Advertisement

ರೈತರ ಆರ್ಥಿಕ ಸುಧಾರಣೆಗೆ ಸಾಲ ನೀಡಿ

10:28 AM Dec 20, 2021 | Team Udayavani |

ಚಿಂಚೋಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ರೈತರಿಗೆ ಇಥೆನಾಲ್‌ ಉತ್ಪಾದಿಸುವುದಕ್ಕಾಗಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಸಹಕಾರಿ ಬ್ಯಾಂಕುಗಳು ರೈತರಿಗೆ ಕೃಷಿ ಮತ್ತು ಬೆಳೆ ಸಾಲ ನೀಡಿದರೆ ಅವರ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಸಹಕಾರ ಸಿಗುತ್ತದೆ ಎಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವ ಹೇಳಿದರು.

Advertisement

ಪಟ್ಟಣದಲ್ಲಿ ರವಿವಾರ 31ಲಕ್ಷ ರೂ.ಗಳಲ್ಲಿ ನಿರ್ಮಿಸಿದ ನೂತನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪಿಕಾರ್ಡ್‌ ಬ್ಯಾಂಕ್‌ಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಸರ್ಕಾರದಿಂದ ಯಾವುದೇ ಹಣ ಬಿಡುಗಡೆ ಮಾಡಲಿಲ್ಲ. ಕೆಕೆಆರ್‌ ಡಿಬಿ ಮತ್ತು ಸಿಎಸ್‌ಆರ್‌ಗೆ ಸಾಕಷ್ಟು ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಸರ್ಕಾರದಿಂದ 7 ಲಕ್ಷ ರೂ. ಮಂಜೂರಿ ಮಾಡಲಾಗಿದೆ. ಹಳೆಯ ಕಟ್ಟಡ ಹರಾಜು ಮಾಡಿ ನೂತನ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಶಾಸಕ ಡಾ| ಅವಿನಾಶ ಜಾಧವ ಮಾತನಾಡಿ, ದೇಶ ಪ್ರಗತಿ ಆಗಬೇಕಾದರೆ ರೈತರ ಕೈ ಬಲಪಡಿಸಬೇಕು. ಅನ್ನದಾತನು ಕೊರೊನಾ ಸಂದರ್ಭದಲ್ಲಿ ಹಗಲಿರುಳು ಕೆಲಸ ಮಾಡಿದ್ದಾರೆ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು 38ಕೋಟಿ ರೂ. ಗಳಲ್ಲಿ ಹರಾಜು ಪಡೆದುಕೊಂಡಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸಕ್ಕರೆ ಕಾರ್ಖಾನೆ ಪ್ರಾರಂಭಿಸುತ್ತಿರುವುದರಿಂದ ರೈತರ ಕನಸು ನನಸಾಗುತ್ತಿದೆ ಎಂದು ಹೇಳಿದರು.

ಪಿಕಾರ್ಡ್‌ ಬ್ಯಾಂಕ್‌ ರೈತರಿಗೆ ಹೆಚ್ಚು ಸಾಲ ನೀಡಿ ಬಲಿಷ್ಠಗೊಳಿಸಬೇಕು. ಅಧಿಕಾರ ಇರುತ್ತದೆ, ಹೋಗುತ್ತದೆ. ಎಲ್ಲರೂ ಪಕ್ಷಭೇದ ಬಿಟ್ಟು ಅಭಿವೃದ್ದಿ ಮಾಡಬೇಕು ಎಂದರು.

Advertisement

ಕ.ರಾ.ಸ. ಕೃಷಿ ಮತ್ರು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ರಾಜ್ಯಾಧ್ಯಕ್ಷ ಡಿ. ಕೃಷ್ಣಕುಮಾರ ಮಾತನಾಡಿ, ಬ್ಯಾಂಕ್‌ ವತಿಯಿಂದ ಕಳೆದ ವರ್ಷ411 ಕೋಟಿ ರೂ. ಸಾಲವನ್ನು ರೈತರಿಗೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 402 ಕೋಟಿ ರೂ. ಸಾಲ ನೀಡುವ ಗುರಿಯಿದೆ. ಚಿಂಚೋಳಿ ಪಿಕಾರ್ಡ್‌ ಬ್ಯಾಂಕಿಗೆ ಒಟ್ಟು 80 ಲಕ್ಷ ರೂ. ನೀಡಲಾಗಿದೆ ಎಂದು ಹೇಳಿದರು.

ನಿರ್ದೇಶಕಿ ಚಂದ್ರಕಲಾ ತಟ್ಟೆಪಳ್ಳಿ ಮಾತ ನಾಡಿದರು. ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಜಗದೀಶಸಿಂಗ್‌ ಠಾಕೂರ, ಗೌತಮ ಪಾಟೀಲ, ಮಲ್ಲಿಕಾರ್ಜುನ ಮಾಳಶೆಟ್ಟಿ, ರಾಯಪ್ಪಗೌಡ ದರ್ಶನಾಪುರ, ಮಡಿವಾಳಪ್ಪ ಮಂಗಲಗಿ, ಜಗದೇವಿ ಗಡಂತಿ, ಶಬ್ಬೀರ ಅಹೆಮದ್‌, ತಹಶೀಲ್ದಾರ್‌ ಅಂಜುಮ ತಬಸ್ಸುಮ್‌, ತಾಪಂ ಇಒ ಅನಿಲಕುಮಾರ ರಾಠೊಡ, ಎಇಇ ಆನಂದ ಕಟ್ಟಿ, ಶಿವಶರಣಪ್ಪ ರೋಡಗಿ, ಉಪಾಧ್ಯಕ್ಷ ಬಸವರಾಜ ಸುಲೇಪೇಟ, ಕಾರ್ಯದರ್ಶಿ ನಾಗಣ್ಣ ಯಲ್ದೆ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಾದ ಮಹಾದೇವಿ ಬೆಳಕೇರಿ, ಜಗನ್ನಾಥ ಸಜ್ಜನ, ಮಹಾದೇವಪ್ಪ ಭೀಮಳ್ಳಿ, ಶಿವಪುತ್ರಪ್ಪ ಸೀಳಿನ್‌ ಇನ್ನಿತರರಿದ್ದರು. ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಜಗದೀಶ ಸಿಂಗ್‌ ರಾಠೂರ ಸ್ವಾಗತಿಸಿದರು, ಉಪಾಧ್ಯಕ್ಷ ಬಸವರಾಜ ಸುಲೇಪೇಟ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next