Advertisement

Leh ಬಸ್‌ ಅಪಘಾತ: 6 ಸಾವು, 22 ಮಂದಿಗೆ ಗಾಯ

02:09 AM Aug 23, 2024 | Team Udayavani |

ಲೇಹ್‌: ಲೇಹ್‌ನಿಂದ ಲಡಾಖ್‌ಗೆ ತೆರಳುತ್ತಿದ್ದ ಬಸ್ಸೊಂದು ನಿಯಂತ್ರಣ ತಪ್ಪಿ 200 ಅಡಿ ಆಳದ ಕಮರಿಗೆ ಬಿದ್ದ ಕಾರಣ 6 ಮಂದಿ ಸಾವನ್ನಪ್ಪಿ, 22 ಜನ ಗಾಯಗೊಂಡಿರುವ ಘಟನೆ ಲೇಹ್‌ ಜಿಲ್ಲೆಯ ಡುರ್ಬಕ್‌ನಲ್ಲಿ ನಡೆದಿದೆ. ಅಪಘಾತಕ್ಕೀಡಾದ ಬಸ್ಸಿನಲ್ಲಿ ಮದುವೆಯೊಂದಕ್ಕೆ ತೆರಳುತ್ತಿದ್ದ ಶಾಲೆಯೊಂದರ ಸಿಬಂದಿ ಇದ್ದರು ಎಂದು ಲೇಹ್‌ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್‌ ಸಿಬಂದಿ ಹೆಲಿಕಾಪ್ಟರ್‌ಗಳ ನೆರವಿನೊಂದಿಗೆ ಗಾಯಾಳುಗಳನ್ನು ಲೇಹ್‌ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next