Advertisement
ಹೌದು ಕನ್ನಡ, ತಮಿಳು, ಮಲಯಾಳಂ, ತೆಲುಗು ಚಿತ್ರರಂಗದಲ್ಲಿ ಮನೆಮಾತಾಗಿರುವ ಮನೋರಮಾ 1985ರಲ್ಲಿ 1000 ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹಿನ್ನೆಲೆಯಲ್ಲಿ ಗಿನ್ನೆಸ್ ವಿಶ್ವ ದಾಖಲೆ ಪುಟಕ್ಕೆ ಸೇರಸಲ್ಪಟ್ಟ ಹೆಗ್ಗಳಿಕೆ ಇವರದ್ದಾಗಿದೆ. 2002ನೇ ಇಸವಿಯಲ್ಲಿ ಪದ್ಮ ಶ್ರೀ, ನ್ಯಾಷನಲ್ ಫಿಲ್ಮ್ ಅವಾರ್ಡ್, 1995ರಲ್ಲಿ ಸಿನಿಮಾ ಕ್ಷೇತ್ರದಲ್ಲಿನ ಜೀವಮಾನ ಸಾಧನೆಯ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಪಡೆದಿದ್ದ ಹೆಮ್ಮೆ ಮನೋರಮಾ ಅವರದ್ದು. ನಟಿ ಮನೋರಮಾ ಕನ್ನಡದಲ್ಲಿ ಪ್ರೇಮಲೋಕ, ಪ್ರೇಮಾನುಬಂಧ, ಗೆದ್ದವಳು ನಾನೇ, ದೇವರ ದುಡ್ಡು, ಹೆಣ್ಣು ಸಂಸಾರದ ಕಣ್ಣು, ದೇವರ ಗುಡಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು.
ಅಂದಿನ ಮದ್ರಾಸ್ ಪ್ರಾಂತ್ಯದಲ್ಲಿದ್ದ ತಂಜಾವೂರು ಜಿಲ್ಲೆಯಲ್ಲಿ ಗೋಪಿಶಾಂತಾ ಜನಿಸಿದ್ದು. ವಿಧಿ ವಿಪರ್ಯಾಸ ಎಂಬಂತೆ ಹೆಣ್ಣು ಮಗು ಜನಿಸಿದ್ದಕ್ಕೆ ಮಲತಂದೆ ಅಸಮಾಧಾನಗೊಂಡು, ಹೆಂಡತಿಯನ್ನು ಮನೆಯಿಂದ ಹೊರಗೆ ಹಾಕಿಬಿಟ್ಟಿದ್ದ! ಪುಟ್ಟ ಮಗು ಗೋಪಿಶಾಂತಾಳನ್ನು ಎದೆಗವುಚಿಕೊಂಡು ಊರೂರು ಸುತ್ತಿ ಮನೆ ಕೆಲಸ ಮಾಡಿಕೊಂಡು ಬದುಕು ಸಾಗಿಸ ತೊಡಗಿದ್ದರು. ನಂತರ ಬಡತನದಿಂದಾಗಿ ಈ ಕುಟುಂಬ ಪಾಲ್ಲತ್ತೂರ್ ನಿಂದ ಕಾರೈಕುಡಿಗೆ ತೆರಳುತ್ತದೆ. ಈ ಸಂದರ್ಭದಲ್ಲಿ ತಾಯಿ ರಕ್ತ ವಾಂತಿ ಮಾಡತೊಡಗಿದ್ದರು.
Related Articles
Advertisement
ಮನೋರಮಾ ಮತ್ತು ಜಯಲಲಿತಾ ಒಟ್ಟು 25 ಸಿನಿಮಾಗಳಲ್ಲಿ ನಟಿಸಿದ್ದರು. ಅಂದಿನ ಸ್ಟಾರ್ ನಟರಾದ ಶಿವಾಜಿ ಗಣೇಶನ್, ನಾಟ್ಯ ರಾಣಿ ಪದ್ಮಿನಿ, ಹಾಸ್ಯ ನಟ ನಾಗೇಶ್ ಜೊತೆ 50 ಸಿನಿಮಾಗಳಲ್ಲಿ, ಚೋ ರಾಮಸ್ವಾಮಿ ಜೊತೆ 20 ಸಿನಿಮಾ ಹಾಗೂ ಇವೆಲ್ಲಕ್ಕಿಂತ ಹೆಚ್ಚಾಗಿ ಐದು ಮುಖ್ಯಮಂತ್ರಿಗಳ ಜೊತೆ ನಟಿಸಿದ್ದ ಖ್ಯಾತಿ ಮನೋರಮಾ ಅವರದ್ದಾಗಿದೆ. ಚಿತ್ರ ಕಥೆಗಾರ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾ ದೊರೈ, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಕರುಣಾನಿಧಿ, ಎಂಜಿ ರಾಮಚಂದ್ರನ್, ಜೆ. ಜಯಲಲಿತಾ ಹಾಗೂ ಆಂಧ್ರ ಪ್ರದೇಶದ ಮಾಜಿ ಸಿಎಂ ಎನ್ ಟಿ ರಾಮರಾಮ್ ಜೊತೆ ಮನೋರಮಾ ನಟಿಸಿದ್ದರು. ಮನೋರಮಾ ಮತ್ತು ಜಯಲಲಿತಾ ಆಪ್ತ ಗೆಳೆತಿಯರಾಗಿದ್ದರು. 1996ರಲ್ಲಿ ನಡೆದ ಚುನಾವಣೆಯಲ್ಲಿ ರಜನಿಕಾಂತ್ ವಿರುದ್ಧ ಪ್ರಚಾರ ಮಾಡಿ ಜಯಲಲಿತಾ ಪರವಾಗಿ ಮತಚಲಾಯಿಸುವಂತೆ ಪ್ರಚಾರ ಭಾಷಣ ಮಾಡಿದ್ದರು!
ನಾಟಕ ಕಂಪನಿಯ ಮ್ಯಾನೇಜರ್ ಎಸ್ ಎಂ ರಾಮನಾಥನ್ ಪ್ರೇಮಪಾಶದಲ್ಲಿ ಬಿದ್ದ ಮನೋರಮಾ 1964ರಲ್ಲಿ ಸತಿಪತಿಗಳಾಗಿದ್ದರು. ಸಂಸಾರ ನೌಕೆಯಲ್ಲಿ ತೇಲಿದ್ದ ದಂಪತಿಗೆ ಮಗ(ಭೂಪತಿ) ಜನಿಸಿದ್ದ. ಆದರೆ ಇಬ್ಬರ ಖುಷಿ ಹೆಚ್ಚು ಬಾಳಿಕೆ ಬರಲಿಲ್ಲ..1966ರಲ್ಲಿ ಮನೋರಮಾ ಮತ್ತು ರಾಮನಾಥನ್ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಈಗ ಮಗ ಕೂಡಾ ಚಿತ್ರರಂಗದಲ್ಲಿದ್ದಾನೆ. ನನಗೆ ಯಾವುದರ ಬಗ್ಗೆಯೂ ವಿಷಾಧವಿಲ್ಲ. ನನಗೆ ದೇವರು ಈ ಜನ್ಮವನ್ನು ಕರುಣಿಸಿದ್ದಾನೆ. ಒಂದು ವೇಳೆ ಮತ್ತೊಂದು ಜನ್ಮವಿದ್ದರೂ ಕೂಡಾ ಮನೋರಮಾ ಆಗಿಯೇ ಹುಟ್ಟುಬೇಕೆಂಬುದು ನನ್ನ ಆಸೆ. ನನಗೆ ಮತ್ತೆ ಈ ಜೀವನ, ಈ ಜನರ ಸುತ್ತಲೂ ಇರಬೇಕೆಂಬುದೇ ನನ್ನ ಇಚ್ಛೆ ಎಂದು 2015ರಲ್ಲಿ ತಮ್ಮ ಕೊನೆಯ ಸಂದರ್ಶನದಲ್ಲಿ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದರು. ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಮನೋರಮಾ ತಮ್ಮ 78ನೇ ವಯಸ್ಸಿನಲ್ಲಿ 2015ರ ಅಕ್ಟೋಬರ್ 10ರಂದು ವಿಧಿವಶರಾಗಿದ್ದರು. ಆದರೂ ಆಚಿಯ ಹಾಸ್ಯ ನಟನೆ, ತಾಯಿ ಪಾತ್ರದ ಮೂಲಕ ಇಂದಿಗೂ ಚಿರಸ್ಥಾಯಿಯಾಗಿದ್ದಾರೆ.