Advertisement

ಸೀಲ್‌ಡೌನ್‌ ತೆರವಿಗೆ ಶಾಸಕ ಸೂಚನೆ

06:19 AM Jun 07, 2020 | Team Udayavani |

ಬಂಗಾರಪೇಟೆ: ಕೋವಿಡ್‌ 19 ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ, ತಹಶೀಲ್ದಾರ್‌, ಪೊಲೀಸ್‌, ಪುರಸಭೆ ಸಿಬ್ಬಂದಿ, ಜನಪ್ರತಿನಿಧಿಗಳು ಹಾಗೂ ಇತರೆ ಇಲಾಖೆ ನೌಕರರನ್ನು ಶಾಸಕ ಎಸ್‌. ಎನ್‌.ನಾರಾಯಣ ಸ್ವಾಮಿ  ಅಭಿನಂದಿಸಿದರು. ಕೋವಿಡ್‌ 19 ಸೋಂಕಿನಿಂದ ಗುಣಮುಖರಾದ ಪಟ್ಟಣದ ವಿಜಯನಗರ, ಇಂದಿರಾ ಆಶ್ರಯ ಬಡಾವಣೆಯ ಇಬ್ಬರು ಮಹಿಳೆಯರು, ಹೆಣ್ಣು ಮಗುವನ್ನು ಎಸ್‌ಎನ್‌ ಸಿಟಿ ಬಳಿ ಶಾಸಕರು ಸ್ವಾಗತಿಸಿದರು.

Advertisement

ಚೆನ್ನೈ  ತರಕಾರಿ ಮಾರುಕಟ್ಟೆಗೆ ಹೋಗಿ ಬಂದಿದ್ದ ವಿಜಯನಗರದ ಚಾಲಕ, ಆತನ ಅತ್ತೆ ಮತ್ತು ಮಗ, ಇಂದಿರಾ ಆಶ್ರಯ ಬಡಾವಣೆಯ ಚಾಲಕ ಹಾಗೂ ಆತನ ಪತ್ನಿ, ಮಗಳಿಗೆ ಕೋವಿಡ್‌ 19 ಸೋಂಕು ಬಂದಿತ್ತು. ಇವರು ವಾಸವಾಗಿದ್ದ ಎರಡೂ  ಪ್ರದೇಶಗಳನ್ನೂ ಸೀಲ್‌ ಡೌನ್‌ ಮಾಡಲಾಗಿತ್ತು. ಇದರಿಂದ ಇತರೆ  ಜನಸಾಮಾನ್ಯರಿಗೆ ಓಡಾಟ ನಡೆಸಲು ತೀವ್ರ ಕಷ್ಟಕರವಾಗಿದ್ದರಿಂದ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪಟ್ಟಣದಲ್ಲಿ ಕೋವಿಡ್‌ 19 ಸೋಂಕು  ಕಾಣಿಸಿಕೊಂಡಿದ್ದ 7 ಜನರಲ್ಲಿ 6 ಮಂದಿ ಗುಣ ಮುಖರಾಗಿದ್ದಾರೆ. ಕೋವಿಡ್‌ 19 ಬಗ್ಗೆ ಎಚ್ಚರಿಕೆ ಇದ್ದರೆ ಸಾಕು, ಭಯ ಮತ್ತು ಆತಂಕ ಪಡುವ ಅವಶ್ಯಕತೆ ಇಲ್ಲ ಎಂಬುದನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ರೀತಿ  ಸ್ವಾಗತಿಸುತ್ತಿರುವುದಾಗಿ  ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್‌, ಕೋವಿಡ್‌- 19 ಬಂಗಾರಪೇಟೆ ಉಸ್ತುವಾರಿ ನಾರಾಯಣಸ್ವಾಮಿ,

ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪುಣ್ಯಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ  ಕೆ.ಚಂದ್ರಾರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ವಿ.ಶ್ರೀಧರ್‌, ಸದಸ್ಯರಾದ ಕಪಾಲಿ ಶಂಕರ್‌, ಸಾಧಿಕ್‌ ಪಾಷಾ, ಆರೋಗ್ಯ ನಿರೀಕ್ಷಕರಾದ ರವಿ, ಗೋವಿಂದರಾಜು, ಸಿಎಒ ವೆಂಕಟೇಶ್‌, ಸಂತೋಷ್‌, ಸೋಮಣ್ಣ, ಆನಂದ್‌,  ಹರೀಶ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next