಷ್ಟ, ಆದರೆ ಮಿಸ್ ವರ್ಲ್ಡ್ ಒಂದೇ ಗುರಿ: ಸಿನಿ ಶೆಟ್ಟಿ ಮನದಾಳದ ಮಾತು
ಟೆಸ್ಟ್ ಕ್ರಿಕೆಟ್ ಅಷ್ಟೇನೂ ಸಾಧನೆ ಮಾಡದ ಸಿಮನ್ಸ್ ಅವರು ಟಿ20 ಮಾದರಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 2016 ರ ಟಿ20 ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ವಿರುದ್ಧದ ಸೆಮಿಫೈನಲ್‌ನಲ್ಲಿ 51 ಎಸೆತಗಳಲ್ಲಿ 82 ರನ್ ಸಿಡಿಸುವ ಮೂಲಕ ವೆಸ್ಟ್ ಇಂಡೀಸ್‌ನ ವಿಜಯದಲ್ಲಿ ಸಿಮನ್ಸ್ ಪ್ರಮುಖ ಪಾತ್ರ ವಹಿಸಿದರು. ಒಟ್ಟಾರೆಯಾಗಿ, ಟಿ20 ಕ್ರಿಕೆಟ್ ನಲ್ಲಿ ಸಿಮನ್ಸ್ ಒಂಬತ್ತು ಅರ್ಧಶತಕಗಳೊಂದಿಗೆ 120.80 ಸ್ಟ್ರೈಕ್ ರೇಟ್‌ನಲ್ಲಿ 1527 ರನ್ ಗಳಿಸಿದರು. 2021 ರ T20 ವಿಶ್ವಕಪ್‌ನಲ್ಲಿ ಅವರು ಕೊನೆಯದಾಗಿ ವೆಸ್ಟ್ ಇಂಡೀಸ್ ಅನ್ನು ಪ್ರತಿನಿಧಿಸಿದರು.