Advertisement

ವಿಧಾನ ಪರಿಷತ್ತಿನಲ್ಲಿ ನೀಲಿ ಚಿತ್ರ ವೀಕ್ಷಣೆ? ಸ್ಪಷ್ಟನೆ ನೀಡಿದ ಕಾಂಗ್ರೆಸ್ ಸದಸ್ಯ!

02:39 PM Jan 29, 2021 | Team Udayavani |

ಬೆಂಗಳೂರು: ವಿಧಾನ ಪರಿಷತ್ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ನೀಲಿ ಚಿತ್ರ ವೀಕ್ಷಣೆ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ ಪ್ರಕಾಶ್ ರಾಥೋಡ್ ಈ ವಿಚಾರವನ್ನು ಅಲ್ಲಗಳೆದಿದ್ದು, ಕೇವಲ ಮೆಸೇಜ್ ಡಿಲೀಟ್ ಮಾಡುತ್ತಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಪ್ರಕಾಶ್ ರಾಥೋಡ್ ಅವರು ಕಲಾಪದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ್ದಾರೆಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಕುರಿತು ಸ್ಪಷ್ಟಪಡಿಸಿದ ಅವರು, ನಾನು ಅಂತಹದ್ದೇನು ನೋಡಲಿಲ್ಲ. ಮೊಬೈಲ್ ನಲ್ಲಿ ಕೆಲವು ಮೆಸೇಜ್ ಗಳು ಹೆಚ್ಚಾಗಿದ್ದವು. ಅದನ್ನು ಡಿಲೀಟ್ ಮಾಡುತ್ತಿದ್ದೆ. ಅಂತಹ ಕೆಲಸವನ್ನ ನಾನು ಮಾಡುವುದಿಲ್ಲ. ದಯಮಾಡಿ ತಪ್ಪು ಮಾಹಿತಿ ಕೊಡಬಾರದು ಎಂದಿದ್ದಾರೆ.

ಇದನ್ನೂ ಓದಿ:ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ..! ಪ್ರಯಾಣದ ವೇಳೆ ಕಳ್ಳತನವಾದಲ್ಲಿ ಪರಿಹಾರ

ನಾನು ಯಾವುದೇ ಚಿತ್ರವನ್ನ ನೋಡಿಲ್ಲ. ದಿನ ನಿತ್ಯ ಸಾವಿರಾರು ಮೆಸೇಜ್ ಬರುತ್ತದೆ, ನನ್ನ ಮೊಬೈಲ್ ನಲ್ಲಿ 15 ಸಾವಿರ ಮೆಸೇಜ್ ಇತ್ತು. ಅವುಗಳನ್ನು ಅಳಿಸುತ್ತಿದ್ದೆ. ಮೊಬೈಲ್ ನಲ್ಲಿ ಸ್ಟೋರೇಜ್ ಜಾಸ್ತಿಯಾಗಿದೆ. ಜನರಲ್ ಆಗಿ ವಿಡಿಯೋಗಳು ಬಂದಿವೆ. ಅದನ್ನು ಡಿಲೀಟ್ ಮಾಡುತ್ತಿದ್ದೆ ಎಂದಿದ್ದಾರೆ.

ಇದನ್ನೂ ಓದಿ: Inside Story: ಅಂದು ದಿಲ್ಲಿಯಲ್ಲಿ SI ಆಗಿದ್ದ ಟಿಕಾಯತ್ ರೈತ ನಾಯಕನಾಗಿ ಬೆಳೆದಿದ್ದು ಹೇಗೆ?

Advertisement

ನಾನು ಅಶ್ಲೀಲ ವಿಡಿಯೋ ನೋಡಲೇ ಇಲ್ಲಾ. ಕೆಲವೊಂದು ಫೋಟೋ, ದೃಶ್ಯ ಬಂದಿರಬಹುದು. ಆದರೆ, ನಾನು ಅಂತಹ ವಿಡಿಯೋವನ್ನು ನೋಡಿಲ್ಲ ಎಂದು ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next